Kiara Advani: ಕಿಯಾರಾ ಅಡ್ವಾಣಿ ಗರ್ಭಿಣಿಯೇ? ಇತ್ತೀಚಿನ ಫೋಟೋ ಗಮನಿಸಿದ್ದೀರಾ!!

Kiara Advani Pregnant: ಕಿಯಾರಾ ಅಡ್ವಾಣಿ ಅಭಿನಯದ ಸತ್ಯಪ್ರೇಮ್ ಕಿ ಕಥಾ ಚಿತ್ರ ಶುಕ್ರವಾರ ಬಿಡುಗಡೆಯಾಗುತ್ತಿದೆ. ಕಳೆದ ವರ್ಷ, ಅವರು ಕಾರ್ತಿಕ್ ಆರ್ಯನ್ ಅವರೊಂದಿಗೆ ಸೂಪರ್ ಹಿಟ್ ಭೂಲ್ ಭುಲೈಯಾ 2 ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಸತ್ಯಪ್ರೇಮ್ ಕಿ ಕಥಾ ಸಿನಿಮಾದಲ್ಲೂ ಕಾರ್ತಿಕ್ ಜೊತೆ ಅಭಿನಯಿಸಿದ್ದಾರೆ. ಆದರೆ ಚಿತ್ರಕ್ಕೂ ಮುನ್ನ ಕಾರ್ತಿಕ್ ಜೊತೆಗಿನ ಚಿತ್ರದ ಪ್ರಚಾರದ ಫೋಟೋ ನೋಡಿದ ಹಲವರು ಕಿಯಾರಾ ಗರ್ಭಿಣಿ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.   

Written by - Chetana Devarmani | Last Updated : Jun 26, 2023, 07:44 AM IST
  • ಕಿಯಾರಾ ಅಡ್ವಾಣಿ ಅಭಿನಯದ ಸತ್ಯಪ್ರೇಮ್ ಕಿ ಕಥಾ
  • ಸತ್ಯಪ್ರೇಮ್ ಕಿ ಕಥಾ ಪ್ರಚಾರದ ಫೋಟೋಗಳು ವೈರಲ್‌
  • ಕಿಯಾರಾ ಅಡ್ವಾಣಿ ಗರ್ಭಿಣಿಯೇ? ಎಂಬ ಅನುಮಾನಕ್ಕೆ ಕಾರಣವಾದ ಫೋಟೋಸ್‌
Kiara Advani: ಕಿಯಾರಾ ಅಡ್ವಾಣಿ ಗರ್ಭಿಣಿಯೇ? ಇತ್ತೀಚಿನ ಫೋಟೋ ಗಮನಿಸಿದ್ದೀರಾ!! title=

Kiara Advani Siddarth Malhotra: ಈ ವರ್ಷದ ಫೆಬ್ರವರಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ವಿವಾಹವಾದ ಕಿಯಾರಾ ಅಡ್ವಾಣಿ ಗರ್ಭಿಣಿಯೇ? ಈ ಚರ್ಚೆಯು ಸಾಮಾಜಿಕ ಮಾಧ್ಯಮದಲ್ಲಿ ಅವರ ಇತ್ತೀಚಿನ ಫೋಟೋಗಳಿಂದ ಶುರುವಾಯಿತು. ಕಾರ್ತಿಕ್ ಆರ್ಯನ್ ಅವರೊಂದಿಗಿನ ಅವರ ಹೊಸ ಫೋಟೋವನ್ನು ನೋಡಿದ ನಂತರ, ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಶೀಘ್ರದಲ್ಲೇ ಎಲ್ಲರೊಂದಿಗೆ ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಕಿಯಾರಾ ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಫೆಬ್ರವರಿ 7 ರಂದು ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆಯಾದರು. ಅವರ ಮುಂದಿನ ಚಿತ್ರ ಸತ್ಯಪ್ರೇಮ್ ಕಿ ಕಥಾ ಶುಕ್ರವಾರ ಬಿಡುಗಡೆಯಾಗಲಿದೆ. ಇದರಲ್ಲಿ ಅವರು ಕಾರ್ತಿಕ್ ಆರ್ಯನ್ ಜೊತೆ ನಟಿಸಿದ್ದಾರೆ.

ಫೋಟೋದಲ್ಲಿ ಬೇಬಿ ಬಂಪ್ 

ಕಳೆದ ವರ್ಷ, ಕಾರ್ತಿಕ್ ಜೊತೆಗಿನ ಭೂಲ್ ಭುಲಯ್ಯ 2 ಸೂಪರ್ ಹಿಟ್ ಆಗಿತ್ತು ಮತ್ತು ಇದೀಗ ಮತ್ತೊಮ್ಮೆ ಈ ಜೋಡಿ ತೆರೆ ಮೇಲೆ ಕಮಾಲ್‌ ಮಾಡುತ್ತಾ ನೋಡಬೇಕಿದೆ. ಜೂನ್ 29 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಪ್ರಚಾರಕ್ಕಾಗಿ ಇಬ್ಬರೂ ಸ್ಟಾರ್‌ಗಳು ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದಾರೆ. ಶನಿವಾರ, ಕಾರ್ತಿಕ್ ಮತ್ತು ಕಿಯಾರಾ ರಾಜಸ್ಥಾನದ ಜೈಪುರದಲ್ಲಿ ಸತ್ಯಪ್ರೇಮ್ ಕಿ ಕಥಾ ಪ್ರಚಾರ ಮಾಡುತ್ತಿದ್ದರು. ಈ ಪಿಂಕ್ ಸಿಟಿಯಲ್ಲಿ ಚಿತ್ರದ ಪ್ರಚಾರದ ಫೋಟೋವನ್ನು ಕಾರ್ತಿಕ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಕಾರ್ತಿಕ್‌ ಮತ್ತು ಕಿಯಾರಾ ಮುದ್ದಾದ ಪೋಸ್ ನೀಡುತ್ತಿದ್ದಾರೆ. ಆದರೆ ಫೋಟೋ ವೈರಲ್ ಆದ ತಕ್ಷಣ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದಲ್ಲಿ ಬೇಬಿ ಬಂಪ್ ಬಂದ ರೀತಿ ಕಾಣುತ್ತಿದೆ. ಇದರಿಂದ ಕಿಯಾರಾ ಅಡ್ವಾಣಿ ಗರ್ಭಿಣಿಯಾಗಿದ್ದಾರೆ ಎಂದು ಹಲವರು ಅನುಮಾನಿಸುತ್ತಿದ್ದಾರೆ.

ಇದನ್ನೂ ಓದಿ: Bollywood News: ರೇಖಾಗೆ ಹಿಂದಿ ಚಿತ್ರೋದ್ಯಮದಲ್ಲಿ ಬ್ರೇಕ್ ನೀಡಿದ ಚಿತ್ರ ನಿರ್ಮಾಪಕ ಕುಲ್ಜೀತ್ ಪಾಲ್ ಇನ್ನಿಲ್ಲ

ಕಿಯಾರಾ ಅಡ್ವಾಣಿ ಗರ್ಭಿಣಿಯೇ?

ಫೋಟೋದಲ್ಲಿ, ಕಿಯಾರಾ ಬ್ರ್ಯಾಲೆಟ್ ಮತ್ತು ಪ್ಯಾಂಟ್‌ನೊಂದಿಗೆ ಜಾಕೆಟ್‌ ಧರಿಸಿದ್ದು, ಸುಂದರವಾಗಿ ಕಾಣುತ್ತಿದ್ದಾರೆ. ಕಾರ್ತಿಕ್ ಆರ್ಯನ್‌ ಟಿ ಶರ್ಟ್ ಮತ್ತು ಡೆನಿಮ್‌ನ ಮೇಲೆ ಜಾಕೆಟ್‌ ಧರಿಸಿದ್ದು, ಹ್ಯಾಂಡ್ಸಮ್‌ ಆಗಿ ಕಾಣುತ್ತಿದ್ದಾರೆ. ಆದರೆ ಈ  ಫೋಟೋಗಳು ಕಿಯಾರಾ ಅವರ ಗರ್ಭಧಾರಣೆಯ ಚರ್ಚೆಯನ್ನು ಹೆಚ್ಚಿಸಿವೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಜನರು ತಮ್ಮದೇ ಶೈಲಿಯಲ್ಲಿ ಊಹೆ ಮಾಡುತ್ತಿದ್ದಾರೆ. 

ಶೇರ್‌ ಷಾ ಚಿತ್ರದ ಸಮಯದಲ್ಲಿ ಡೇಟಿಂಗ್ ಪ್ರಾರಂಭವಾದ ನಂತರ ಕಿಯಾರಾ ಮತ್ತು ಸಿದ್ಧಾರ್ಥ್ ಪರಸ್ಪರ ತಮ್ಮ ಪ್ರೀತಿಯನ್ನು ಒಪ್ಪಿಕೊಂಡರು. ಆದರೆ ಮಾಧ್ಯಮಗಳಲ್ಲಿ ಮದುವೆಯ ದಿನದವರೆಗೂ ತಮ್ಮ ಸಂಬಂಧವನ್ನು ಮುಚ್ಚಿಟ್ಟಿದ್ದರು. ಈ ವರ್ಷ ಇಬ್ಬರೂ ರಾಜಸ್ಥಾನದಲ್ಲಿ ವಿವಾಹವಾದರು. ಅಂಬಾನಿ ಕುಟುಂಬದ ಸದಸ್ಯರು, ಕರಣ್ ಜೋಹರ್, ಶಾಹಿದ್ ಕಪೂರ್, ಮೀರಾ ರಜಪೂತ್ ಮತ್ತು ಜೂಹಿ ಚಾವ್ಲಾ ಮುಂತಾದ ತಾರೆಯರು ಮದುವೆಯಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ ಇಬ್ಬರೂ ರಜೆಗೆಂದು ಜಪಾನ್‌ಗೆ ಹೋಗಿ ಬಂದು, ತಮ್ಮ ತಮ್ಮ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾದರು.

ಇದನ್ನೂ ಓದಿ: Nita Ambani: ಆನೆ ದಂತ, ಬಂಗಾರದಿಂದ ಮಾಡಿದ ಬನಾರಸಿ ಸೀರೆಯುಟ್ಟ ನೀತಾ ಅಂಬಾನಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News