)
Shraddha Kapoor Marriage: ಖ್ಯಾತ ಬಾಲಿವುಡ್ ಖಳನಾಯಕ ಮತ್ತು ನಟ ಶಕ್ತಿ ಕಪೂರ್ ಅವರ ಮನೆಯಲ್ಲಿ ಶೀಘ್ರದಲ್ಲೇ ಮದುವೆ ಸಂಭ್ರಮ ಸದ್ದು ಮಾಡಲಿದೆ.. ಅವರ ಮಗಳು ಶ್ರದ್ಧಾ ಕಪೂರ್ ಅವರ ಪ್ರೀತಿಯಲ್ಲಿ ಬಿದ್ದಿದ್ದು, ಶೀಘ್ರದಲ್ಲೇ ಅವರೊಂದಿಗಿನ ಸಂಬಂಧವನ್ನು ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ, ಇತ್ತೀಚಿನ ಸಂದರ್ಶನವೊಂದರಲ್ಲಿ ಶ್ರದ್ಧಾ ಕಪೂರ್ ತನ್ನ 'ಲೈಫ್ ಪಾರ್ಟ್ನರ್' ಬಗ್ಗೆ ಪ್ರಸ್ತಾಪಿಸಿದಾಗ, ವದಂತಿಗಳು ಮತ್ತೊಮ್ಮೆ ಹರಡಲು ಪ್ರಾರಂಭಿಸಿದವು. ರಾಹುಲ್ ಮೋದಿ ಡೇಟಿಂಗ್ ಬಗ್ಗೆ ಈಗಾಗಲೇ ಬಿ ಟೌನ್ ನಲ್ಲಿ ಸುದ್ದಿಯಾಗಿತ್ತು. ಆದರೆ ಈ ಸಂದರ್ಶನದ ನಂತರ ಶ್ರದ್ಧಾ ಪ್ರೀತಿಸುತ್ತಿರುವ ಬಗ್ಗೆ ಮಾತುಕತೆ ಶುರುವಾಗಿದೆ.
ಶ್ರದ್ಧಾ ಕಪೂರ್, ಪ್ರಮುಖ ನಿಯತಕಾಲಿಕೆಯೊಂದಿಗೆ ಮಾತನಾಡುತ್ತಾ, 'ತನ್ನ ಸಂಗಾತಿಯೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ' ಎಂದು ಖಚಿತಪಡಿಸಿದ್ದಾರೆ. ಇದರಿಂದಾಗಿ ಅಭಿಮಾನಿಗಳು ಯಾರು ಎಂದು ಹುಡುಕುವುದರಲ್ಲಿ ಬ್ಯುಸಿಯಾಗಿದ್ದಾರೆ. ಈಗ ಹೊಸ ರೆಡ್ಡಿಟ್ ಥ್ರೆಡ್ ಸಿಂಧಿ ಉದ್ಯಮಿಯೊಂದಿಗೆ ಶ್ರದ್ಧಾ ತನ್ನ ಪ್ರೀತಿಯಲ್ಲಿದ್ದಾರೆ.. ಎಂದು ಸುಳಿವು ನೀಡಿದೆ.
ಈ ರೆಡ್ಡಿಟ್ ಪೋಸ್ಟ್ ಪ್ರಕಾರ “ಸಿಂಧಿ ಕುಟುಂಬದಿಂದ ಬಂದಿರುವ ಮತ್ತು ಬಾಲಿವುಡ್‌ಗೆ ಸಂಬಂಧಿಸದ ವ್ಯಕ್ತಿಯೊಂದಿಗೆ ಶ್ರದ್ದಾ ಡೇಟಿಂಗ್ ಮಾಡುತ್ತಿದ್ದಾರೆ.. ದೆಹಲಿಯಲ್ಲಿ ಸ್ಟ್ರೀ-2 ಪ್ರಚಾರದ ಸಂದರ್ಭದಲ್ಲಿ ಅವರು ಅವರೊಂದಿಗೆ ಇದ್ದರು. ಹೀಗಾಗಿ ಶೀಘ್ರದಲ್ಲೇ ಮದುವೆಯಾಗುತ್ತಾರೆ" ಎಂದು ಹೇಳಲಾಗಿದೆ..
ಇದರರ್ಥ ಕಪೂರ್ ಕುಟುಂಬದಲ್ಲಿ ಮದುವೆ ಸದ್ದು ಶೀಘ್ರದಲ್ಲೇ ಕೇಳಬಹುದು... ಆದರೆ ವರ ಯಾರು ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಎಲ್ಲ ಪ್ರಶ್ನೆ ಹಾಗೂ ಗೊಂದಲಗಳಿಗೆ ಶ್ರದ್ಧಾ ಮಾತ್ರ ಉತ್ತರ ನೀಡಬೇಕಿದೆ.. ಇನ್ನು ನಟಿಯ ಕೆಲಸದ ಬಗ್ಗೆ ಮಾತನಾಡುವುದಾದರೇ, 'ಧೂಮ್ 4' ನಲ್ಲಿ ಶ್ರದ್ಧಾ ನಟಿಸಬಹುದು. ಒಂದು ವೇಳೆ ಹೀಗಾದರೇ ಇದು 'ತು ಜೂಥಿ ಮೈನ್ ಮಕ್ಕರ್' ನಂತರ ರಣಬೀರ್ ಕಪೂರ್ ಜೊತೆಗಿನ ಎರಡನೇ ಚಿತ್ರವಾಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ