ತಮಿಳಿಗೆ ಎಂಟ್ರಿ ಕೊಡ್ತಿದ್ದಾರೆ ನಮ್ಮ ಹುಡ್ಗ ನೀನಾಸಂ ಸತೀಸ್..!

ಕನ್ನಡದಲ್ಲಿ ಪ್ರತಿಭಾವಂತ ಮತ್ತು ಮೆತಡ್ ನಟ ಎಂದೇ ಖ್ಯಾತಿ ಪಡೆದಿರುವ ನೀನಾಸಂ ಸತೀಶ್ ತಮ್ಮ ನೈಜ ಡೈಲಾಗ್ ಡೆಲಿವರಿಯಿಂದ ಪ್ರಸಿದ್ದಿ  ಪಡೆದವರು.ಇತ್ತೀಚೆಗಷ್ಟೇ ಅವರ ಅಯೋಗ್ಯ ಚಿತ್ರ ಕೂಡ ಭರ್ಜರಿ ಹಿಟ್ ಆಗಿತ್ತು. ಆದರೆ ಈಗ ವಿಶೇಷ ಏನಪ್ಪಾ ಅಂದ್ರೆ ತಮ್ಮನ್ನು ಕೇವಲ ಕನ್ನಡಕ್ಕೆ ಮಾತ್ರ ಸೀಮಿತಗೊಳಿಸದೆ ತಮಿಳಿನಲ್ಲಿಯೂ ಕೂಡ ಸೌಂಡ್ ಮಾಡಲು ಹೊರಟಿದ್ದಾರೆ. 

Updated: Dec 6, 2018 , 02:28 PM IST
  ತಮಿಳಿಗೆ ಎಂಟ್ರಿ ಕೊಡ್ತಿದ್ದಾರೆ ನಮ್ಮ ಹುಡ್ಗ ನೀನಾಸಂ ಸತೀಸ್..!

ಬೆಂಗಳೂರು: ಕನ್ನಡದಲ್ಲಿ ಪ್ರತಿಭಾವಂತ ಮತ್ತು ಮೆತಡ್ ನಟ ಎಂದೇ ಖ್ಯಾತಿ ಪಡೆದಿರುವ ನೀನಾಸಂ ಸತೀಶ್ ತಮ್ಮ ನೈಜ ಡೈಲಾಗ್ ಡೆಲಿವರಿಯಿಂದ ಪ್ರಸಿದ್ದಿ  ಪಡೆದವರು.ಇತ್ತೀಚೆಗಷ್ಟೇ ಅವರ ಅಯೋಗ್ಯ ಚಿತ್ರ ಕೂಡ ಭರ್ಜರಿ ಹಿಟ್ ಆಗಿತ್ತು. ಆದರೆ ಈಗ ವಿಶೇಷ ಏನಪ್ಪಾ ಅಂದ್ರೆ ತಮ್ಮನ್ನು ಕೇವಲ ಕನ್ನಡಕ್ಕೆ ಮಾತ್ರ ಸೀಮಿತಗೊಳಿಸದೆ ತಮಿಳಿನಲ್ಲಿಯೂ ಕೂಡ ಸೌಂಡ್ ಮಾಡಲು ಹೊರಟಿದ್ದಾರೆ. 

ಪಗೈವಾನುಕು ಅರುಲ್ವೈ ಎನ್ನುವ ತಮಿಳು ಚಿತ್ರದಲ್ಲಿ ನೀನಾಸಂ ಸತೀಸ್ ನಟಿಸಲು ಸಿದ್ದರಾಗಿದ್ದಾರೆ. ಈ ಹಿಂದೆ ಲೂಸಿಯಾ ಎಂಬ ಕಮರ್ಸಿಯಲ್ ಮತ್ತು ಆರ್ಟ್ ಎರಡು ಅಂಶಗಳನ್ನುಳ್ಳ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದ  ನಿರ್ದೇಶಕ ಅನೀಶ್ ಈಗ ಸತೀಸ್ ಅವರಿಗೆ ನಿರ್ದೇಶನ ಮಾಡಲು ಹೊರಟಿದ್ದಾರೆ.

ಈಗ ಅಂಶವನ್ನು ತಮ್ಮ ಟ್ವಿಟರ್ ಮೂಲಕ  ಬಹಿರಂಗಪಡಿಸಿಕೊಂಡಿರುವ ನೀನಾಸಂ ಸತೀಶ್ " ನನ್ನ ತಮಿಳು ಚಿತ್ರದ ಚಿತ್ರದ ಶೀರ್ಷಿಕೆ ಇದೇ ಡಿಸೆಂಬರ್ 8 ರಂದು ಸ್ವಿಜರ್ಲ್ಯಾಂಡ್ ನಲ್ಲಿ 10 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಬಿಡುಗಡೆಯಾಗಲಿದೆ" ಎಂದು ಬರೆದುಕೊಂಡಿದ್ದಾರೆ