SS Rajamouli : ಸ್ಟಾರ್ ಡೈರೆಕ್ಟರ್ ಎಸ್.ಎಸ್. ರಾಜಮೌಳಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಆರ್‌ಆರ್‌ಆರ್ ಸಿನಿಮಾದ ಮೂಲಕ ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ನಿರ್ದೇಶಕ. ಅಲ್ಲದೆ, ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್‌ಗೆ ಭಾಜನರಾದವರು. ಇತಿಹಾಸ ಆಧಾರಿತ ಸಿನಿಮಾಗಳ ಮೂಲಕ ಸಿನಿರಸಿಕರ ಗಮನ ಸೆಳೆಯುವ ನಿರ್ದೇಶಕ ಇದೀಗ ಸಿಂಧೂ, ಹರಪ್ಪಾ, ಮೊಹಂಜದಾರೋ ಕುರಿತು ನೀಡಿರುವ ಹೇಳಿಕೆ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು.. ಟ್ವಿಟರ್‌ನಲ್ಲಿ ಆನಂದ್ ಮಹೀಂದ್ರಾ ಅವರು ರಾಜಮೌಳಿ ಅವರಿಗೆ ಸಿಂಧೂ, ಹರಪ್ಪಾ, ಮೊಹಂಜದಾರೋ ಮುಂತಾದ ಪುರಾತನ ನಾಗರಿಕತೆಗಳ ಮೇಲೆ ಸಿನಿಮಾ ನಿರ್ಮಿಸುವಂತೆ ಟ್ಟೀಟ್ ಮೂಲಕ ಸಲಹೆ ನೀಡಿದರು. ಇದಕ್ಕೆ ರಾಜಮೌಳಿ ಕೂಡ ಪ್ರತಿಕ್ರಿಯಿಸಿದ್ದಾರೆ. ಧೋಳವೀರದಲ್ಲಿ ಮಗಧೀರ ಸಿನಿಮಾದ ಶೂಟಿಂಗ್ ವೇಳೆ ಪುರಾತನ ಮರವೊಂದನ್ನು ನೋಡಿದ್ದೆ.. ಅದು ಪಳೆಯುಳಿಕೆಯಾಗಿ ಮಾರ್ಪಟ್ಟಿತ್ತು. ಆ ಮರದ ಮೂಲಕ ಸಿಂಧೂ ನಾಗರೀಕತೆಯನ್ನು ವಿವರಿಸುವ ಸಿನಿಮಾ ಮಾಡಬೇಕೆಂದುಕೊಂಡಿದ್ದೆ.. ನಂತರ ಕೆಲ ವರ್ಷಗಳ ನಂತರ ಪಾಕಿಸ್ತಾನಕ್ಕೆ ಹೋದೆ.. ಮೊಹಂಜಾದಾರೋ ನೋಡಲು ಪ್ರಯತ್ನಿಸಿದೆ.. ಅನುಮತಿ ಸಿಗಲಿಲ್ಲ.. ಒಳಗೆ ಹೋಗಲು ಬಿಡಲಿಲ್ಲ ಎಂದು ರಾಜಮೌಳಿ ಹೇಳಿದ್ದಾರೆ.
ಇದನ್ನೂ ಓದಿ:ಖ್ಯಾತ ವೀಣಾ ಗಾಯಕಿ ಶ್ರೀವಾಣಿಯ ವೀಣೆಯಲ್ಲಿ ಮೂಡಿತು ಕಾಂತಾರ ಸಿನಿಮಾ ಹಾಡು: ವಿಡಿಯೋ ವೈರಲ್
ಈಗಾಗಲೇ ಆನಂದ್ ಮಹೀಂದ್ರ ಪ್ರಾಜೆಕ್ಟ್ ಕೆ ಚಿತ್ರಕ್ಕೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಪ್ರಾಜೆಕ್ಟ್ ಕೆ ಮೂಲಕ ನಾಗ್ ಅಶ್ವಿನ್ ಹೊಸದನ್ನು ರಚಿಸಲಿರುವಂತೆ ತೋರುತ್ತಿದೆ. ಈ ಚಿತ್ರಕ್ಕೆ ಅವರೇ ಇಂಜಿನಿಯರಿಂಗ್ ಹೆಡ್ ಗಳನ್ನೂ ಕೊಟ್ಟಿದ್ದಾರಂತೆ. ನಾಗ್ ಅಶ್ವಿನ್ ಕಾರುಗಳು ಮತ್ತು ಕಾರ್ ಟೈರ್‌ಗಳನ್ನು ಹೊಸದಾಗಿ ಸಿದ್ಧಪಡಿಸುತ್ತಿದ್ದಾರೆ. ಹಾಗಾಗಿ ಆನಂದ್ ಮಹೀಂದ್ರ ಈಗ ಸಿನಿಮಾ ವಿಷಯಗಳ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುತ್ತಿದ್ದಾರೆ.
Yes sir… While shooting for Magadheera in Dholavira, I saw a tree so ancient that It turned into a fossil. Thought of a film on the rise and fall of Indus valley civilization, narrated by that tree!!
Visited Pakistan few years later. Tried so hard to visit Mohenjodaro. Sadly,… https://t.co/j0PFLMSjEi
— rajamouli ss (@ssrajamouli) April 30, 2023
ಆನಂದ್ ಮಹೀಂದ್ರಾ RRR ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದರು. ಅಲ್ಲದೆ, ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದರು. ಆದರೆ ಈಗ ರಾಜಮೌಳಿ ಪುರಾತನ ನಾಗರಿಕತೆಗಳ ಮೇಲೆ ಸಿನಿಮಾ ಮಾಡುವಂತೆ ಸಲಹೆ ನೀಡಿದ್ದಾರೆ. ಇವುಗಳ ಮೇಲೆ ಸಿನಿಮಾ ಮಾಡಿ.. ಅವುಗಳ ಅಸ್ತಿತ್ವವನ್ನು ಜಗತ್ತಿಗೆ ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ರಾಜಮೌಳಿ ಪಾಕಿಸ್ತಾನದಲ್ಲಿ ಅನುಮತಿ ನೀಡಿಲ್ಲ ಎಂಬ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಬಯಸಿದ ಪ್ರೀತಿಯೂ ಸಿಗದೆ.. ಕುಟುಂದ ಬೆಂಬಲವೂ ಇಲ್ಲದೇ ಕೊರಗಿದ ನಟಿಯ ಕಣ್ಣೀರ ಕತೆ!
ಸದ್ಯ ರಾಜಮೌಳಿ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆಗಿನ ಚಿತ್ರಕ್ಕೆ ಕಥೆ ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ. ತಂದೆ ವಿಜಯೇಂದ್ರ ಪ್ರಸಾದ್ ಈಗಾಗಲೇ ಕಥೆ ಸಿದ್ಧಪಡಿಸುತ್ತಿದ್ದಾರೆ. ಈ ಕಥೆ ರಚನೆ ಮತ್ತು ಚರ್ಚೆಯಲ್ಲಿ ಇಡೀ ರಾಜಮೌಳಿ ಕುಟುಂಬವೂ ಭಾಗಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಕಥೆ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎಂಬ ನಿರೀಕ್ಷೆ ಇದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.