Daali Dhananjaya: ಈಗಾಗಲೇ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಿ ಸಕ್ಸಸ್ ಕಂಡಿದ್ದ ಡಾಲಿ ಇದೀಗ ಮತ್ತೊಂದು ಸೂಪರ್ ಸಕ್ಸಸ್ ಕಾಣುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಧನಂಜಯ್ ನಿರ್ಮಾಣದಲ್ಲೂ ದಾಖಲೆ ಬರೆದಿದ್ದಾರೆ.
'ಬಡವ ರಾಸ್ಕಲ್' ಸಿನಿಮಾಗೆ ಬಂಡವಾಳ ಹೂಡುವ ಮೂಲಕ ನಿರ್ಮಾಣಕ್ಕೆ ಇಳಿದ ಡಾಲಿ ಇದೀಗ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿ ಯಶಸ್ವಿಯಾಗಿದ್ದಾರೆ. 'ಡಾಲಿ ಪಿಚ್ಚರ್' ಎನ್ನುವ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿರುವುದೇ ಉತ್ತಮ ಸಿನಿಮಾಗಳನ್ನು ನೀಡಬೇಕು, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಎನ್ನುವ ಉದ್ದೇಶಕ್ಕೆ. 'ಬಡವರ ಮಕ್ಕಳು ಬೆಳಿಬೇಕು ಎಂದು ಹೇಳುವ ಡಾಲಿ ಯುವ ಪ್ರತಿಭಾವಂತರಿಗೆ ಅವಕಾಶ ನೀಡುವ ಮೂಲಕ ಉತ್ತಮ ಸಿನಿಮಾಗಳನ್ನು ತನ್ನ ಬ್ಯಾನರ್ ನಲ್ಲಿ ಕಟ್ಟಿಕೊಡುತ್ತಿದ್ದಾರೆ.
ಇದನ್ನೂ ಓದಿ-ಅಪ್ಪು 2ನೇ ಪುಣ್ಯಸ್ಮರಣೆ: ಸವಿನೆನಪುಗಳನ್ನು ಸ್ಮರಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್
ಬಡವ ರಾಸ್ಕಲ್ ಸಿನಿಮಾದಲ್ಲಿ ನಟನೆ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಡಾಲಿ ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸುವ ಜೊತೆಗೆ ಮೊದಲ ಪ್ರಯತ್ನದಲ್ಲೇ ದೊಡ್ಡ ಮಟ್ಟದ ಗೆಲುವು ದಾಖಲಿಸಿದರು. ಅದೇ ಹುಮ್ಮಸ್ಸಿನಲ್ಲಿ ಡಾಲಿ ಮತ್ತೊಂದು ಸಿನಿಮಾಗೆ ಬಂಡವಾಳ ಹೂಡಿ ಗೆಲುವು ಕಂಡರು. ಡಾಲಿ ನಿರ್ಮಾಣದಲ್ಲಿ ಮೂಡಿಬಂದ ಎರಡನೇ ಸಿನಿಮಾ 'ಹೆಡ್ ಬುಷ್'.
ಬೆಂಗಳೂರಿನ ಭೂಗತ ಪಾತಾಕಿ ಡಾನ್ ಜಯರಾಜ್ ಜೀವನ ಆಧಾರಿತ ಕಥೆಗೆ ಜೀವ ತುಂಬುವ ಜೊತೆಗೆ ಹಣವನ್ನು ಹೂಡಿದರು ಧನಂಜಯ. ಜಯರಾಜ್ ಆಗಿ ಸ್ವತಃ ಧನಂಜಯ್ ಅವರೇ ಕಾಣಿಸಿಕೊಂಡರು. ಹೆಡ್ ಬುಷ್ ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಮೂಲಕ ಡಾಲಿ ಪಿಚ್ಚರ್ ನ ಸಕ್ಸಸ್ ಲಿಸ್ಟ್ ಗೆ ಸೇರಿತು. ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ ಖುಷಿಯಲ್ಲಿ ಧನಂಜಯ್ 'ಟಗರು ಪಲ್ಯ' ಸಿನಿಮಾ ಕೈಗೆತ್ತಿಕೊಂಡರು.
ಇದನ್ನೂ ಓದಿ-BBK 10: ಕಿಚ್ಚನ ಬಾಯಲ್ಲಿ ಬಂತು ಫೈನಲಿಸ್ಟ್ ಹೆಸರು...!
'ಟಗರು ಪಲ್ಯ' ಸಿನಿಮಾದಲ್ಲಿ ಧನಂಜಯ್ ಕಾಣಿಸಿಕೊಂಡಿಲ್ಲ. ಬದಲಿಗೆ ನಟ ನಾಗಭೂಷಣ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಟಿಸಿದ್ದಾರೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಟಗರು ಪಲ್ಯ ಕೂಡ ಸೂಪರ್ ಸಕ್ಸಸ್ ಆಗಿದೆ. ಅಕ್ಟೋಬರ್ 27ಕ್ಕೆ ರಿಲೀಸ್ ಆಗಿರುವ ಟಗರು ಪಲ್ಯ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಮೂಲಕ ಹ್ಯಾಟ್ರಿಕ್ ಗೆಲುವಿನ ಖುಷಿಯಲ್ಲಿದ್ದಾರೆ ಡಾಲಿ. ಸಿನಿಮಾ ನೋಡಿದ ಪ್ರತಿಯೊಬ್ಬರು ಮೆಚ್ಚಿಕೊಂಡಿದ್ದಾರೆ. ಫ್ಯಾಮಿಲಿ ಸಮೇತರಾಗಿ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ .ಬಿಡುಗಡೆ ಆದ ಎರಡೇ ದಿನಕ್ಕೆ ಪ್ರೇಕ್ಷಕರ ಬೇಡಿಕೆ ಮೇರೆಗೆ ಥಿಯೇಟರ್ ಗಳ ಸಂಖ್ಯೆ ದುಪ್ಪಟ್ಟಾಗಿದೆ . ಈ ಮೂಲಕ ನಟ ರಾಕ್ಷಸ ಧನಂಜಯ ನಿರ್ಮಾಣದಲ್ಲೂ ಕಿಂಗ್ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಡಾಲಿ ಪಿಚ್ಚರ್ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ, ಇನ್ನಷ್ಟು ಉತ್ತಮ ಸಿನಿಮಾಗಳು ಬರಲಿ ಎನ್ನುವುದೇ ಅಭಿಮಾನಿಗಳ ಆಶಯವಾಗಿದೆ ಅದೇ ರೀತಿ ಡಾಲಿ ಕೂಡ ಉತ್ತಮ ಸದಭಿರುಚಿ ಸಿನಿಮಾಗಳನ್ನ ಪ್ರೇಕ್ಷಕರಿಗೆ ನೀಡುವ ಪಣ ತೊಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ