Tamil actor Vishal : ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ವೇಳೆ ತಮಿಳು ನಟ ವಿಶಾಲ್‌ಗೆ ಗಂಭೀರ ಗಾಯ

Tamil actor Vishal Injured : ಶೂಟಿಂಗ್ ವೇಳೆ ತಮಿಳು ನಟ ವಿಶಾಲ್ ಗಾಯಗೊಂಡಿದ್ದಾರೆ. ‘ಮಾರ್ಕ್ ಆ್ಯಂಟನಿ’ ಚಿತ್ರದ ಶೂಟಿಂಗ್ ವೇಳೆ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ನಟ ವಿಶಾಲ್ ಅವರ ಮೊಣಕಾಲಿಗೆ ಗಂಭೀರವಾಗಿ ಗಾಯವಾಗಿದೆ. 

Written by - Chetana Devarmani | Last Updated : Aug 11, 2022, 03:14 PM IST
  • ಶೂಟಿಂಗ್ ವೇಳೆ ತಮಿಳು ನಟ ವಿಶಾಲ್ ಗಾಯ
  • ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ವೇಳೆ ಅವಘಡ
  • ಮಾರ್ಕ್‌ ಆ್ಯಂಟನಿ ಚಿತ್ರದ ಶೂಟಿಂಗ್‌ ವೇಳೆ ಗಾಯ
Tamil actor Vishal : ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ವೇಳೆ ತಮಿಳು ನಟ ವಿಶಾಲ್‌ಗೆ ಗಂಭೀರ ಗಾಯ  title=
ನಟ ವಿಶಾಲ್

Tamil actor Vishal Injured : ಶೂಟಿಂಗ್ ವೇಳೆ ತಮಿಳು ನಟ ವಿಶಾಲ್ ಗಾಯಗೊಂಡಿದ್ದಾರೆ. ‘ಮಾರ್ಕ್ ಆ್ಯಂಟನಿ’ ಚಿತ್ರದ ಶೂಟಿಂಗ್ ವೇಳೆ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ನಟ ವಿಶಾಲ್ ಅವರ ಮೊಣಕಾಲಿಗೆ ಗಂಭೀರವಾಗಿ ಗಾಯವಾಗಿದೆ. ‘ಮಾರ್ಕ್ ಆ್ಯಂಟನಿ’ ಚಿತ್ರವನ್ನು ಅಧಿಕ್ ರವಿಚಂದ್ರನ್ ನಿರ್ದೇಶಿಸುತ್ತಿದ್ದಾರೆ. ವಿಶಾಲ್‌ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಫೈಟ್‌ವೊಂದರ ಚಿತ್ರೀಕರಣ ಸಮಯದಲ್ಲಿ ವಿಶಾಲ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಮಾರ್ಕ್‌ ಆ್ಯಂಟನಿ ಚಿತ್ರತಂಡ ತಿಳಿಸಿದೆ. ‘ಮಾರ್ಕ್ ಆ್ಯಂಟನಿ’ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಪ್ಯಾನ್ ಇಂಡಿಯನ್ ಚಿತ್ರವಾಗಿ ಚಿತ್ರೀಕರಣಗೊಳ್ಳುತ್ತಿದೆ. 

ಇದನ್ನೂ ಓದಿ: BBK OTT: ಬಿಗ್ ಬಾಸ್ ಮನೆಯಲ್ಲಿ ಸ್ಫೂರ್ತಿ ಗೌಡ - ಸೋನು ಗೌಡ ಜಗಳಕ್ಕೆ ಕಾರಣವಾದ 'ಡವ್‌ರಾಣಿ'

ಅದಿಕ್ ರವಿಚಂದ್ರನ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ನಟ ಹಾಗೂ ನಿರ್ದೇಶಕ ಸೂರ್ಯಾ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಮಾರ್ಕ್ ಆ್ಯಂಟನಿ’ ಚಿತ್ರದಲ್ಲಿ ಸೂರ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಿಶಾಲ್ ಮತ್ತು ಸೂರ್ಯ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಿತು ವರ್ಮಾ ನಾಯಕಿಯಾಗಿದ್ದಾರೆ. ಚಿತ್ರವನ್ನು ಎಸ್ ವಿನೋದ್ ಕುಮಾರ್ ನಿರ್ಮಿಸಿದ್ದಾರೆ. 

ತಮಿಳು ನಟ ವಿಶಾಲ್ ಸ್ವಂತವಾಗಿ ಸಾಹಸಗಳನ್ನು ಮಾಡಲು ಇಷ್ಟಪಡುತ್ತಾರೆ. ಇಂದು ಮುಂಜಾನೆ ಚೆನ್ನೈನಲ್ಲಿ ಆಕ್ಷನ್ ಎಪಿಸೋಡ್ ಅನ್ನು ಚಿತ್ರೀಕರಿಸುತ್ತಿದ್ದರು. ಚಿತ್ರದ ಸೆಟ್‌ನಲ್ಲಿ ವಿಶಾಲ್ ಅವರು ತೀವ್ರವಾಗಿ ಗಾಯಗೊಂಡರು. ಆ ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಚಿತ್ರದ ಚಿತ್ರೀಕರಣವನ್ನು ತಡೆಹಿಡಿಯಲಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ.

ಇದನ್ನೂ ಓದಿ: Shilpa Shetty: ಶೂಟಿಂಗ್ ವೇಳೆ ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News