4 ದಿನದಲ್ಲಿ ₹500 ಕೋಟಿ..! ರಾಜಮೌಳಿ RRR ಹೊಸ ದಾಖಲೆ..!

Written by - Malathesha M | Last Updated : Mar 29, 2022, 08:22 PM IST
  • ರಾಜಮೌಳಿ..ಈ ಹೆಸರು ಕೇಳಿದ್ರೆ ಸಾಕು ಭಾರತೀಯರು ಮಾತ್ರವಲ್ಲ, ಜಗತ್ತಿನಾದ್ಯಂತ ಸಿನಿಮಾ ಪ್ರೇಮಿಗಳ ಕಿವಿ ನೆಟ್ಟಗಾಗುತ್ತದೆ.
 4 ದಿನದಲ್ಲಿ ₹500 ಕೋಟಿ..! ರಾಜಮೌಳಿ RRR ಹೊಸ ದಾಖಲೆ..! title=

ರಾಜಮೌಳಿ ಸಿನಿಮಾ ಅಂದ್ರೆನೆ ದೊಡ್ಡ ಸರ್ಪ್ರೈಸ್‌ ಹಾಗೂ ಕುತೂಹಲಗಳ ಸಂತೆ.ರಾಜಮೌಳಿ ಯಾವುದೇ ಸಿನಿಮಾ ಡೈರೆಕ್ಷನ್ ಮಾಡಿದ್ರೂ ದೊಡ್ಡ ಸೌಂಡ್‌ ಮಾಡೇ ಮಾಡುತ್ತೆ. ಹೀಗೆ ಬಾಹುಬಲಿ ಬಳಿಕ ರಾಜಮೌಳಿ ಮತ್ತೆ ದೊಡ್ಡ ಕಂಬ್ಯಾಕ್‌ ಮಾಡಿದ್ದಾರೆ.ರಾಜಮೌಳಿ ನಿರ್ದೇಶನದ ಬಹು ತಾರಾಗಣದ RRR ಸಿನಿಮಾ ಬಾಕ್ಸ್‌ ಆಫಿಸ್‌ ಕೊಳ್ಳೆ ಹೊಡೆಯುತ್ತಿದೆ.  

ರಾಜಮೌಳಿ..ಈ ಹೆಸರು ಕೇಳಿದ್ರೆ ಸಾಕು ಭಾರತೀಯರು ಮಾತ್ರವಲ್ಲ, ಜಗತ್ತಿನಾದ್ಯಂತ ಸಿನಿಮಾ ಪ್ರೇಮಿಗಳ ಕಿವಿ ನೆಟ್ಟಗಾಗುತ್ತದೆ.ಯಾಕಂದ್ರೆ ತಮ್ಮ ಸಿನಿಮಾಗಳ ಮೂಲಕ ರಾಜಮೌಳಿ ಕ್ರಿಯೇಟ್‌ ಮಾಡುವ ಹವಾ ಅಂತಹದ್ದು. ಸದ್ಯಕ್ಕೆ RRR ಸಿನಿಮಾ ಕೂಡ ಅಂತಹದ್ದೇ ಹವಾ ಎಬ್ಬಿಸಿದೆ. ದಾಖಲೆಗಳನ್ನ ಧೂಳ್‌ ಧೂಳ್‌ ಮಾಡುವ ಜೊತೆಗೆ ಹೊಸ ರೆಕಾರ್ಡ್‌ ಕೂಡ ಕ್ರಿಯೇಟ್‌ ಮಾಡಿದೆ. 

ಇದನ್ನೂ ಓದಿ: Garadi Shoot In Badami: ಬಾದಾಮಿಯಲ್ಲಿ ಯೋಗರಾಜ್ ಭಟ್ಟರ "ಗರಡಿ"

ಸ್ಟಾರ್‌ಗಳ ಸಾಥ್..!

ಅಷ್ಟಕ್ಕೂ ಮೊದಲ ದಿನವೇ 100 ಕೋಟಿ ಕ್ಲಬ್‌ಗೆ ಸೇರಿದ್ದ RRR ಸಿನಿಮಾ ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನ ನೂರಾರು ಕೋಟಿಗಳ ಲೆಕ್ಕದಲ್ಲಿ ಏರಿಸಿಕೊಳ್ಳುತ್ತಿದೆ. ಇದೀಗ ಕೇವಲ ನಾಲ್ಕೇ ದಿನಕ್ಕೆ ಮತ್ತೊಂದು ಮಹಾನ್‌ ದಾಖಲೆ ಬರೆದಿದೆ ರಾಜಮೌಳಿ ನಿರ್ದೇಶನದ  RRR ಸಿನಿಮಾ. ಇದರ ಜೊತೆಗೆ ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ರಾಮ್‌ ಚರಣ್‌ (Ram Charan) ತೇಜಾ ಸಾಥ್‌ ನೀಡಿರುವುದು ಸಿನಿಮಾ ಮತ್ತಷ್ಟು ಕಳೆಗಟ್ಟುವಂತೆ ಮಾಡಿದೆ.ಇಂಡಿಯನ್‌ ಸಿನಿ ಇಂಡಸ್ಟ್ರಿಯಲ್ಲಿ ರಾಜಮೌಳಿ ಹೆಸರು ಬಿಗ್‌ ಬಜೆಟ್‌ ಸಿನಿಮಾಗಳ ಜೊತೆ ಬೆರೆತು ಹೋಗಿದೆ.ಅಷ್ಟು ಮಾತ್ರವಲ್ಲ, ರಾಜಮೌಳಿ ತಮ್ಮ ಸಿನಿಮಾಗಳಿಗೆ ಹೂಡಿಕೆ ಮಾಡುವ ದುಡ್ಡನ್ನ ಬಡ್ಡಿ ಸಮೇತ ವಸೂಲಿ ಮಾಡ್ತಾರೆ. ಈ ಸತ್ಯವನ್ನ ಬಹುಬಲಿ ಸಮೇತ ಹಲವು ಸಿನಿಮಾಗಳಲ್ಲಿ ಭಾರತೀಯರು ಕಣ್ತುಂಬಿಕೊಂಡಿದ್ದಾರೆ.ಇದೀಗ RRR ಸಿನಿಮಾ ಕೂಡ ಈ ಮಾತನ್ನು ಸತ್ಯ ಮಾಡಿದ್ದು, ಕೇವಲ 4 ದಿನದಲ್ಲಿ ಸುಮಾರು 500 ಕೋಟಿ ರೂಪಾಯಿ ಪೈಸಾ ವಸೂಲಿ ಮಾಡಿದೆಯಂತೆ RRR.

ಗಲ್ಲಾ ಪೆಟ್ಟಿಗೆ ಉಡೀಸ್..!

ಅಂದಹಾಗೆ ರಿಲೀಸ್‌ಗೆ ಮೊದಲೇ ದೊಡ್ಡ ಸೌಂಡ್ ಮಾಡಿದ್ದ ರಾಜಮೌಳಿ ನಿರ್ದೇಶನದ RRR ಸಿನಿಮಾ‌, ರಿಲೀಸ್‌ ಆದ ಮೇಲೂ ಇಂತಹದ್ದೇ ಗತ್ತು ಉಳಿಸಿಕೊಂಡಿದೆ. ಅದು ಎಷ್ಟರಮಟ್ಟಿಗೆ ಎಂದರೆ ಈಗಲೂ ಸಿನಿಮಾ ಪ್ರೇಮಿಗಳು ಥಿಯೇಟರ್‌ಗೆ ಮುಗಿಬೀಳುತ್ತಿದ್ದಾರೆ. ಹೀಗಾಗಿಯೇ RRR ಸಿನಿಮಾ‌ ಭರ್ಜರಿ ಗಳಿಕೆ ಮಾಡುತ್ತಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

ಇದನ್ನೂ ಓದಿ: SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಹೃದಯಾಘಾತ, ವಿದ್ಯಾರ್ಥಿನಿ ಸಾವು

ತೆಲಂಗಾಣ ಹಾಗೂ ಆಂಧ್ರದಲ್ಲಿ ಮಾತ್ರವಲ್ಲದೆ ದೇಶಾದ್ಯಂತ RRR ಸಿನಿಮಾ‌ ಗಳಿಗೆ ದೊಡ್ಡ ಮಟ್ಟದಲ್ಲಿದೆ. ದೇಶದ ಮೂಲೆ ಮೂಲೆಯಲ್ಲೂ RRR ಸಿನಿಮಾ‌ ಸಖತ್‌ ಸೌಂಡ್‌ ಮಾಡುತ್ತಿದೆ. ಬಿಡುಗಡೆಯಾಗಿ ಇನ್ನೇನು 1 ವಾರ ಕಳೆಯುವ ಸನಿಹದಲ್ಲೀದ್ದರೂ RRR ಸಿನಿಮಾ‌ ಸೌಂಡ್‌ ಮಾತ್ರ ಕಡಿಮೆ ಆಗಿಲ್ಲ. 

ಒಟ್ಟಾರೆ ಹೇಳೋದಾದ್ರೆ RRR ಅದೆಷ್ಟೋ ದಾಖಲೆಗಳನ್ನ ಈಗಾಗಲೇ ಉಡೀಸ್‌ ಮಾಡಿದ್ದು, ಮತ್ತಷ್ಟು ದಾಖಲೆಗಳನ್ನ ಪುಡಿ ಪುಡಿ ಮಾಡುವ ಮುನ್ಸೂಚನೆ ನೀಡಿದೆ. ಅದರಲ್ಲೂ ಬಾಕ್ಸ್‌ ಆಫಿಸ್‌ ವಿಚಾರದಲ್ಲಿ RRR ಆಡಿದ್ದೇ ಆಟ. ದಿನದಿಂದ ದಿನಕ್ಕೆ RRR ಚಿತ್ರದ ಗಳಿಕೆ ದೊಡ್ಡ ಮಟ್ಟದಲ್ಲಿ ಏರಿಕೆ ಕಾಣ್ತಿರೋದು ಸಿನಿಮಾ ತಂಡಕ್ಕೆ ಮತ್ತಷ್ಟು ಹುರುಪು ನೀಡುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News