ಕ್ರಿಕೆಟಿಗನಾಗಲು ಬಯಸಿದ್ದ ಇವರು ಇಂದು ದೇಶವೇ ಮೆಚ್ಚಿದ ಸಿಂಗರ್.!

Singer Atif Aslam: ಗಾಯಕ ಆತೀಫ್ ಅಸ್ಲಾಂ ಪಾಕಿಸ್ತಾನದಲ್ಲಿ ಮಾತ್ರವಲ್ಲದೆ ಭಾರತದಲ್ಲೂ ತಮ್ಮ ಪ್ರಭಾವ ಬೀರಿದ್ದಾರೆ. ಆತೀಫ್ ಅಸ್ಲಾಂ ಅವರ ಹಲವು ಹಾಡುಗಳು ಬಾಲಿವುಡ್‌ನಲ್ಲಿ ಜನಪ್ರಿಯವಾಗಿವೆ. ತಮ್ಮ ಕಂಠ ಸಿರಿಯಿಂದ ಜಗತ್ತಿನಾದ್ಯಂತ ಫೇಮಸ್ ಆಗಿದ್ದ ಆತೀಫ್ ಅಸ್ಲಾಂ ಕ್ರಿಕೆಟಿಗನಾಗಬೇಕು ಎಂದುಕೊಂಡಿದ್ದರು.

Written by - Chetana Devarmani | Last Updated : Mar 12, 2024, 03:35 PM IST
  • ಗಾಯಕ ಆತೀಫ್ ಅಸ್ಲಾಂ
  • ಬಾಲಿವುಡ್‌ನ ಜನಪ್ರಿಯ ಗಾಯಕ
  • ಇಂದು ದೇಶವೇ ಮೆಚ್ಚಿದ ಸಿಂಗರ್.!
ಕ್ರಿಕೆಟಿಗನಾಗಲು ಬಯಸಿದ್ದ ಇವರು ಇಂದು ದೇಶವೇ ಮೆಚ್ಚಿದ ಸಿಂಗರ್.!  title=

Atif Aslam interesting facts: ಮಾರ್ಚ್ 12, 1983 ರಂದು ಜನಿಸಿದ ಪಾಕಿಸ್ತಾನಿ ಗಾಯಕ ಆತೀಫ್ ಅಸ್ಲಾಂ ಇಂದು ತಮ್ಮ 41 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆತೀಫ್ ಅಸ್ಲಾಂ 2003 ರಲ್ಲಿ ಜಲ್ ಬ್ಯಾಂಡ್‌ನೊಂದಿಗೆ ತಮ್ಮ ಸಂಗೀತ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ ಆತಿಫ್ ಸಂಗೀತ ಜಗತ್ತಿಗೆ ಬರುವ ಮೊದಲು ಕ್ರಿಕೆಟಿಗನಾಗಲು ಬಯಸಿದ್ದರು.

ಪಾಕಿಸ್ತಾನಿ ವೆಬ್‌ಸೈಟ್ ವರದಿ ಪ್ರಕಾರ, ಆತೀಫ್ ಅಸ್ಲಾಂ ಟಾಕ್ ಶೋನಲ್ಲಿ ಈ ಬಗ್ಗೆ ಬಹಿರಂಗಪಡಿಸಿದ್ದಾರೆ. ಗಾಯಕನಾಗುವ ಯೋಚನೆಯೇ ಇರಲಿಲ್ಲ ಎಂದು ಆತೀಫ್ ಅಸ್ಲಾಂ ಹೇಳಿದ್ದರು. ಅವರು ಕ್ರೀಡಾಪಟುವಾಗಿದ್ದರು ಮತ್ತು ಯಾವಾಗಲೂ ವೃತ್ತಿಪರ ಕ್ರಿಕೆಟಿಗರಾಗಲು ಬಯಸಿದ್ದರು.

ನಾನು ವೃತ್ತಿಪರ ಕ್ರಿಕೆಟಿಗನಾಗಲು ಯೋಜಿಸುತ್ತಿದ್ದೆ. ನಾನು ಅಥ್ಲೀಟ್ ಆಗಿದ್ದೆ. ನಾನು ಕೂಡ ಅದಕ್ಕಾಗಿ ಕಷ್ಟಪಟ್ಟೆ, ಆದರೆ ನನ್ನ ಪೋಷಕರು ಅದನ್ನು ಹವ್ಯಾಸವಾಗಿ ತೆಗೆದುಕೊಂಡರು ಎಂದಿದ್ದಾರೆ. 

ಇದನ್ನೂ ಓದಿ: ನಿರ್ದೇಶಕ ವಿನಾಯಕ ಹುಟ್ಟುಹಬ್ಬಕ್ಕೆ ʻಫುಲ್ ಮೀಲ್ಸ್ʼ ಮೇಕಿಂಗ್ ವಿಡಿಯೋ ರಿಲೀಸ್‌ 

ನಾನು ಶಾಂತ ಮತ್ತು ಏಕಾಂಗಿಯಾಗಿದ್ದೇನೆ. ನನ್ನ ಕೆಟ್ಟ ಸಮಯದಲ್ಲಿ ನಾನು ಒಂಟಿತನ ಅನುಭವಿಸುತ್ತಿದ್ದಾಗ ಸಂಗೀತವು ನನ್ನನ್ನು ಶಾಂತಗೊಳಿಸಿತು. ನನ್ನನ್ನು ದೇವರಿಗೆ ಹತ್ತಿರವಾಗಿಸಿತು ಎಂದು ಆತೀಫ್ ಅಸ್ಲಾಂ ಹೇಳಿದರು.

ಆತೀಫ್ ಅಸ್ಲಾಂ ಅವರು ತಮ್ಮ ಮೊದಲ ಸಿಂಗಲ್ 'ಆದತ್' ಅನ್ನು ತಮ್ಮ ಸ್ವಂತ ಪಾಕೆಟ್ ಮನಿಯಿಂದ ಪ್ರಾರಂಭಿಸಿದರು. ನನ್ನ ಪಾಕೆಟ್ ಮನಿಯಿಂದ ನನ್ನ ಮೊದಲ ಹಾಡು ಆದತ್ ರೆಕಾರ್ಡ್ ಮಾಡಿದ್ದೇನೆ ಎಂದು ಹೇಳಿದ್ದರು. ಅಲ್ಲಿಂದ ನನ್ನ ಸಂಗೀತದ ಜರ್ನಿ ಶುರುವಾಯ್ತು ಎಂದರು. 

ಇದನ್ನೂ ಓದಿ: ನಿರ್ದೇಶಕನೊಂದಿಗೆ ಪ್ರೀತಿ, ಮದುವೆ ಮುಂಚೆಯೇ ಗರ್ಭಿಣಿ.. ಅಬಾರ್ಷನ್‌ ಮಾಡಬೇಕಂದ್ರೆ 75 ಲಕ್ಷ ಕೊಡಿ ಎಂದ ಖ್ಯಾತ ನಟಿ ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News