ನಟ ರಾಮ್‌ಚರಣ್‌ ಉಪಾಸನಾಗೂ ಮೊದಲು ಈ ಖ್ಯಾತ ನಟಿಯನ್ನು ಪ್ರೀತಿಸಿದ್ದರಂತೆ! ಯಾರು ಗೊತ್ತಾ ಆ ಚೆಲುವೆ?!

Megha Star Ram Charan: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತಮ್ಮ ಮಾಸ್ ಇಮೇಜ್ ಜೊತೆಗೆ ಉತ್ತಮ ಲೇಡಿ ಫ್ಯಾನ್‌ ಫಾಲೋಯಿಂಗ್ ಹೊಂದಿದ್ದಾರೆ. ಹಲವರಿಗೆ ಆತ ಕ್ರಶ್... ಕಾಮನ್ ಲೇಡಿ ಆಡಿಯನ್ಸ್ ಜೊತೆಗೆ.. ಸೆಲೆಬ್ರಿಟಿಗಳೂ ಚರಣ್ ರಾಮ್‌ ಚರಣ್‌ ಎಂದರೇ ಎಲ್ಲಿಲ್ಲದ ಪ್ರೀತಿ..    

Written by - Savita M B | Last Updated : Apr 30, 2024, 01:24 PM IST
  • ಕಾಮನ್ ಮ್ಯಾನ್ ಆಗಿರಲಿ, ಸೆಲೆಬ್ರಿಟಿಯೇ ಆಗಿರಲಿ ಅವರಿಗೆ ಅವರದೇ ಆದ ಇಷ್ಟಗಳಿರುತ್ತವೆ.
  • ಮೆಗಾ ಪವರ್ ಸ್ಟಾರ್ ರಾಮ್‌ ಚರಣ್‌ ಮದುವೆಗೂ ಮುನ್ನ ಖ್ಯಾತ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರಂತೆ
ನಟ ರಾಮ್‌ಚರಣ್‌ ಉಪಾಸನಾಗೂ ಮೊದಲು ಈ ಖ್ಯಾತ ನಟಿಯನ್ನು ಪ್ರೀತಿಸಿದ್ದರಂತೆ! ಯಾರು ಗೊತ್ತಾ ಆ ಚೆಲುವೆ?! title=

Ram Charan: ಕಾಮನ್ ಮ್ಯಾನ್ ಆಗಿರಲಿ, ಸೆಲೆಬ್ರಿಟಿಯೇ ಆಗಿರಲಿ ಅವರಿಗೆ ಅವರದೇ ಆದ ಇಷ್ಟಗಳಿರುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದಲ್ಲಿ ಒಮ್ಮೆಯಾದರು ಪ್ರೀತಿಯಲ್ಲಿ ಬೀಳುತ್ತಾರೆ.. ಅದೇ ರೀತಿ ಮೆಗಾ ಪವರ್ ಸ್ಟಾರ್ ರಾಮ್‌ ಚರಣ್‌ ಮದುವೆಗೂ ಮುನ್ನ ಖ್ಯಾತ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರಂತೆ.. ಈ ಬಗ್ಗೆ ಅವರೇ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಮಾತನಾಡಿದ್ದರು.. ಹಾಗಾದ್ರೆ ರಾಮ್‌ಚರಣ್‌ ಮೊದಲ ಕ್ರಷ್‌ ಯಾರು ಎನ್ನುವುದನ್ನು ಇದೀಗ ತಿಳಿಯೋಣ..  

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಈಗ ಗ್ಲೋಬ್‌ಟ್ರೋಟಿಂಗ್ ಸ್ಟಾರ್ ಆಗಿ ಬದಲಾಗಿದ್ದಾರೆ. ಅವರೀಗ ಪ್ಯಾನ್ ಇಂಡಿಯಾ ಕ್ರೇಜಿ ಸ್ಟಾರ್ ಮಾತ್ರವಲ್ಲ.. ಹಾಲಿವುಡ್ ಮಾಧ್ಯಮವನ್ನೂ ಸೆಳೆದ ಹೀರೋ. RRR ಚಿತ್ರದ ಮೂಲಕ ಆಸ್ಕರ್ ಗೆದ್ದ ಸಾಧಕ ರಾಮ್ ಚರಣ್. ಇದೇ ಸಿನಿಮಾದ ಮೂಲಕ ಮೆಗಾ ಹೀರೋಗೆ ಜಗತ್ತಿನಾದ್ಯಂತ ಮನ್ನಣೆ ಸಿಕ್ಕಿದ್ದು ಮತ್ತು ಹಾಲಿವುಡ್ ನಲ್ಲಿ ಸದ್ದು ಮಾಡಿದ್ದು.. ಆಸ್ಕರ್ ಝೇಂಕಾರದ ಸಂದರ್ಭದಲ್ಲಿ ಚರಣ್ ಹಾಲಿವುಡ್ ಮಾಧ್ಯಮಗಳಿಗೆ ಸಂದರ್ಶನವನ್ನೂ ನೀಡಿ,. ಅದೇ ಸಂದರ್ಭದಲ್ಲಿ ಅವರು ತಮ್ಮ ಮೊದಲ ಕ್ರಶ್ ಬಗ್ಗೆ ಮಾತನಾಡಿದ್ದರು.. 

ಇದನ್ನೂ ಓದಿ-Mrunal Thakur: ದುಬಾರಿ ಜಾರ್ಜೆಟ್ ಸೀರೆಯಲ್ಲಿ ಕಂಗೊಳಿಸಿದ ʻಸೀತಾ ರಾಮಂʼ ಸುಂದರಿ: ಇದರ ಬೆಲೆಯೆಷ್ಟು ಗೊತ್ತೇ?

ಚರಣ್ ಕಳೆದ ವರ್ಷ ಅಂತರಾಷ್ಟ್ರೀಯ ಮಾಧ್ಯಮವೊಂದಕ್ಕೆ ಆನ್‌ಲೈನ್ ಸಂದರ್ಶನ ನೀಡಿ ಕೆಲವು ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದರು. ಅದರಲ್ಲಿ.. ರಾಮ್ ಚರಣ್ ಗೆ ನಾಯಕಿಯರಲ್ಲಿ ಕ್ರಶ್ ಯಾರು...? ಎಂದು ಕೇಳಿದಾಗ ರಾಮ್ ಚರಣ್ ಸ್ವಲ್ಪ ಮುಜುಗರಕ್ಕೊಳಗಾಗಿ.. ಹಾಲಿವುಡ್ ನಾಯಕಿಯರಾದ ಜೂಲಿಯಾ ರಾಬರ್ಟ್ಸ್ ಮತ್ತು ಕ್ಯಾಥರೀನ್ ಝೀಟಾ ಜೋನ್ಸ್ ಅವರನ್ನು ತುಂಬಾ ಇಷ್ಟಪಡುತ್ತಿದ್ದೆ.. ಅವರೇ ನನಗೆ ಮೊದಲ ಕ್ರಷ್ ಎಂದು ಹೇಳಿದ್ದಾರೆ.. 

ಆರ್‌ಆರ್‌ಆರ್ ಸಿನಿಮಾ ನೀಡಿದ ಮನ್ನಣೇಯಿಂದ ರಾಮ್ ಚರಣ್ ಸಾಲು ಸಾಲು ಚಿತ್ರಗಳೊಂದಿಗೆ ಮುನ್ನುಗ್ಗುತ್ತಿದ್ದಾರೆ. ಸದ್ಯ ಸೌತ್ ಸ್ಟಾರ್ ಡೈರೆಕ್ಟರ್ ಶಂಕರ್ ಕಾಂಬಿನೇಷನ್ ನಲ್ಲಿ ಗೇಮ್ ಚೇಂಜರ್ ಸಿನಿಮಾ ಮಾಡುತ್ತಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಅಂಜಲಿ, ಶ್ರೀಕಾಂತ್, ಸುನೀಲ್, ಜಯರಾಮ್ ಮುಂತಾದ ತಾರೆಯರು ನಟಿಸುತ್ತಿದ್ದಾರೆ.  

ಇದನ್ನೂ ಓದಿ-Avneet Kaur: "ಬಂಟಿ ನಿಮ್ಮ ಸೋಪು ಸ್ಲೋನಾ" ಅಂತ ಡೈಲಾಗ್‌ ಹೊಡೆದ ಲೈಫ್‌ಬಾಯ್‌ ಬೆಡಗಿ ಈಗ ಹೇಗಿದ್ದಾರೆ ಗೊತ್ತೇ??

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News