ನಮ್ಮ ಹೋರಾಟ ಬ್ರಿಟೀಷರ ವಿರುದ್ಧ ಇತ್ತು. ದೇಶಕ್ಕೆ ಸ್ವಾತಂತ್ರ‍್ಯ ಬಂದ ನಂತರ, ಸಂಘಗಳನ್ನ ನೋಂದಣಿ ಮಾಡಬೇಕೆಂದು ಭಾರತ ಸರ್ಕಾರ ಕಡ್ಡಾಯಗೊಳಿಸಲಿಲ್ಲ. ನಮ್ಮನ್ನು ಸಾಮಾನ್ಯ ನಂಬಿಕೆಗಳನ್ನ ಹಂಚಿಕೊಳ್ಳುವ ಮತ್ತು ಸ್ವಯಂಪ್ರೇರಣೆಯಿಂದ ಒಟ್ಟಾಗಿ ಕೆಲಸ ಮಾಡುವ ಜನರ ಗುಂಪು ಎಂದು ವರ್ಗೀಕರಿಸಲಾಗಿದೆ. ನಮ್ಮದು ಮಾನ್ಯತೆ ಪಡೆದ ಸಂಸ್ಥೆ ಎಂದು ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.
RSS Ban : ಸರ್ಕಾರಿ ಶಾಲೆ, ಜಾಗ, ಪ್ರದೇಶಗಳಲ್ಲಿ ಸಂಘದ ಚಟುವಟಿಕೆ, ಗಣವೇಶದಾರಿಗಳ ಪಥಸಂಚಲನಕ್ಕೆ ಕಡಿವಾಣ ಹಾಕುವ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.ಈ ನಡುವೆ ಸಚಿವ ಪ್ರಿಯಾಂಕ್ ಖರ್ಗೆಗೆ ಮತ್ತು ಕುಟುಂಬ ಸದಸ್ಯರಿಗೆ ಬೆದರಿಕೆ ಕರೆಗಳು ಬರ್ತಿವೆ ಅಂತ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.. ಇತ್ತ ಸರ್ಕಾರದ ನಿರ್ಧಾರದ ಕಡೆಗೆ ಸಂಘದ ಪ್ರಮುಖರು ಕಣ್ಣು ನೆಟ್ಟು ಕುಳಿತಿದ್ದಾರೆ. ಹಾಗಾದ್ರೆ ರಾಜ್ಯದಲ್ಲಿ ಏನಾಗ್ತಿದೆ..ಇದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..
"ಪರಶಿವನ ಮಹಿಮೆ ಪ್ರಪಂಚದಾದ್ಯಂತ ತಿಳಿದಿದೆ. ಅಂತಹ ಶಿವ ಎಲ್ಲಾ ಸಜೀವ ಮತ್ತು ನಿರ್ಜೀವ ಪ್ರಪಂಚಗಳಲ್ಲಿಯೂ ಇದ್ದಾನೆ. ಅದಕ್ಕಾಗಿಯೇ ಇಲ್ಲಿ ಜನರಲ್ಲಿ ಜನಾರ್ದನನನ್ನು ನೋಡಿ; ನಮೋದಲ್ಲಿ ನಾರಾಯಣನನ್ನು ನೋಡಿ ಎಂದು ಹೇಳಲಾಗಿದೆ. ಶಿವಲಿಂಗ ಇತ್ಯಾದಿ ಶಿವನ ಸಂಕೇತಗಳನ್ನು ಪೂಜಿಸಬೇಕು. ಎಲ್ಲಾ ಜೀವಿಗಳಲ್ಲಿ ಜೀವವನ್ನು ಹಿಡಿದಿಟ್ಟುಕೊಳ್ಳುವ ಏಕೈಕ ವ್ಯಕ್ತಿ ಶಿವ" ಎಂದು ಹೇಳಿದ್ದಾರೆ.
ಒಬ್ಬ ವ್ಯಕ್ತಿಯು ಸೂಪರ್ ಮ್ಯಾನ್ ಆಗಲು ಬಯಸಬಹುದು. ನಂತರ ದೇವತೆ ಮತ್ತು ಭಗವಾನ್ ಮತ್ತು ವಿಶ್ವರೂಪ ಆಗಲು ಹಾತೊರೆಯಬಹುದು. ಆದರೆ ಮುಂದೆ ಏನಾಗುತ್ತದೆ ಎಂಬ ಅರಿವು ಯಾರಿಗೂ ಇರಲ್ಲ ಅನ್ನೋ ಮೂಲಕ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟಿದ್ದಾರೆ.
2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ನಂತರ ಅವರು ತಮ್ಮ ಮೊದಲ ಹೇಳಿಕೆಯಲ್ಲಿ, "ಚುನಾವಣೆಯು ಒಮ್ಮತವನ್ನು ನಿರ್ಮಿಸುವ ಪ್ರಕ್ರಿಯೆಯಾಗಿದೆ. ಸಂಸತ್ತಿಗೆ ಎರಡು ಬದಿಗಳಿವೆ ಆದ್ದರಿಂದ ಯಾವುದೇ ಪ್ರಶ್ನೆಯ ಎರಡೂ ಅಂಶಗಳನ್ನು ಪ್ರಸ್ತುತಪಡಿಸಬಹುದು."ಎಂದು ಅವರು ಹೇಳಿದ್ದಾರೆ.
Swami Prasad Maurya: ಭಾರತದಲ್ಲಿರುವ ಎಲ್ಲರೂ ಭಾರತೀಯರು. ನಮ್ಮ ದೇಶದ ಸಂವಿಧಾನವು ಎಲ್ಲಾ ಜಾತಿ, ಧರ್ಮ, ಪಂಗಡ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ’ ಎಂದು ಸ್ವಾಮಿ ಪ್ರಸಾದ್ ಮೌರ್ಯ ಟ್ವೀಟ್ ಮಾಡಿದ್ದಾರೆ.
Mohan Bhagwat On Hindu-Muslim Unity: ಎಲ್ಲಿಯವರೆಗೆ ನಾವು ಒಗ್ಗಟ್ಟಾಗಿರುವೆವೋ ಅಲ್ಲಿಯವರೆಗೆ ಜಗತ್ತಿನ ಯಾವುದೇ ಶಕ್ತಿ ನಮ್ಮನ್ನು ಸೋಲಿಸಲ ಸಾಧ್ಯವಿಲ್ಲ. ಇದೆ ಕಾರಣದಿಂದ ಬಾಹ್ಯ ಶಕ್ತಿಗಳು ಯಾವಾಗಲೂ ವಿಪರೀತ ಪ್ರಯತ್ನದಲ್ಲಿ ತೊಡಗಿರುತ್ತವೆ ಎಂದು ಮೋಹನ್ ಭಾಗ್ವತ್ ಹೇಳಿದ್ದಾರೆ.
Mohan Bhagwat : ಭಾರತದಲ್ಲಿ ವಾಸಿಸುವ ಎಲ್ಲಾ ಜನರು 'ವ್ಯಾಖ್ಯಾನದ ಪ್ರಕಾರ' ಹಿಂದೂಗಳು ಮತ್ತು ನೆಲದ ಸಾಂಸ್ಕೃತಿಕ ನೀತಿಯಿಂದಾಗಿ ದೇಶದಲ್ಲಿ ವೈವಿಧ್ಯತೆ ಪ್ರವರ್ಧಮಾನಕ್ಕೆ ಬಂದಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಪ್ರತಿಪಾದಿಸಿದರು. ಭಾರತ ಮಾತೆಯನ್ನು ಸ್ತುತಿಸುವ ಸಂಸ್ಕೃತ ಶ್ಲೋಕಗಳನ್ನು ಹಾಡಲು ಒಪ್ಪುವ ಮತ್ತು ನೆಲದ ಸಂಸ್ಕೃತಿಯ ಸಂರಕ್ಷಣೆಗೆ ಬದ್ಧರಾಗಿರುವ ಯಾರಾದರೂ ಹಿಂದೂ ಎಂದು ಹೇಳಿದ್ದಾರೆ.
Uttishtha Bharat Programme: ಭಾರತವನ್ನು ದೊಡ್ದದಾಗಿಸಬೇಕು ಎಂದರೆ ನಾವು ಭಯಪಡುವುದನ್ನು ಬಿಡಬೇಕು ಎಂದು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ನಾವು ಭಯಪಡುವುದನ್ನು ನಿಲ್ಲಿಸಿದಾಗ, ಭಾರತವು ಅಖಂಡವಾಗಲಿದೆ. ನಾವು ಅಹಿಂಸೆಯ ಆರಾಧಕರು, ಆದರೆ ದೌರ್ಬಲ್ಯದ ಆರಾಧಕರಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಜ್ಞಾನವಾಪಿ ವಿವಾದವು ನಂಬಿಕೆಯ ಕೆಲವು ವಿಷಯಗಳನ್ನು ಒಳಗೊಂಡಿದ್ದು, ನ್ಯಾಯಾಲಯದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ಆದರೆ ಪ್ರತಿ ಮಸೀದಿಯಲ್ಲಿ ಶಿವಲಿಂಗ'ವನ್ನು ಹುಡುಕುವ ಮೂಲಕ ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.
ಹಿಂಸಾಚಾರದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥರು ಮಾನವೀಯತೆಯನ್ನು ಕಾಪಾಡಲು ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸುವ ಅಗತ್ಯವನ್ನು ಒತ್ತಿ ಹೇಳಿದರು.
RSS Chief Mohan Bhagwat: 'ಧರ್ಮ ಸಂಸತ್' ನಲ್ಲಿ ಹೇಳಿರುವ ವಿವಾದಾತ್ಮಕ ವಿಷಯಗಳಿಗೆ ಮೋಹನ್ ಭಾಗವತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಧರ್ಮ ಸಂಸತ್'ನಲ್ಲಿ ನೀಡಿರುವ ಹೇಳಿಕೆಗಳು ಹಿಂದೂಗಳ ಮಾತುಗಳಲ್ಲ ಮತ್ತು ಹಿಂದುತ್ವವನ್ನು ಅನುಸರಿಸುವ ಜನರು ಅದನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
RSS Chief Mohan Bhagwat - ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ RSS ಮುಖ್ಯಸ್ಥ ಮೋಹನ್ ಭಾಗವತ್, ಹಲವು ಮಹತ್ವಪೂರ್ಣ ಹೇಳಿಕೆಗಳನ್ನು ಹೀದಿದ್ದಾರೆ. ಕಳೆದ 96 ವರ್ಷಗಳಲ್ಲಿ RSSಗೆ ಕೇವಲ ವಿರೋಧ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ.
RSS Chief On India After Independence - ದೆಹಲಿಯಲ್ಲಿ ನಡೆದ ಸಂತ ಈಶ್ವರ ಸಮ್ಮಾನ್ 2021 (Sant Eeshwar Samman 2021) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat), 'ಕಳೆದ 75 ವರ್ಷಗಳಲ್ಲಿ ನಾವು (ದೇಶ) ಸಾಧಿಸಬೇಕಾದಷ್ಟು ಪ್ರಗತಿ ಸಾಧಿಸಿಲ್ಲ' ಎಂದು ಹೇಳಿದ್ದಾರೆ. 'ದೇಶವನ್ನು (India After Independence) ಮುನ್ನಡೆಸುವ ಹಾದಿಯಲ್ಲಿ ಸಾಗಿದರೆ ನಾವು ಖಂಡಿತಾ ಮುಂದೆ ಸಾಗುತ್ತೇವೆ. ನಾವು ಆ ದಾರಿಯಲ್ಲಿ ಸಾಗಲಿಲ್ಲ. ಹೀಗಾಗಿ ನಾವು ಮುಂದೆಯೂ ಕೂಡ ಸಾಗಲಿಲ್ಲ' ಎಂದೂ ಕೂಡ ಅವರು ಹೇಳಿದ್ದಾರೆ.
RSS Chief's Statement: ದೌರ್ಬಲ್ಯವೇ ಪಾಪ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಕೇವಲ ಒಬ್ಬ ವ್ಯಕ್ತಿ ಬಲಶಾಲಿಯಾಗಲು ಸಾಧ್ಯವಿಲ್ಲ. ಕಲಿಯುಗದಲ್ಲಿ ಸಂಘಟನೆಯನ್ನು ಶಕ್ತಿ ಎಂದು ಪರಿಗಣಿಸಲಾಗಿದೆ. ನಾವು ಎಲ್ಲರನ್ನು ನಮ್ಮೊಂದಿಗೆ ತೆಗೆದುಕೊಂಡು ಮುಂದಕ್ಕೆ ಸಾಗುತ್ತೇವೆ ಎಂದು ಅವರು ಹೇಳಿದ್ದಾರೆ.
Ranjit Savarkar On Mahatma Gandhi - 'ಭಾರತದಂತಹ ವಿಶಾಲ ದೇಶದಲ್ಲಿ, ಈ ದೇಶವನ್ನು ಕಟ್ಟಲು ಸಹಾಯ ಮಾಡಿದ ಸಾವಿರಾರು ಮಹಾನ್ ವ್ಯಕ್ತಿಗಳನ್ನು ಮರೆತುಬಿಡಲಾಗಿದೆ. ಈ ದೇಶದ ಇತಿಹಾಸ 5000 ವರ್ಷಗಳಷ್ಟು ಹಳೆಯದು. ನನ್ನ ಪ್ರಕಾರ ಗಾಂಧಿ (Mahatma Gandhi) ರಾಷ್ಟ್ರಪಿತ (Father Of Nation) ಅಲ್ಲ. ಈ ದೇಶ ಕೇವಲ ನಲವತ್ತೈದು ವರ್ಷಗಳಷ್ಟು ಹಳೆಯದಲ್ಲ. ನಾನು ಕೂಡ ರಾಷ್ಟ್ರಪಿತನ ಕಲ್ಪನೆಯನ್ನು ನಂಬುವುದಿಲ್ಲ' ಎಂದು ವೀರ ಸಾವರ್ಕರ್ (Veer Savarkar) ಅವರ ಪುತ್ರ ರಂಜೀತ್ ಸಾವರ್ಕರ್ (Ranjit Savarkar) ಹೇಳಿದ್ದಾರೆ.
Mohan Bhagvat On Veer Savarkar - ಸರ್ ಸಯ್ಯದ್ ಅಹ್ಮದ್ ಖಾನ್ (Sir Sayed Ahmed Khan) ಅವರನ್ನು ಹಿಂದೂ ಮಹಾಸಭಾ (Muslim Mahasabha) ಮೂಲಕ ಸ್ವಾಗತಿಸಲಾಗಿತ್ತು ಮತ್ತು ಆಗ ಅವರನ್ನು ಮೊದಲ ಮುಸ್ಲಿಂ ಬ್ಯಾರಿಸ್ಟರ್ ಎಂದು ಉಲ್ಲೇಖಿಸಿದಾಗ ಅವರು ನಾನು ಇತರರಿಗಿಂತ ಭಿನ್ನವಾಗಿದ್ದೆನೆಯೇ? ಎಂದು ಪ್ರಶ್ನಿಸಿದ್ದರು ಎಂದು ಭಾಗವತ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.