ರಿಲೀಸ್‌ಗೂ ಮುನ್ನವೇ ಕಿಂಗ್‌ ಖಾನ್‌ ʼಜವಾನ್‌ʼ ಚಿತ್ರದ ವಿಡಿಯೋ ಲೀಕ್‌..! ಡೈರೆಕ್ಟರ್‌ ಶಾಕ್‌ 

ಕಾಲಿವುಡ್‌ ಸ್ಟಾರ್‌ ಡೈರೆಕ್ಟರ್‌ ಅಟ್ಲಿ ನಿರ್ದೇಶನದ ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಈ ಚಿತ್ರದಲ್ಲಿ ಕಿಂಗ್‌ ಖಾನ್‌ಗೆ ಜೊತೆಯಾಗಿ ಮೊದಲ ಬಾರಿಗೆ ನಯನತಾರಾ ನಟಿಸಿದ್ದಾರೆ.  ಯೋಗಿ ಬಾಬು ಮತ್ತು ಪ್ರಿಯಾಮಣಿ ಕೂಡ ಈ ಸಿನಿಮಾದಲ್ಲಿದ್ದಾರೆ.

Written by - Krishna N K | Last Updated : Mar 10, 2023, 05:38 PM IST
  • ಸ್ಟಾರ್‌ ಡೈರೆಕ್ಟರ್‌ ಅಟ್ಲಿ ನಿರ್ದೇಶನದ ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
  • ಈ ಚಿತ್ರದಲ್ಲಿ ಕಿಂಗ್‌ ಖಾನ್‌ಗೆ ಜೊತೆಯಾಗಿ ಮೊದಲ ಬಾರಿಗೆ ಲೆಡಿ ಸೂಪರ್‌ ಸ್ಟಾರ್‌ ನಯನತಾರಾ ನಟಿಸಿದ್ದಾರೆ.
  • ಸದ್ಯ ಶಾರುಖ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಿಲೀಸ್‌ಗೂ ಮುನ್ನವೇ ಕಿಂಗ್‌ ಖಾನ್‌ ʼಜವಾನ್‌ʼ ಚಿತ್ರದ ವಿಡಿಯೋ ಲೀಕ್‌..! ಡೈರೆಕ್ಟರ್‌ ಶಾಕ್‌  title=

Shah rukh khan Jawan film : ಕಾಲಿವುಡ್‌ ಸ್ಟಾರ್‌ ಡೈರೆಕ್ಟರ್‌ ಅಟ್ಲಿ ನಿರ್ದೇಶನದ ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಈ ಚಿತ್ರದಲ್ಲಿ ಕಿಂಗ್‌ ಖಾನ್‌ಗೆ ಜೊತೆಯಾಗಿ ಮೊದಲ ಬಾರಿಗೆ ನಯನತಾರಾ ನಟಿಸಿದ್ದಾರೆ.  ಯೋಗಿ ಬಾಬು ಮತ್ತು ಪ್ರಿಯಾಮಣಿ ಕೂಡ ಈ ಸಿನಿಮಾದಲ್ಲಿದ್ದಾರೆ.

ಅನಿರುದ್ಧ್ ಸಂಗೀತ ಸಂಯೋಜಿಸಿರುವ ಜವಾನ್‌ ಚಿತ್ರದ ಮೊದಲ ಹಂತದ ಚಿತ್ರೀಕರಣ ಉತ್ತರ ಭಾರತದಲ್ಲಿ ಮುಗಿದಿದ್ದು, ಇದೀಗ ಎರಡನೇ ಹಂತದ ಚಿತ್ರೀಕರಣ ಚೆನ್ನೈನಲ್ಲಿ ನಡೆದಿದೆ. ಮಾಸ್ಟರ್, ಉಪೇನ, ವಿಕ್ರಮ್ ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ್ದ ವಿಜಯ್ ಸೇತುಪತಿ ಜವಾನ್ ಚಿತ್ರದಲ್ಲಿ ಬಿಟೌನ್‌ ಬಾದ್‌ ಶಾಗೆ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಪವಿತ್ರಾ-ನರೇಶ್‌ ಮದುವೆ ನಿಜ ಅಂತ ನಂಬಿ ಬಕ್ರಾ ಆದ್ರಾ..!? ಇಲ್ಲಿದೆ ನೋಡಿ ವಿಡಿಯೋ ಸತ್ಯ

ನಿರ್ಮಾಣ ಹಂತದಲ್ಲಿರುವ ಜವಾನ್ ಚಿತ್ರೀಕರಣ ಅಂತಿಮ ಹಂತವನ್ನು ತಲುಪಿದೆ. ಇದಕ್ಕಾಗಿ ನಟಿ ನಯನತಾರಾ ಈಗ ಮುಂಬೈಗೆ ಹೋಗಿದ್ದಾರೆ. ಇದರಲ್ಲಿ ನಟಿ ವಿಜಯ್ ಸೇತುಪತಿ ಮತ್ತು ಶಾರುಖ್ ಖಾನ್ ಅವರ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಮತ್ತು ಈ ವರ್ಷ ಜೂನ್ 2 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತು. ಈ ಚಿತ್ರದಲ್ಲಿ ನಟ ವಿಜಯ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಶಾರುಖ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಅವರ ಜವಾನ್ ಚಿತ್ರದ ದೃಶ್ಯವೊಂದರ ಲೀಕ್ ವಿಡಿಯೋ ಎಂದು ಹೇಳಲಾಗುತ್ತಿದೆ. ವೀಡಿಯೋದಲ್ಲಿ ಶಾರುಖ್ ಆಕ್ಷನ್ ಮಾಡುತ್ತಿರುವಂತೆ ಕಾಣುತ್ತಿದೆ. ಅದೇ ಸಮಯದಲ್ಲಿ, ಅವರ ಅಭಿಮಾನಿಗಳು ಇದನ್ನು ನೋಡಲು ತುಂಬಾ ಉತ್ಸುಕರಾಗಿದ್ದಾರೆ. ಸದ್ಯ ಈ ವಿಡಿಯೋವನ್ನು ಶಾರುಖ್‌ ಅಭಿಮಾನಿಗಳು ಟ್ರೆಂಡಿಂಗ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Pavitra Lokesh : 3ನೇ ಮದುವೆ ಆದ ʼಪವಿತ್ರಾ ಲೋಕೇಶ್‌ ಬ್ಯಾಂಗ್ರೌಡ್‌ʼ ಕೇಳಿದ್ರೆ ಶಾಕ್‌ ಆಗ್ತೀರಾ...! UPSC ಪರೀಕ್ಷೆ ಬರೆದಿದ್ದರು

ಈ ಹಿಂದೆ ಜನವರಿ 25 ರಂದು ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರ ಬಿಡುಗಡೆಯಾಗಿ 1000 ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ ಜವಾನ್‌ ಲೀಕ್‌ ಆಗಿರುವ ವಿಡಿಯೋ ನೋಡಿದ ಪ್ಯಾನ್ಸ್‌ ಈ ಸಿನಿಮಾ 1000 ಕೋಟಿ ದಾಖಲೆಯನ್ನೂ ಮಾಡಲಿದೆ ಎನ್ನುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News