Sai pallavi : ಪುಪ್ಪಾ 2 ಚಿತ್ರತಂಡ ಸೇರಿದ ಸಾಯಿ ಪಲ್ಲವಿ..! ಹಾಗಿದ್ರೆ ರಶ್ಮಿಕಾ ಕಥೆ ಏನು..?

ಸ್ಟೈಲಿಶ್‌ ಐಕಾನ್‌ ಅಲ್ಲು ಅರ್ಜುನ್‌ ನಟನೆಯ ಪುಷ್ಪಾ 2 ಸಿನಿಮಾದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹಚ್ಚಾಗುತ್ತಲೇ ಇದೆ. ಅಲ್ಲದೆ, ಪುಷ್ಪಾ ಮೊದಲ ಭಾಗ ಬ್ಲಾಕ್ಟಸ್ಟರ್‌ ಆದ ನಂತರ ಸಿನಿ ರಸಿಕರು ಪುಷ್ಪಾ 2 ಬಿಡುಗಡೆಯಾಗಿ ಕಾಯುತ್ತಿದ್ದಾರೆ. ಇದೀಗ ನಿರ್ದೇಶಕ ಸುಕುಮಾರ್‌ ಹಿಟ್‌ ಚಿತ್ರ ಪುಷ್ಪಾ 2 ನಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನುವ ಅಪ್‌ಡೆಟ್‌ ಸಿಕ್ಕಿದ್ದು, ಸಿನಿಮಾದ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದೆ.

Written by - Krishna N K | Last Updated : Mar 8, 2023, 01:57 PM IST
  • ಪುಷ್ಪಾ 2 ಸಿನಿಮಾದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹಚ್ಚಾಗುತ್ತಲೇ ಇದೆ.
  • ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ.
  • ಇದೀಗ ಪುಷ್ಪಾ 2 ಸಿನಿಮಾದಲ್ಲಿ ನಟಿ ಸಾಯಿಪಲ್ಲವಿ ನಟಿಸಲಿದ್ದಾರೆ ಎನ್ನಲಾಗಿದೆ.
Sai pallavi : ಪುಪ್ಪಾ 2 ಚಿತ್ರತಂಡ ಸೇರಿದ ಸಾಯಿ ಪಲ್ಲವಿ..! ಹಾಗಿದ್ರೆ ರಶ್ಮಿಕಾ ಕಥೆ ಏನು..? title=

Sai Pallavi in Pushpa 2 : ಸ್ಟೈಲಿಶ್‌ ಐಕಾನ್‌ ಅಲ್ಲು ಅರ್ಜುನ್‌ ನಟನೆಯ ಪುಷ್ಪಾ 2 ಸಿನಿಮಾದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹಚ್ಚಾಗುತ್ತಲೇ ಇದೆ. ಅಲ್ಲದೆ, ಪುಷ್ಪಾ ಮೊದಲ ಭಾಗ ಬ್ಲಾಕ್ಟಸ್ಟರ್‌ ಆದ ನಂತರ ಸಿನಿ ರಸಿಕರು ಪುಷ್ಪಾ 2 ಬಿಡುಗಡೆಯಾಗಿ ಕಾಯುತ್ತಿದ್ದಾರೆ. ಇದೀಗ ನಿರ್ದೇಶಕ ಸುಕುಮಾರ್‌ ಹಿಟ್‌ ಚಿತ್ರ ಪುಷ್ಪಾ 2 ನಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನುವ ಅಪ್‌ಡೆಟ್‌ ಸಿಕ್ಕಿದ್ದು, ಸಿನಿಮಾದ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದೆ.

ಹೌದು.. ತನ್ನ ಅದ್ಭುತ ನಟನಾ ಕೌಶಲ್ಯ ಮತ್ತು ಸೌಂದರ್ಯದ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದ ನಟಿ ಸಾಯಿ ಪಲ್ಲವಿ ಕುರಿತು ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೂಲ್ ಚಿತ್ರದಲ್ಲಿ ಪಲ್ಲವಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ʼಶ್ಯಾಮ್ ಸಿಂಘ ರಾಯ್ʼ ನಂತಹ ಸ್ತ್ರೀ ಮಹತ್ವ ಸಾರುವ ಸಿನಿಮಾಗಳಲ್ಲಿ ನಟಿಸುವ ಮೂಲಕ ಪಲ್ಲವಿಯವರು ಹೆಸರುವಾಸಿಯಾಗಿದ್ದಾರೆ. ಇದೀಗ ಬ್ಲಾಕ್ಬಸ್ಟರ್‌ ಸಿನಿಮಾ ಪುಷ್ಪಾದಲ್ಲಿ ಪಲ್ಲವಿ ಮಿಂಚಲಿದ್ದಾರೆ.

ಇದನ್ನೂ ಓದಿ: Rani Mukerji : ಮನೆಯಲ್ಲಿನ ಬಡತನವೇ ನಟಿ ರಾಣಿ ಮುಖರ್ಜಿಗೆ ಈ ಕೆಲಸ ಮಾಡಲು ಪ್ರೇರೆಪಿಸಿತು.!

ಆದ್ರೆ, ಪುಷ್ಪಾ 2 ಚಿತ್ರತಂಡ, ನಿರ್ದೇಶಕ ಸುಕುಮಾರ್‌ ಈ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದಂತೆ, ಪುಷ್ಪಾ ಸೀಕ್ವೆಲ್‌ನಲ್ಲಿ ಸಾಯಿ ಫಹಾದ್ ಫಾಸಿಲ್‌ಗೆ ಜೋಡಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಸಾಯಿ ಪಲ್ಲವಿ ಶಿವಕಾರ್ತಿಕೇಯನ್ ಅವರ ಇನ್ನೂ ಹೆಸರಿಡದ ಮುಂಬರುವ ತಮಿಳು ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News