ನವದೆಹಲಿ: ಭಾನುವಾರ ತಲಾಕ್ ಕುರಿತು ಹೇಳಿಕೆ ನೀಡಿದ್ದ RSS ಪ್ರಮುಖ ಮೋಹನ್ ಭಾಗವತ್, "ಇತ್ತೀಚಿಗೆ ಅಧಿಕ ಶಿಕ್ಷಣ ಹೊಂದಿದ ಮತ್ತು ಸಂಪನ್ನತೆ ಹೊಂದಿದ ಕುಟುಂಬಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತಲಾಕ್ ಪ್ರಕರಣಗಳು ಕೇಳಿ ಬರುತ್ತಿವೆ, ಏಕೆಂದರೆ ಶಿಕ್ಷಣ ಹಾಗೂ ಸಂಪನ್ನತೆ ಅಹಂಕಾರ ಹೆಚ್ಚುಸುತ್ತಿದ್ದ ಕಾರಣ ಕುಟುಂಬಗಳಲ್ಲಿ ಬಿರುಕು ಮೂಡುತ್ತಿದೆ" ಎಂದಿದ್ದರು. ಭಾಗವತ್ ಅವರ ಹೇಳಿಕೆಗೆ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿರುವ ಖ್ಯಾತ ಬಾಲಿವುಡ್ ನಟಿ ಸೋನಂ ಕಪೂರ್ ತಿಳುವಳಿಕೆಯುಳ್ಳ ವ್ಯಕ್ತಿ ಈ ರೀತಿ ಹೇಳಿಕೆ ನೀಡಲು ಸಾಧ್ಯವಿಲ್ಲ. ಈ ಹೇಳಿಕೆ ಶುದ್ಧ ಮೂರ್ಖತನದ ಹೇಳಿಕೆ ಎಂದಿದ್ದಾರೆ. ಸೋನಂ ಮಾಡಿರುವ ಈ ಟ್ವೀಟ್ ಗೆ ಇದೀಗ ವ್ಯಾಪಕ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಕೆಲವರು ಸೋನಂ ಅವರನ್ನು ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದರೆ, ಕೆಲವರು ಯಾವುದೇ ಒಂದು ವಿಷಯದ ಮೇಲೆ ಮೋಹನ್ ಭಗವತ್ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ ಎನ್ನುತ್ತಿದ್ದು, ಸೋನಂ ಅವರು ಈ ರೀತಿಯ ಭಾಷೆ ಯಾಕೆ ಪ್ರಯೋಗಿಸಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಯಾವ ರೀತಿ ಸೋನಂ ತನ್ನ ಅಭಿಪ್ರಾಯ ಮಂಡಿಸಿದ್ದಾರೆ, ಅದೇ ರೀತಿ ಮೋಹನ್ ಭಾಗವತ್ ಕೂಡ ತಮ್ಮ ಅಭಿಪ್ರಾಯ ಹೇಳಿದ್ದಾರೆ ಎಂದಿದ್ದಾರೆ.
ತಮ್ಮ ಭಾಷಣದಲ್ಲಿ ಹೇಳಿಕೆ ನೀಡಿದ್ದ ಮೋಹನ್ ಭಾಗವತ್, ಇತ್ತೀಚಿಗೆ ತಲಾಕ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರು ಅರ್ಥಹೀನ ವಿಷಯ ಮೇಲೆ ಜಗಳ ಕಾಯುತ್ತಿದ್ದಾರೆ. ಶೈಕ್ಷಣಿಕವಾಗಿ ಮುಂದುವರೆದ ಹಾಗೂ ಸಂಪದ್ಭರಿತ ಕುಟುಂಬಗಳಿಂದ ಕೇಳಿ ಬರುತ್ತಿವೆ. ಹೀಗಾಗಿ ಕುಟುಂಬದಲ್ಲಿ ಬಿರುಕು ಮೂಡುತ್ತಿವೆ. ಇದರಿಂದ ಸಮಾಜದಲ್ಲಿಯೂ ಕೂಡ ಬಿರುಕು ಕಾಣಿಸಿಕೊಳ್ಳುತ್ತಿದ್ದು, ಸಮಾಜವೂ ಕೂಡ ಒಂದು ಕುಟುಂಬದ ಸಮಾನ ಎಂದಿದ್ದರು.
ಯಾವುದೇ ಒಂದು ವಿಷಯದ ಮೇಲೆ ಹಿಂಜರಿಯದೆ ಸೋನಂ ತನ್ನ ಅಭಿಪ್ರಾಯ ಮಂಡಿಸುತ್ತಾರೆ. ಇತ್ತೀಚೆಗಷ್ಟೇ ಸಾಮಾಜಿಕ ಮಾಧ್ಯಮಗಳ ಮೇಲೆ ಸೋನಂ ಅವರ ತಂದೆ ಅನಿಲ್ ಕಪೂರ್, ಭೂಗತ ಪಾತಕಿ ದಾವೂದ್ ಇಬ್ರಾಹಿಮ್ ಜೊತೆಗೆ ಇರುವ ಫೋಟೋ ಹರಿಬಿಟ್ಟು ಟ್ರೊಲ್ ಮಾಡಲಾಗಿತ್ತು. ಇದಕ್ಕೂ ಕೂಡ ಸೋನಂ ಕಪೂರ್ ಉತ್ತರ ನೀಡಿದ್ದರು. ಇತ್ತೀಚೆಗಷ್ಟೇ ಶಾಹೀನ್ ಬಾಗ್ ನಲ್ಲಿ ನಡೆದ ಫೈರಿಂಗ್ ಕುರಿತು ಸೋನಂ ತನ್ನ ಪ್ರತಿಕ್ರಿಯೆ ನೀಡಿದ್ದರು. ಈ ಕುರಿತು ಮಾತನಾಡಿದ್ದ ಸೋನಂ, ಇಂತಹ ಸಂಗತಿ ಕುರಿತು ನಾನು ಯೋಚಿಸಿರಲಿಲ್ಲ, ಭಾರತದಲ್ಲಿ ಇಂತಹ ಘಟನೆ ನಡೆಯಲಿದೆ ಇಂದು ಯೋಚಿಸಿರಲಿಲ್ಲ. ಇಂತಹ ಅಪಾಯಕಾರಿ ಹಾಗೂ ವಿಭಜನಕಾರಿ ರಾಜಕೀಯವನ್ನು ನಿಲ್ಲಿಸಿ. ಇದರಿಂದ ದ್ವೇಷ ಪಸರಿಸುತ್ತಿದೆ ಎಂದು ಸೋನಂ ಹೇಳಿದ್ದರು. ಸೋನಂ ಮಾಡಿದ್ದ ಈ ಟ್ವೀಟ್ ಗೆ ನೆಟ್ಟಿಗರು ಭಾರಿ ಟ್ರೊಲ್ ಮಾಡಿದ್ದರು.
ಸೋನಂ ಮಾಡಿದ್ದ ಈ ಟ್ವೀಟ್ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು ಅವರ ತಂದೆ ಅನಿಲ್ ಕಪೂರ್ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಮ್ ಒಟ್ಟಿಗೆ ಇರುವ ಹಳೆ ಫೋಟೋವೊಂದನ್ನು ಹಂಚಿಕೊಂಡು ಟ್ರೊಲ್ ಮಾಡಿದ್ದರು. ಈ ಫೋಟೋ ಹಂಚಿಕೊಂಡಿದ್ದ ಅಶೋಕ್ ಶ್ರೀವಾಸ್ತವ್ ಹೆಸರಿನ ಬಳಕೆದಾರರು "ತಾವು ತುಂಬಾ ಪ್ರಖರವಾಗಿ ತಮ್ಮ ಹೇಳಿಕೆಗಳನ್ನು ನೀಡುತ್ತಿರಿ. ದಾವೂದ್ ಇಬ್ರಾಹಿಮ್ ಜೊತೆಗೆ ನಿಮ್ಮ ತಂದೆ ಕಾಣಿಸಿಕೊಂಡಿರುವ ಈ ಫೋಟೋ ಸಂಬಂಧ ನಿಮ್ಮ ತಂದೆಯ ಕರ್ಮದ ಜೊತೆಗೆ ಇದೆಯಾ ಅಥವಾ ಧರ್ಮದ ಜೊತೆಗೆ ಇದೆಯಾ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸೋನಂ, ತಮ್ಮ ತಂದೆ ರಾಜ್ ಕಪೂರ್ ಹಾಗೂ ಕೃಷ್ಣಾ ಕಪೂರ್ ಜೊತೆಗೆ ಮ್ಯಾಚ್ ನೋಡಲು ಹೋಗಿದ್ದರು. ಅವರು ಬಾಕ್ಸ್ ನಲ್ಲಿದ್ದರು. ಬೇರೆಯವರೆಡೆಗೆ ನೀವು ಬೆರಳು ಎತ್ತಿ ತೋರಿಸುವುದನ್ನು ನಿಲ್ಲಿಸಬೇಕು, ಏಕೆಂದರೆ ಮೂರು ಬೆರಳುಗಳು ನಿಮ್ಮೆಡೆಗೆ ವಾಲಿರುತ್ತವೆ. ಹಿಂಸೆ ಪಸರಿಸುವ ನಿಮ್ಮನ್ನು ದೇವರು ಕ್ಷಮಿಸಲಿ ಎಂದಿದ್ದರು.