ಗುಪ್ತವಾಗಿ ಮದುವೆಯಾದರೇ ಸಲ್ಮಾನ್ ಖಾನ್? ಈ ಫೋಟೋ ಹೇಳುವುದಾದರೂ ಏನು ?

 ಸಲ್ಮಾನ್ ಖಾನ್ ತಮ್ಮ ಜೀವನವನ್ನು ಐಷಾರಾಮಿ ರೀತಿಯಲ್ಲಿ ನಡೆಸುತ್ತಿದ್ದಾರೆ. ಅಂದಹಾಗೆ, ಸಲ್ಮಾನ್ ಖಾನ್ ತಮ್ಮ ಮದುವೆಯ ಬಗ್ಗೆ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. 

Written by - Ranjitha R K | Last Updated : Feb 28, 2022, 04:43 PM IST
  • ಏನಾಯ್ತು ಸಲ್ಮಾನ್ ಮದುವೆ ಕತೆ ?
  • ಸಿಂಧೂರ ಹಚ್ಚಿಕೊಂಡು ಮಿಂಚುತ್ತಿರುವ ಸೋನಾಕ್ಷಿ
  • ಸುದ್ದಿಯ ಹಿಂದಿರುವ ಸತ್ಯ ಏನು ?
ಗುಪ್ತವಾಗಿ ಮದುವೆಯಾದರೇ  ಸಲ್ಮಾನ್ ಖಾನ್?  ಈ ಫೋಟೋ ಹೇಳುವುದಾದರೂ ಏನು ? title=
ಏನಾಯ್ತು ಸಲ್ಮಾನ್ ಮದುವೆ ಕತೆ ? (photo zee news)

ನವದೆಹಲಿ : ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media)ಒಂದಿಷ್ಟು ಸುದ್ದಿ ಹರಿದಾಡುತ್ತಾ ಇರುತ್ತದೆ. ಆದರೆ ಇತ್ತೀಚೆಗೆ ನಟಿಯ ಬಗ್ಗೆ ವೈರಲ್ ಆಗುತ್ತಿರುವ ಸುದ್ದಿ ತುಸು ಭಿನ್ನಾವಗಿದೆ. ಹೌದು, ಇತ್ತೀಚಿನ ದಿನಗಳಲ್ಲಿ ನಟಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ (Social media) ಬರುತ್ತಿರುವ ಸುದ್ದಿ ಅವರ ಮದುವೆಗೆ ಸಂಬಂಧಿಸಿದ್ದೇ ಆಗಿರುತ್ತದೆ. ಹಾಗಿದ್ದರೆ ಇಲ್ಲಿ ಹರಿದಾಡುವ ಸುದ್ದಿ ಯಾವುದು ಗೊತ್ತಾ? 

ಮದುವೆಯಾದರೇ  ಸಲ್ಮಾನ್ ಖಾನ್ ? :
 ಸಲ್ಮಾನ್ ಖಾನ್ (Salman Khan) ತಮ್ಮ ಜೀವನವನ್ನು ಐಷಾರಾಮಿ ರೀತಿಯಲ್ಲಿ ನಡೆಸುತ್ತಿದ್ದಾರೆ. ಅಂದಹಾಗೆ, ಸಲ್ಮಾನ್ ಖಾನ್ ತಮ್ಮ ಮದುವೆಯ ಬಗ್ಗೆ ಯಾವಾಗಲೂ ಚರ್ಚೆಯಲ್ಲಿರುತ್ತಾರೆ.  ಇತ್ತೀಚೆಗೆ, ಸಲ್ಮಾನ್ ಖಾನ್ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Photo) ಆಗುತ್ತಿದೆ. ಇದರಲ್ಲಿ ಸಲ್ಮಾನ್ ಖಾನ್ ವರನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಗೆ ಆಪ್ತರಾಗಿರುವ ನಟಿ ಸೋನಾಕ್ಷಿ ಸಿನ್ಹಾ (Sonakshi Sinha), ಸಲ್ಮಾನ್ ಜೊತೆಯಲ್ಲಿ ಕಾಣಿಸಿಕೊಂಡಿದ್ದು, ಸೋನಾಕ್ಷಿ ಈ ಫೋಟೋದಲ್ಲಿ ಸಿಂಧೂರ ಹಚ್ಚಿಕೊಂಡಿರುವುದು ವಿಶೇಷವಾಗಿದೆ.  ಈ ಫೋಟೋದಲ್ಲಿ ಸಲ್ಮಾನ್ ಖಾನ್  ಸೋನಾಕ್ಷಿಗೆ ಉಂಗುರ ತೊಡಿಸುತ್ತಿರುವುದನ್ನು ಕಾಣಬಹುದು. 

ಇದನ್ನೂ ಓದಿ : ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ‘ಜೇಮ್ಸ್’ ಸಿನಿಮಾ ಮೇಕಿಂಗ್ ಹೇಗಿತ್ತು ಗೊತ್ತಾ..?

 ವೈರಲ್ ಆಗಿರುವ ಫೋಟೋ :
ಸೋನಾಕ್ಷಿ ಸಿನ್ಹಾ ಬಾಲಿವುಡ್‌ನ ಖ್ಯಾತ ನಟಿ. ದಬಾಂಗ್ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ.  ಇದೀಗ ಸೋನಾಕ್ಷಿ ಸಿನ್ಹಾ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ ಅವರನ್ನು ಮದುವೆಯಾಗಿದ್ದಾರೆಯೇ ಎಂಬ ಮಾತು ಬಾಲಿವುಡ್ ಅಂಗ ಳದಲ್ಲಿ ಹರಿದಾಡುತ್ತಿದೆ (Salman Khan Marriage).

ಈ ಫೋಟೋಗಳು ಅಸಲಿಯಲ್ಲ :
ಸೋನಾಕ್ಷಿ ಸಿನ್ಹಾ ಮತ್ತು ಸಲ್ಮಾನ್ ಖಾನ್ ಅವರ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social media) ಹರಿದಾಡುತ್ತಿದೆ. ಯಾರೋ ಅದನ್ನು ಕಂಪ್ಯೂಟರ್‌ನಿಂದ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ. ಇದಕ್ಕೂ ಮೊದಲು ಅಮೀರ್ ಖಾನ್ ಅವರ ಚಿತ್ರವೂ ವೈರಲ್ ಆಗಿತ್ತು. ನಂತರ ಈ ಚಿತ್ರ ನಕಲಿ ಎನ್ನುವ ಅಂಶ ತಿಳಿದು ಬಂದಿತ್ತು. 

ಇದನ್ನೂ ಓದಿ : ಕನ್ನಡಿಗರ 'ಕಲಾತಪಸ್ವಿ' ಕೊನೆಯ ಸಿನಿಮಾ ಹೇಗಿತ್ತು ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News