Haripriya: ನಟಿ ಹರಿಪ್ರಿಯಾ ಫಸ್ಟ್ ಲವ್​ ವಸಿಷ್ಠ ಸಿಂಹ ಅಲ್ಲ!

Actress Haripriya first love : ಪ್ರಸ್ತುತ ದಿನಗಳಲ್ಲಿ ಅನೇಕ ನಟ-ನಟಿಯರು ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಕಾಮನ್ ಆಗಿದೆ. ಈಗ ನಟಿ ಹರಿಪ್ರಿಯಾ ಕೂಡ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು, ಮೊದಲ ವಿಡಿಯೋ ಬಿಡುಗಡೆ ಮಾಡಿದ್ದಾರೆ.  

Written by - Chetana Devarmani | Last Updated : Apr 12, 2023, 01:09 PM IST
  • ವಸಿಷ್ಠ ಸಿಂಹ ಜೊತೆ ಸಪ್ತಪದಿ ತುಳಿದ ಹರಿಪ್ರಿಯಾ
  • ಯೂಟ್ಯೂಬ್ ಚಾನೆಲ್ ಶುರು ಮಾಡಿ ಸ್ಯಾಂಡಲ್‌ವುಡ್‌ ನಟಿ
  • ನಟಿ ಹರಿಪ್ರಿಯಾ ಫಸ್ಟ್ ಲವ್​ ವಸಿಷ್ಠ ಸಿಂಹ ಅಲ್ಲ!
Haripriya: ನಟಿ ಹರಿಪ್ರಿಯಾ ಫಸ್ಟ್ ಲವ್​ ವಸಿಷ್ಠ ಸಿಂಹ ಅಲ್ಲ!  title=
Actress Haripriya

Actress Haripriya : ಇತ್ತೀಚೆಗೆ ಚಂದನವನದ ಲವ್‌ ಬರ್ಡ್ಸ್‌ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಸಪ್ತಪದಿ ತುಳಿದರು. ಸಿಂಹಪ್ರಿಯ ಜೋಡಿ ಕೆಲ ತಿಂಗಳ ಹಿಂದೆ ಎಲ್ಲರಿಗೂ ಬಿಗ್‌ ಸರ್‌ಪ್ರೈಸ್‌ ಕೊಟ್ಟು ಮದುವೆಯಾದರು. ಇದೀಗ ಮತ್ತೊಮ್ಮೆ ಎಲ್ಲರಿಗೂ ಸಿಕ್ಕಾಪಟ್ಟೆ ಆಶ್ಚರ್ಯವಾಗುವ ಸಂಗತಿಗಳನ್ನು ಬಯಲು ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿಅನೇಕ ನಟ - ನಟಿಯರು ತಮ್ಮ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇದೀಗ ಈ ಹೊಸ ಪ್ರಯತ್ನಕ್ಕೆ ನಟಿ ಹರಿಪ್ರಿಯಾ ಕೂಡ ಕೈ ಹಾಕಿದ್ದಾರೆ. ಹರಿಪ್ರಿಯಾ ಯೂಟ್ಯೂಬ್  ಚಾನೆಲ್ ತೆರೆದಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುವ ಪ್ರಯತ್ನ ನಟಿ ಹರಿಪ್ರಿಯಾ ಅವರದ್ದು. ಇದೀಗ ಈ ಚಾನೆಲ್‌ನಲ್ಲಿ ಯಾರಿಗೂ ತಿಳಿದ ಸೀಕ್ರೆಟ್ ಬಗ್ಗೆ ಹರಿಪಿಯಾ ಮಾತಾಡಿದ್ದಾರೆ. 

ಇದನ್ನೂ ಓದಿ : Bachchan movie: 'ಬಚ್ಚನ್'ಗೆ ದಶಕದ ಸಂಭ್ರಮ.. ಕಿಚ್ಚ ಸುದೀಪ್‌ಗೆ ಮಗಳ ಸ್ಪೆಷಲ್ ಗಿಫ್ಟ್ ಇದು!

ಯೂಟ್ಯೂಬ್‌ ಚಾನೆಲ್‌ನಲ್ಲಿ ತಮ್ಮ ಜೀವನದ ಕೆಲವು ಸೀಕ್ರೇಟ್‌ಗಳನ್ನು ಹೇಳಿಕೊಂಡಿದ್ದಾರೆ. ಹರಿಪಿಯಾಗೆ ಹೀರೋಯಿನ್ ಆಗುವ ಕನಸು ಇರಲಿಲ್ಲವಂತೆ. ತುಂಬಾ ಚೆನ್ನಾಗಿ ಓದುತ್ತಿದ್ದ ಅವರಿಗೆ ಉದ್ಯಮಿ ಆಗಬೇಕು ಎನ್ನುವ ಕನಸಿತ್ತಂತೆ. ಹರಿಪಿಯಾ ಡ್ಯಾನ್ಸ್ ನೋಡಿ ಒಬ್ಬರು ತುಳು ಸಿನಿಮಾಗೆ ಆಫರ್ ನೀಡಿದರಂತೆ. ಆ ನಂತರ ಸಿನಿಮಾದಲ್ಲಿ ನಟಿಸೋದು ಹರಿಪಿಯಾಗೆ ಇಷ್ಟವಾಯ್ತಂತೆ ಎಂದು ಅವರೇ ಹೇಳಿದ್ದಾರೆ. 

ಇನ್ನೂ ಈ ವೇಳೆ  ಫಸ್ಟ್ ಲವ್ ಬಗ್ಗೆ ಹೇಳಿದ ಹರಿಪ್ರಿಯಾ, ಟೀನೇಜ್ ಅನ್ನುವುದೇ ಹಾಗೆ, ಅದು ವ್ಯಕ್ತಿಯನ್ನು ಮೇಕ್ ಅಥವಾ ಬ್ರೇಕ್ ಮಾಡಬಹುದು ಎಂದಿದ್ದಾರೆ. ಫಸ್ಟ್ ಲವ್ ಬಗ್ಗೆ ತುಂಬಾ ಗೊಂದಲ ಅವರಿಗಿದೆಯಂತೆ. 17 ವರ್ಷದವರಿದ್ದಾಗ ಹರಿಪ್ರಿಯಾ ಒಬ್ಬರನ್ನು ಇಷ್ಟಪಟ್ಟಿದ್ದರಂತೆ. ಆದರೆ ಅದು ಒಂದು ರೀತಿಯ ಕ್ರಶ್ ಅನ್ನುತ್ತಾರೆ ಈ ನೀರದೋಸೆ ಬೆಡಗಿ. 

ಇದನ್ನೂ ಓದಿ : Actress Rekha: 6 ಮಂದಿ ಜೊತೆ ಪ್ರೀತಿ, 2 ಮದುವೆ.. ಆದರೂ ಒಂಟಿಯಾಗಿಯೇ 68 ವರ್ಷ ಕಳೆದ ಬಿಟೌನ್‌ ಖ್ಯಾತ ನಟಿ!

ಇಷ್ಟು ದೊಡ್ಡವರಾದರೂ ಈಗಲೂ ಹರಿಪ್ರಿಯಾ ಅಮ್ಮನ ಪಕ್ಕನೇ ಮಲಗುತ್ತಾರಂತೆ. ಹರಿಪ್ರಿಯಾಗೆ ಅಮ್ಮನನ್ನು ತಬ್ಬಿಕೊಂಡು ಮಲಗುವುದು ತುಂಬಾ ಇಷ್ಟವಂತೆ. ಯಾರೂ ಈ ಬಗ್ಗೆ ಕಮೆಂಟ್ ಮಾಡ್ಬೇಡಿ ಪ್ಲೀಸ್ ಎಂದು ಹರಿಪ್ರಿಯಾ ಹೇಳಿದ್ದಾರೆ. ಟಾಲಿವುಡ್ ನಟ ಬಾಲಕೃಷ್ಣ ಹರಿಪ್ರಿಯಾ ಅವರ ನೆಚ್ಚಿನ ನಟ. ಅವರ ಜೊತೆ ಜಯಸಿಂಹ ಎಂಬ ಸಿನಿಮಾದಲ್ಲಿ ನಟಿಸಿದ್ದು ಹರಿಪ್ರಿಯಾಗೆ ತುಂಬಾ ಸಂತಸ ನೀಡಿದೆಯಂತೆ. ಕನ್ನಡದ ಹಿರಿಯ ನಟ ಅನಂತ್ ನಾಗ್ ಜೊತೆ ಅಭಿನಯಿಸಲು ಕಾಯುತ್ತಿರುವುದಾಗಿ ಈ ವಿಡಿಯೋದಲ್ಲಿ ಹರಿಪ್ರಿಯಾ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News