ಸೌತ್ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ಸಹ ನಿಬ್ಬೆರಗಾಗುತ್ತಿದೆ. ಇದಕ್ಕೆ ಕಾರಣ ಅಂತಹ ಸಿನಿಮಾಗಳನ್ನು ದಕ್ಷಿಣ ಭಾರತದ ಸಿನಿರಂಗದವರು ತಯಾರಿಸುತ್ತಿರುವುದು. ಆರ್‌ಆರ್‌ಆರ್, ಬಾಹುಬಲಿ, ಕೆಜಿಎಫ್ 2 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಾವಿರಾರು ಕೋಟಿ ಬಾಚಿಕೊಂಡಿವೆ.
ಇದನ್ನೂ ಓದಿ: ಕಲರ್ ಫುಲ್ 'ಡ್ಯಾನ್ಸಿಂಗ್ ಚಾಂಪಿಯನ್' ಫಿನಾಲೆಗೆ' ಅದ್ಧೂರಿ ತೆರೆ
ರಾಮ್ ಚರಣ್ ಹಾಗೂ ಜ್ಯೂನಿಯರ್ ಎನ್ಟಿಆರ್ ನಟನೆಯ ಆರ್‌ಆರ್‌ಆರ್ ಚಿತ್ರ ಸಿನಿರಸಿಕರ ಮನಗೆದ್ದಿದೆ. ಈ ಚಿತ್ರದಲ್ಲಿ ಹಲವು ಮೈನವಿರೇಳಿಸುವ ದೃಶ್ಯಗಳಿವೆ. ಇದನ್ನು ಹೇಗೆ ಶೂಟ್ ಮಾಡಿರಬಹುದು ಎಂಬ ಪ್ರಶ್ನೆ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಕಾಡುತ್ತದೆ. ಇದಕ್ಕೆ ಉತ್ತರವಾಗಿಯೇ ಆರ್‌ಆರ್‌ಆರ್ ಚಿತ್ರತಂಡ ಇದೀಗ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಡಿವಿವಿ ದಾನಯ್ಯ ಅವರ ಆರ್‌ಆರ್‌ಆರ್ ಚಿತ್ರದ ನಿರ್ಮಾಪಕರಾಗಿದ್ದಾರೆ. ಅವರು ಈ ಚಿತ್ರಕ್ಕಾಗಿ 500 ಕೋಟಿ ರೂ. ಗೂ ಹೆಚ್ಚಿನ ಮೊತ್ತದ ಬಂಡವಾಳ ಹೂಡಿದ್ದು, ಅತ್ಯದ್ಭುತವಾಗಿ ಚಿತ್ರ ಮೂಡಿಬಂದಿದೆ. ಅಷ್ಟೇ ಅಲ್ಲದೇ ನೋಡುಗರ ಮನ ಕೂಡ ಗೆದ್ದಿದೆ. ಈ ಸಿನಿಮಾದಲ್ಲಿ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮರಾಜುಭೇಟಿ ಆಗುವ ದೃಶ್ಯ ಸಿನಿಮಾದ ಆರಂಭದಲ್ಲಿಯೇ ಬರುತ್ತದೆ. ಈ ದೃಶ್ಯ ನಡೆಯೋದು ಒಂದು ಸೇತುವೆ ಮೇಲೆ. ಒಂದು ಕಡೆ ಸೇತುವೆ ಮೇಲೆ ಚಲಿಸುತ್ತಿರುವ ಟ್ರೇನ್ಗೆ ಬೆಂಕಿ ಬಿದ್ದಿರುತ್ತದೆ. ಮತ್ತೊಂದೆಡೆ ಅದೇ ಸೇತುವೆ ಕೆಳ ಭಾಗದಲ್ಲಿ ಓರ್ವ ಬಾಲಕ ತೆಪ್ಪದ ಮೇಲೆ ಹೋಗುತ್ತಿರುತ್ತಾನೆ. ಬಾಲಕನ ರಕ್ಷಣೆಗೆ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮರಾಜು ಒಂದಾಗುತ್ತಾರೆ. ಈ ದೃಶ್ಯ ತೆರೆ ಮೇಲೆ ನೋಡುಗರಿಗೆ ಮೈನವಿರೇಲಿಸುವಂತೆ ಮೂಡಿಬಂದಿದೆ. ಆದರೆ ಇದರ ಮೇಕಿಂಗ್ ನೋಡಿದವರು ಅವಾಕ್ಕಾಗುವುದು ಗ್ಯಾರಂಟಿ.
ಇದನ್ನೂ ಓದಿ: ರಾ ರಾ ರಕ್ಕಮ್ಮ ಸಾಂಗ್‌ಗೆ ಭರ್ಜರಿ ಸ್ಟೆಪ್ ಹಾಕಿದ ನಟಿ ಆಶಿಕಾ ರಂಗನಾಥ್
ಈ ದೃಶ್ಯವನ್ನು ಸಂಪೂರ್ಣವಾಗಿ ಒಂದು ಸೆಟ್ನಲ್ಲಿ ಶೂಟ್ ಮಾಡಿದ್ದಾರೆ. ಆದರೆ, ಇದಕ್ಕೆ ಬಳಸಿದ ಗ್ರಾಫಿಕ್ಸ್ ಮಾತ್ರ ಮನಮೋಹಕವಾಗಿದೆ. ವಿದೇಶದ ಗ್ರಾಫಿಕ್ಸ್ ಸಂಸ್ಥೆಗಳು ಇದಕ್ಕಾಗಿ ಕೆಲಸ ಮಾಡಿವೆ. ಈಗ ಹಂಚಿಕೊಂಡಿರುವ ಮೇಕಿಂಗ್ ವಿಡಿಯೋದಲ್ಲಿ ಆ ಬಗ್ಗೆ ಮಾಹಿತಿ ನೀಡಲಾಗಿದೆ. ಒಟ್ಟಾರೆ ಆರ್‌ಆರ್‌ಆರ್ ಸಿನಿಮಾದ ಮೇಕಿಂಗ್ ನೋಡಿದ ಜನ ನಿಬ್ಬೆರಗಾಗುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.