ಲುಂಗಿ ಬೀಸುತ್ತಾ, ಫುಲ್ ಸೌತ್ ಫೀಲ್ ಕೊಟ್ಟು, ಫಸ್ಟ್ ಲುಕ್ ನಲ್ಲಿ ರಾಜಾ ಸಾಬ್ ಆಗಿ ಬಂದ ಪ್ರಭಾಸ್

The Raja Saab: ಪ್ರಭಾಸ್ ಲುಕ್ ನೋಡಿದರೆ ಸ್ಟ್ರೀಟ್ ಕಿಂಗ್ ಟೈಪ್ ರೋಲ್ ಮಾಡ್ತಾರಂತೆ ಅನ್ನಿಸುತ್ತೆ... ಅವರ ಆಟಿಟ್ಯೂಡ್ ಕೂಡ ರಾಜಾ ಸಾಬ್ ಅಂತೆ ಇದ್ದು, ಅದಕ್ಕೆ ‘ದಿ ರಾಜಾ ಸಾಬ್’ ಅಂತನೇ ಟೈಟಲ್ ಇಟ್ಟಿದ್ದಾರೆ.

Written by - Zee Kannada News Desk | Last Updated : Jan 15, 2024, 10:45 AM IST
  • ಮಕರ ಸಂಕ್ರಾಂತಿಯಂದು ಸೌತ್ ಸ್ಟಾರ್ ಪ್ರಭಾಸ್ ಅಭಿಮಾನಿಗಳಿಗೆ ಶುಭೋದಯ ಕೋರಿದ್ದಾರೆ.
  • ಪ್ರಭಾಸ್ ತಮ್ಮ ಮುಂಬರುವ ಚಿತ್ರ 'ರಾಜಾ ಸಾಬ್' ಫಸ್ಟ್ ಲುಕ್ ಅನ್ನು ಜನವರಿ 15 ರಂದು ಬೆಳಿಗ್ಗೆ 7.09 ಕ್ಕೆ ಬಿಡುಗಡೆ ಮಾಡಿದರು.
  • ಪ್ರಭಾಸ್ ಅವರ ಈ ಚಿತ್ರದ ಲುಕ್ ಸಂಪೂರ್ಣ ಸೌತ್ ಫೀಲ್ ನೀಡುತ್ತದೆ.
ಲುಂಗಿ ಬೀಸುತ್ತಾ, ಫುಲ್ ಸೌತ್ ಫೀಲ್ ಕೊಟ್ಟು, ಫಸ್ಟ್ ಲುಕ್ ನಲ್ಲಿ ರಾಜಾ ಸಾಬ್ ಆಗಿ ಬಂದ ಪ್ರಭಾಸ್ title=

Prabhas New movie 2024: ಮಕರ ಸಂಕ್ರಾಂತಿಯಂದು ಸೌತ್ ಸ್ಟಾರ್ ಪ್ರಭಾಸ್ ತಮ್ಮ ಅಭಿಮಾನಿಗಳಿಗೆ ಶುಭೋದಯ ಕೋರಿದ್ದಾರೆ. ಇದೀಗ ಪ್ರಭಾಸ್ ತಮ್ಮ ಮುಂಬರುವ ಚಿತ್ರ 'ರಾಜಾ ಸಾಬ್' ಫಸ್ಟ್ ಲುಕ್ ಅನ್ನು ಜನವರಿ 15 ರಂದು ಬೆಳಿಗ್ಗೆ 7.09 ಕ್ಕೆ ಬಿಡುಗಡೆ ಮಾಡಿದರು. ಪ್ರಭಾಸ್ ಅವರ ಈ ಚಿತ್ರದ ಲುಕ್ ಸಂಪೂರ್ಣ ಸೌತ್ ಫೀಲ್ ನೀಡುತ್ತದೆ. ಸೌತ್ ಸಿನಿಮಾ ಗೊತ್ತಿರುವ ಡೌನ್ ಟು ಅರ್ಥ್ ಸ್ಟೋರಿಗಾಗಿ ಅವರು ಹೊರಟಿದ್ದಾರಂತೆ.

ಸದ್ಯ, ಲುಕ್ ಬಗ್ಗೆ ಮಾತನಾಡುವುದಾದರೆ, ನಾವು ಹೇಳಿದಂತೆ, ಇದು ಸಂಪೂರ್ಣ ದಕ್ಷಿಣದ ಅನುಭವವನ್ನು ಹೊಂದಿದೆ ಏಕೆಂದರೆ ಈ ಪೋಸ್ಟರ್‌ನಲ್ಲಿ ಪ್ರಭಾಸ್ ಲುಂಗಿ ಬೀಸುತ್ತಿರುವುದು ಕಂಡುಬಂದಿದೆ. ಪ್ರಭಾಸ್ ಹಿನ್ನಲೆಯಲ್ಲಿ ರಸ್ತೆ ಮತ್ತು ಪಟಾಕಿಗಳನ್ನು ಕಾಣಬಹುದು, ಇದರ ಮುಂದೆಯ ಪ್ರಭಾಸ್‌ ಸಾಗುತ್ತಿದ್ದಾರೆ. ಈ ಸಮಯದಲ್ಲಿ ಅವರು ತನ್ನ ಲುಂಗಿಯನ್ನು ಕಟ್ಟಲು ಪ್ರಯತ್ನಿಸುತ್ತಿದ್ದಾರೆ, ಇದರ ಜೊತೆಗೆ ಗಾಳಿಯಲ್ಲಿ ಬೀಸುತ್ತಿರುವಂತೆ ಕಾಣಬಹುದು. ಪ್ರಭಾಸ್ ಅವರ ಲುಕ್ ನೋಡಿದರೆ ಅವರು ಗಲಿ ಕಾ ಬಾದ್‌ ಶಾ ಮಾದರಿಯ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ ಊಹಿಸಬಹುದು. ಆದುದರಿಂದಲೇ ಅವರಿಗೆ ರಾಜಾ ಸಾಬ್ ಎಂಬ ಬಿರುದು ನೀಡಲಾಗದೆ ಎನ್ನಬಹುದು.

 
 
 
 

 
 
 
 
 
 
 
 
 
 
 

A post shared by Prabhas (@actorprabhas)

ಇದನ್ನೂ ಓದಿ: Salaar: ಬ್ಲ್ಯಾಕ್ ಅಂಡ್ ಬ್ಲ್ಯಾಕ್‌ ಕಾನ್ಸೆಪ್ಟ್‌ನಲ್ಲಿ ಸಲಾರ್ ಸಕ್ಸಸ್ ಮೀಟ್!

ಇನ್ನೂ ‘ಸಲಾರ್’ ಚಿತ್ರದಿಂದ ನಟ ಪ್ರಭಾಸ್‌ಗೆ  ದೊಡ್ಡ ಗೆಲುವು ಸಿಕ್ಕಿದೆ. ಸಲಾರ್‌ ಪಾನ್‌ ಇಂಡಿಯಾ ಮಟ್ಟದಲ್ಲಿ ಗೆಲುವು ಸಾಧಿಸುವುದರ ಜೊತೆಗೆ ಬಾಕ್ಸ್‌ ಆಫಿಸ್‌ನಲ್ಲಿಯೂ ಕೊಳ್ಳೆ ಹೊಡೆದಿದೆ. ಈಗ ಪ್ರಭಾಸ್ ಅವರು ನಿರ್ದೇಶಕ ಮಾರುತಿ ಜೊತೆ ಕೈ ಜೋಡಿಸುತ್ತಿದ್ದಾರೆ. ಸಂಕ್ರಾಂತಿ ಸಂದರ್ಭದಲ್ಲಿ ಈ ಚಿತ್ರದ ಫಸ್ಟ್​ ಲುಕ್ ಹಾಗೂ ಟೈಟಲ್ ರಿವೀಲ್ ಮಾಡಿದ್ದು, ‘ದಿ ರಾಜಾ ಸಾಬ್’ ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಈ ಪೋಸ್ಟರ್ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ. ‘ದಿ ರಾಜಾ ಸಾಬ್’ ಶೀರ್ಷಿಕೆ ಗಮನ ಸೆಳೆಯುತ್ತಿದ್ದು, ರೊಮ್ಯಾಂಟಿಕ್ ಹಾರರ್ ಶೈಲಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ ಅನ್ನೋದು ವಿಶೇಷ. ಪ್ರಯೋಗಾತ್ಮಕ ಸಿನಿಮಾದಲ್ಲಿ ನಟಿಸಲು ಪ್ರಭಾಸ್ ಕೂಡ ಉತ್ಸುಕರಾಗಿದ್ದಾರೆ. ಈ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಮೂಲಕ ಟಿಜಿ ವಿಶ್ವ ಪ್ರಸಾದ ಅವರು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: Kalki 2898 AD: ರಿಲೀಸ್‌ಗೂ ಮುನ್ನವೇ ಕಲ್ಕಿ ಟೀಸರ್ ವಿಡಿಯೋ ಲೀಕ್.. ಚಿತ್ರದಲ್ಲಿ ಪ್ರಭಾಸ್‌ ಪಾತ್ರ ಇದೇ!

ಇತ್ತ ಪ್ರಭಾಸ್ ಪೋಸ್ಟ್ ಬಂದಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಂತಸದ ಅಲೆ ಎದ್ದಿದೆ. ಪ್ರಭಾಸ್ ಅಣ್ಣನ ಪೋಸ್ಟ್ ಗೆ ಅಭಿಮಾನಿಗಳು ಬೆಳಗ್ಗೆಯಿಂದಲೇ ಕಾಮೆಂಟ್ ಮಾಡಲು ಆರಂಭಿಸಿದ್ದರು. ಬಹಳ ದಿನಗಳ ನಂತರ ಪ್ರಭಾಸ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಪ್ರಭಾಸ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದರ ಜೊತೆಗೆ ಈ ಸಿನಿಮಾ ತೆಲುಗು ಮಾತ್ರವಲ್ಲದೇ, ಹಿಂದಿ, ತಮಿಳು, ಕನ್ನಡ, ಮಾಲಿಯಾಳಂ ಸೇರಿ ಒಟ್ಟು ಐದು ಭಾಷೆಗಳಲ್ಲಿ ಬರಲಿದ್ದು, ಪಾನ್‌ ಇಂಡಿಯಾ ಮಟ್ಟಕ್ಕೆ ರಿಲೀಸ್‌ ಮಾಡೋ ಪ್ಲಾನ್‌ ಕೂಡ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News