ಈಗಲೂ ವೈರಲ್ ಆಗುತ್ತಿದೆ ಸುಶಾಂತ್ ಸಿಂಗ್ ಫೋಟೋಸ್

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರವೂ ಈ ಫೋಟೋ ವೈರಲ್ ಆಗಿತ್ತು. ಇದೊಂದು ಫೋಟೋ ಕೊಲಾಜ್ ಆಗಿದೆ. ಇದರಲ್ಲಿ ಎರಡು ಫೋಟೋಗಳು ಕಂಡುಬರುತ್ತವೆ

Written by - Ranjitha R K | Last Updated : Mar 19, 2021, 02:07 PM IST
  • ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ಸುಶಾಂತ್ ಸಿಂಗ್ ಫೋಟೋ
  • ಸಾಧು ಜೊತೆ ತೆಗೆಸಿಕೊಂಡಿರುವ ಫೋಟೋ ವೈರಲ್
  • ಕೇದಾರನಾಥ ಚಿತ್ರದ ಶೂಟಿಂಗ್ ವೇಳೆ ತೆಗೆಸಿಕೊಂಡ ಫೋಟೋ
ಈಗಲೂ ವೈರಲ್ ಆಗುತ್ತಿದೆ ಸುಶಾಂತ್ ಸಿಂಗ್ ಫೋಟೋಸ್  title=
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ಸುಶಾಂತ್ ಸಿಂಗ್ ಫೋಟೋ (file photo)

ನವದೆಹಲಿ : ಸುಶಾಂತ್ ಸಿಂಗ್ ರಜಪೂತ್ (Sushanth singh Rajput) ಇಹ ಲೋಹ ತ್ಯಜಿಸಿದ್ದರೂ ಜನರ ಮನಸ್ಸಿನಲ್ಲಿ ಇಂದಿಗೂ ಹಾಗೆ ಉಳಿದಿದ್ದಾರೆ. ಸುಶಾಂತ್ ಅಭಿಮಾನಿಗಳು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ (Social media) ಒಂದಿಲ್ಲ ಒಂದು ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸುಶಾತ್ ಸಿಂಗ್ ಅವರ ಹಳೆಯ ಫೋಟೋವೊಂದು ಭಾರೀ ವರಲ್ ಆಗುತ್ತಿದೆ. ಅಭಿಮಾನಿಗಳು ನಿರಂತರವಾಗಿ ಈ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಮೊದಲು ಕೂಡಾ ವೈರಲ್ ಆಗಿತ್ತು ಈ ಫೋಟೋ :  
ಸುಶಾಂತ್ ಸಿಂಗ್ ರಜಪೂತ್ (Sushant singh Rajput)  ಸಾವಿನ ನಂತರವೂ ಈ ಫೋಟೋ ವೈರಲ್ ಆಗಿತ್ತು. ಇದೊಂದು ಫೋಟೋ ಕೊಲಾಜ್ ಆಗಿದೆ. ಇದರಲ್ಲಿ ಎರಡು ಫೋಟೋಗಳು ಕಂಡುಬರುತ್ತವೆ. ಮೊದಲನೆಯ ಫೋಟೋದಲ್ಲಿ ಸುಶಾಂತ್ ಸಿಂಗ್ ರಜಪೂತ್ ಒಬ್ಬ ಸನ್ಯಾಸಿಯೊಂದಿಗೆ (Sadhu) ನಿಂತಿದ್ದಾನೆ. ಎರಡನೆಯ ಫೋಟೋದಲ್ಲಿ ಅದೇ ಸನ್ಯಾಸಿ ಸುಶಾಂತ್ ಜೊತೆಗ್ ತೆಗೆಸಿಕೊಂಡ ಫೋಟೋವನ್ನು ತನ್ನ ಬಳಿ ಇರಿಸಿಕೊಂಡಿದ್ದಾರೆ.  

ಇದನ್ನೂ ಓದಿ : ಈ ನಟನಿಂದ ತನಗೆ ಕೌಟುಂಬಿಕ ಹಿಂಸಾಚಾರವಾಗಿದೆ ಎಂದ ಈ ಹಾಲಿವುಡ್ ನಟಿ

 ಕೇದಾರನಾಥದಲ್ಲಿ ತೆಗೆಸಿಕೊಂಡಿರುವ ಫೋಟೋ : 
ಈ ಚಿತ್ರ ಕೇದಾರನಾಥದಲ್ಲಿ (Kedarnath) ತೆಗೆಸಿಕೊಂಡಿರುವಂಥದ್ದು ಎನ್ನಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಸಿಂಗ್ ರಜಪೂತ್ 'ಕೇದಾರನಾಥ್' ಚಿತ್ರದ ಶೂಟಿಂಗ್ ಸಮಯದಲ್ಲಿ ಬಹಳ ಸಮಯದವರೆಗೆ ಕೇದಾರನಾಥದಲ್ಲಿ ಇದ್ದರು. ಚಿತ್ರದ ಶೂಟಿಂಗ್ (Film shooting) ಸಮಯದಲ್ಲಿ, ಸುಶಾಂತ್ ಸನ್ಯಾಸಿಯನ್ನು ಭೇಟಿಯಾದ ವೇಳೆ ತೆಗೆಸಿಕೊಂಡ ಫೋಟೋ ಇದಾಗಿದೆ ಎನ್ನಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಹಳೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗುತ್ತವೆ. 

ಇದನ್ನೂ ಓದಿ : Video ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣ ತೊರೆಯುವ ಹಿಂದಿನ ಕಾರಣ ಬಿಚ್ಚಿಟ್ಟ Aamir Khan

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News