Dwarakish: ಚಂದನವನದ ಪ್ರಚಂಡ ಕುಳ್ಳ ದ್ವಾರಕೀಶ್‌ ಅಚ್ಚರಿಯ ಹಿನ್ನಲೆ!

Dwarakish Death: ಚಂದನವನದ ಹಿರಿಯ ನಟ ದ್ವಾರಕೀಶ್‌ ಏಪಿಲ್‌ 16 ರಂದು ನಿಧರಾಗಿದ್ದಾರೆ. ಈ ಹಿರಿಯ ಕಲಾವಿದ ಸಿನಿಮಾರಂಗಕ್ಕೆ ಹೆಜ್ಜೆಹಾಕುವ ಮುಂಚೆ ಇವರ ಶಿಕ್ಷಣವೇನು? ಏನು ಕೆಲಸ ಮಾಡುತ್ತಿದ್ದರು? ಈ ನಟನ ಬಗ್ಗೆ ತಿಳಿಯ ಬೇಕಾಗಿರುವ ಸತ್ಯ ಸಂಗತಿಗಳು ಇಲ್ಲಿವೆ.  

Written by - Zee Kannada News Desk | Last Updated : Apr 16, 2024, 02:04 PM IST
  • ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಕಲಾವಿದ ಹಾಗೂ ನಿರ್ಮಾಪಕ ಏಪ್ರಿಲ್‌ 16 ರಂದು 81 ನೇ ವಯಸ್ಸಿನಲ್ಲಿ ಕೊನೆಯುಸಿರು ಬಿಟ್ಟಿದ್ದಾರೆ.
  • ಶಾಮರಾವ್ ಮತ್ತು ಜಯಮ್ಮ ಪುತ್ರನಾಗಿ ಜನಿಸಿದ ಹುಣಸೂರು ಮಾವನಮೂರ್ತಿ ದ್ವಾರಕೀಶ್‌ ಶಾರದ ವಿಲಾಸ್ ಮತ್ತು ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು.
  • ಚಿತ್ರರಂಗದಲ್ಲಿ ಅಭಿನಯಿಸುವುದಕ್ಕೆ ಹೆಚ್ಚು ಆಸಕ್ತಿ ಹೊಂದಿದ್ದರಿಂದ 1963 ರಲ್ಲಿ ವ್ಯಾಪಾರ ಬಿಟ್ಟು ನಟನೆಗಾಗಿ ಸಿನಿರಂಗದ ಕಡೆಗೆ ಮುಖ ಮಾಡಿದರು.
Dwarakish: ಚಂದನವನದ ಪ್ರಚಂಡ ಕುಳ್ಳ ದ್ವಾರಕೀಶ್‌ ಅಚ್ಚರಿಯ ಹಿನ್ನಲೆ! title=

Actor Dwarakish History: ಸ್ಯಾಂಡಲ್‌ವುಡ್‌ನಲ್ಲಿ ಪ್ರಚಂಡ ಕುಳ್ಳ ಎಂದೇ ಖ್ಯಾತಿ ಪಡೆದ,  ಹಿರಿಯ ನಟ ದ್ವಾರಕೀಶ್‌ ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಕಲಾವಿದ ಹಾಗೂ ನಿರ್ಮಾಪಕ ಏಪ್ರಿಲ್‌ 16 ರಂದು 81 ನೇ ವಯಸ್ಸಿನಲ್ಲಿ ಕೊನೆಯುಸಿರು ಬಿಟ್ಟಿದ್ದಾರೆ. ಇಂತಹ ಅದ್ಭುತ ಕಲಾವಿದರಾದ  ದ್ವಾರಕೀಶ್‌ ರನ್ನು ಕಳೆದುಕೊಂಡ ನೋವು ಚಿತ್ರರಂಗದಲ್ಲಿ ಆವರಿಸಿದೆ.

ನಟ ದ್ವಾರಕೀಶ್‌ 1942 ಆಗಸ್ಟ್ 19 ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಹುಟ್ಟಿದರು. ಶಾಮರಾವ್ ಮತ್ತು  ಜಯಮ್ಮ ಪುತ್ರನಾಗಿ ಜನಿಸಿದ ಹುಣಸೂರು ಮಾವನಮೂರ್ತಿ ದ್ವಾರಕೀಶ್‌ ಶಾರದ ವಿಲಾಸ್ ಮತ್ತು ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು.

ಇದನ್ನೂ ಓದಿ: ಪರಮ ಮಿತ್ರರಾಗಿದ್ದ ವಿಷ್ಣುವರ್ಧನ್ -ದ್ವಾರಕೀಶ್ ನಡುವಿನ ಸ್ನೇಹ ಮುರಿದು ಬಿದ್ದದ್ದು ಇದೊಂದೇ ಕಾರಣಕ್ಕೆ!

ದ್ವಾರಕೀಶ್ ಶಿಕ್ಷಣವನ್ನು ಮುಗಿಸಿದ ಬಳಿಕ ‌ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದ್ದರು. ಆದರೆ ಚಿತ್ರರಂಗದಲ್ಲಿ ಅಭಿನಯಿಸುವುದಕ್ಕೆ ಹೆಚ್ಚು ಆಸಕ್ತಿ ಹೊಂದಿದ್ದರಿಂದ 1963 ರಲ್ಲಿ ವ್ಯಾಪಾರ ಬಿಟ್ಟು ನಟನೆಗಾಗಿ ಸಿನಿರಂಗದ ಕಡೆಗೆ ಮುಖ ಮಾಡಿದರು. 1964 ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದರು.

ಸ್ಯಾಂಡಲ್‌ವುಡ್‌  ಹೆಜ್ಜೆಹಾಕಿದ ನಂತರ ದ್ವಾರಕೀಶ್‌ ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ಇವರು 17 ಕ್ಕೂ ಹೆಚ್ಚು ಚಿತ್ರಗಳನ್ನು ಸಹ ನಿರ್ದೇಶನ ಮಾಡಿದ್ದಾರೆ. ಈ ನಟನ ಮಡದಿ ಅಂಬುಜಾ ಅವರು ಕೂಡ ಕಳೆದು ಮೂರು ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News