Taapsee Pannu : ತಾಪ್ಸಿ ಪನ್ನು ʼಸಿಕ್ಸ್‌ ಪ್ಯಾಕ್‌ʼ ಫೋಟೋ ನೋಡಿ ದಂಗಾದ ಬಾಯ್ಸ್‌...!

Taapsee Pannu : ನಟಿ ತಾಪ್ಸಿ ಪನ್ನು ಸಿಕ್ಸ್‌ ಪ್ಯಾಕ್‌ನಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರು ಬಾಯ್ತೆರೆದು ನೋಡುವಂತೆ ಮಾಡಿದ್ದಾರೆ. ತಮ್ಮ ಸಿಕ್ಸ ಪ್ಯಾಕ್ಸ್‌ ಎಬಿಎಸ್‌ ತೋರಿಸಿರುವ ಫೋಟೋದಲ್ಲಿ ತಮ್ಮ ಜಿಮ್‌ ಟ್ರೈನರ್‌ ಜೊತೆ ಕಾಣಿಸಿಕೊಂಡಿದ್ದಾರೆ. ಸದ್ಯ ಚೆಲುವೆಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

Written by - Krishna N K | Last Updated : Apr 13, 2023, 11:36 AM IST
  • ಇಂಡಿಯನ್‌ ಫಿಟ್‌ ನಟಿಯರಲ್ಲಿ ನಟಿ ತಾಪ್ಸಿ ಪನ್ನು ಕೂಡ ಒಬ್ಬರು.
  • ಇತ್ತೀಚಿಗೆ ತಾಪ್ಸಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋ ಒಂದು ಸಖತ್‌ ವೈರಲ್‌ ಆಗುತ್ತಿದೆ.
  • ವೈರಲ್‌ ಫೋಟೋದಲ್ಲಿ ತಾಪ್ಸಿ ಸಿಕ್ಸ್‌ ಪ್ಯಾಕ್‌ನಲ್ಲಿ ಎಬಿಎಸ್‌ನಲ್ಲಿ ಮಿಂಚಿದ್ದಾರೆ.
Taapsee Pannu : ತಾಪ್ಸಿ ಪನ್ನು ʼಸಿಕ್ಸ್‌ ಪ್ಯಾಕ್‌ʼ ಫೋಟೋ ನೋಡಿ ದಂಗಾದ ಬಾಯ್ಸ್‌...! title=

Taapsee Pannu six pack : ಇಂಡಿಯನ್‌ ಫಿಟ್‌ ನಟಿಯರಲ್ಲಿ ನಟಿ ತಾಪ್ಸಿ ಪನ್ನು ಕೂಡ ಒಬ್ಬರು. ನಟನೆಯಲ್ಲದೇ ರೂಪದರ್ಶಿಯಾಗಿಯೂ ಸಹ ಹೆಸರು ಮಾಡಿದ್ದಾರೆ. ಪ್ರಸ್ತುತ ಅವರು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತಾಪ್ಸಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ತಾಪ್ಸಿ ಪನ್ನು 2010 ರಲ್ಲಿ ತೆಲುಗು ಸಿನಿಮಾ ʼಜುಮ್ಮನಂದಿ ನಾದಂʼ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ 2011 ರಲ್ಲಿ ವೆಟ್ರಿಮಾರನ್ ನಿರ್ದೇಶನದ ಧನುಷ್ ಅಭಿನಯದ ʼಆಡುಕಾಲಂʼ ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಮೂಲಕ ತಾಪ್ಸಿ ತಮಿಳು ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದರು. ಇದರ ನಂತರ ಅವರು ವಂದನ್ ಬಂಧನ್, ಕಾಂಚನಾ 2- ಗೇಮ್ ಓವರ್ ಮುಂತಾದ ತಮಿಳು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

 
 
 
 

 
 
 
 
 
 
 
 
 
 
 

A post shared by Taapsee Pannu (@taapsee)

ಇದನ್ನೂ ಓದಿ:Sanjay dutt : ʼಕೆಡಿʼ ಶೂಟಿಂಗ್‌ ವೇಳೆ ʼಬಾಂಬ್‌ ಬ್ಲಾಸ್ಟ್‌ʼ.. ಸತ್ಯಾಂಶ ಬಿಚ್ಚಿಟ್ಟ ʼಸಂಜಯ್‌ ದತ್‌ʼ..!

ತಮಿಳು ಮಾತ್ರವಲ್ಲದೆ ತೆಲುಗು ಮತ್ತು ಮಲಯಾಳಂನಂತಹ ಇತರ ಭಾಷೆಗಳಲ್ಲಿಯೂ ನಟಿಸಿದ್ದಾರೆ. ಸದ್ಯ ಅವರು ಬಾಲಿವುಡ್ ಚಿತ್ರಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ ನಟಿ ತಾಪ್ಸಿ ತಮಗೆ ಪ್ರಾಮುಖ್ಯತೆ ನೀಡುವ ಕಥೆಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದಾರೆ. ಸದ್ಯ ತಾಪ್ಸಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ, ತಮ್ಮ ಜಿಮ್ ತರಬೇತುದಾರ ಸುಜೀತ್ ಕರ್ಗುಡ್ಕರ್ ಅವರೊಂದಿಗಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. 

ಇದರಲ್ಲಿ ನಟಿ ತಾಪ್ಸಿ ಸಿಕ್ಸ್ ಪ್ಯಾಕ್ ಬಾಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿಕ್ಸ್‌ ಪ್ಯಾಕ್‌ ಪಡೆಯಲು ಸ್ಟೀರಾಯ್ಡ್‌ ಬಳಸಲಿಲ್ಲ, ಸುರಕ್ಷಿತ ಪೂರಕಗಳನ್ನು ಮಾತ್ರ ಬಳಸಿದ್ದೇನೆ ಎಂದು ತಾಪ್ಸಿ ಹೇಳಿಕೊಂಡಿದ್ದಾರೆ. ಸದ್ಯ ತಾಪ್ಸಿ ಲುಕ್‌ ನೋಡಿದ ನೆಟ್ಟಿಗರು ಬಾಯ್ತೆರೆದು ನೋಡುತ್ತಿದ್ದಾರೆ. ಹಾಟ್‌ ಬ್ಯೂಟಿ ಫಿಟ್‌ ಲುಕ್‌ಗೆ ಪ್ಯಾನ್ಸ್‌ ಫಿದಾ ಆಗಿದ್ದು, ಹಾರ್ಟ್‌, ಫೈರ್‌ ಇಮೋಜಿ ಮೂಲಕ ಲವ್‌ ತೋರಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News