Releasing in Telugu : ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ ಅಭಿನಯದ ಹೇಮಂತ್ ರಾವ್ ನಿರ್ದೇಶನದ ಚಿತ್ರ 'ಸಪ್ತ ಸಾಗರದಾಚೆ ಎಲ್ಲೊ' ಸೆಪ್ಟೆಂಬರ್ 01ರಂದು ರಿಲೀಸ್ ಆಗಿದ್ದು, ನೋಡುಗರ ಮನಗೆದ್ದು ಯಶಸ್ಸನ್ನುಗಳಿಸಿದೆ. ಅದೇ ಸಿನಿಮಾ ಇದೀಗ ತೆಲುಗುನಲ್ಲಿ ರಿಲೀಸ್ ಆಗುತ್ತಿದೆ ಎಂದು ನಿನ್ನೆ ಚಿತ್ರ ತಂಡ ಮಾಹಿತಿ ನೀಡಿದೆ. ಸಿನಿಮಾ ಸೆಪ್ಟೆಂಬರ್ 22 ರಂದು ತೆಲುಗುನಲ್ಲಿ ' ಸಪ್ತ ಸಾಗರಲು ದಾಟಿ ' ಎಂಬ ಶೀರ್ಷಿಕೆಯಲ್ಲಿ ತೆರೆ ಕಾಣಲು ಸಿದ್ಧವಾಗಿದೆ.
ನಾಯಕಿ ರುಕ್ಮಿಣಿ ವಸಂತ (ಪ್ರಿಯಾ) ಪಾತ್ರದಲ್ಲಿ , ರಕ್ಷಿತ್ ಶೆಟ್ಟಿ (ಮನು) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ನಿರ್ದೇಶಕ ಹೇಮಂತ್ ರಾವ್ ಅವರ ನಿರ್ದೇಶನದಲ್ಲಿ ತೆರೆ ಕಂಡ ಮೂರನೇ ಸಿನಿಮಾ ಇದಾಗಿದ್ದು, ಈಗ ಈ ಸಿನಿಮಾ ತೆಲುಗುನಲ್ಲಿ ತೆರೆ ಕಾಣಲು ಸಿದ್ದವಾಗಿದೆ. ಸಿನಿಮಾದಲ್ಲಿನ ಸಮುದ್ರ ದಡದ ಅಲೆಯ ಸದ್ದಿನೊಂದಿಗೆ ಪ್ರೀತಿ, ನೋವು ಸಂಪೂರ್ಣವಾಗಿ ಸೇರಿಕೊಂಡು ಅಭಿಮಾನಿಗಳನ್ನು ಆವರಿಸಿ ಬಿಟ್ಟಿದೆ.
ಇದನ್ನು ಓದಿ- ಪವನ್ ಕಲ್ಯಾಣ್ ಅವರ ಬೆರಳುಗಳಲ್ಲಿರುವ ಆ ಎರಡು ಉಂಗುರಗಳ ವೈಶಿಷ್ಠ್ಯವೇನು ಗೊತ್ತಾ?
ಸಿನಿಮಾವನ್ನು ಎರಡು ಭಾಗಗಳಾಗಿ ಮಾಡಿದ್ದು ಕನ್ನಡಲ್ಲಿ Side-A ಈಗಾಗಲೇ ತೆರೆ ಕಂಡಿದ್ದು, ಸಿನಿಮಾದ ಮೊದಲ ಭಾಗ ಜನರಲ್ಲಿ ಒಂದು ಅಭಿಪ್ರಾಯ ಮೂಡಿಸಿದೆ ಮತ್ತು ಎರಡನೇ ಭಾಗಕ್ಕಾಗಿ ಕಾಯುವ ಕುತೂಹಲವನ್ನು ಉಂಟು ಮಾಡಿದೆ.
As Sapta Sagardaache Ello’s love resounds across Karnataka, our cinema is now poised to capture hearts in a whole new arena! Releasing ‘Sapta Sagaralu Dhaati’ in Telugu on 22nd of September🤍
Our dear Telugu audience, we hope you accept our labour of love as your own🤗… pic.twitter.com/e8FazGqYc3
— Rakshit Shetty (@rakshitshetty) September 15, 2023
Side-B ಅಕ್ಟೋಬರ್ 20 ರಂದು ರಿಲೀಸ್ ಆಗಲಿದ್ದು , ಅದಕ್ಕೂ ಮುಂಚೆ ಚಿತ್ರ ತಂಡ Side-A ನ್ನು ತೆಲುಗುನಲ್ಲಿ ಸೆ. 22ರಂದು ರಿಲೀಸ್ ಮಾಡಲು ಹೊರಟಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.