Kasthuri Shankar troll RCB : ಈ ವರ್ಷ ಬೆಂಗಳೂರು ತಂಡ ಕೂಡ ಐಪಿಎಲ್ನಿಂದ ಹೊರಗುಳಿದಿದೆ. ಐಪಿಎಲ್ ಕಪ್ಗಾಗಿ ಕಾಯುತ್ತಿದ್ದ ಆರ್ಸಿಬಿ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಸತತ ಸೋಲು ಕಾಣುತ್ತಿದ್ದ ಆರ್ಸಿಬಿ ಏಕಾಎಕಿ ತಿರುಗಿ ಬಿದ್ದು, ಸತತ 6 ಮ್ಯಾಚ್ ಗೆಲುವು ದಾಖಲಿಸಿ, ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಸೋಲಿಸಿ ಮನೆಗೆ ಕಳುಹಿಸಿತು.
ಆದರೆ ಎರಡನೇ ಕ್ವಾಲಿಫೈಯರ್ನಲ್ಲಿ ರಾಜಸ್ಥಾನ ವಿರುದ್ಧ ಸೋತು ಬೆಂಗಳೂರು ತಂಡ ಟೂರ್ನಿಯಿಂದ ನಿರ್ಗಮಿಸಿತು. ಇದರಿಂದಾಗಿ ಆರ್ಸಿಬಿ ವಿರುದ್ಧ ಸೋತು ನಿರಾಸೆಗೊಂಡಿದ್ದ ಚೆನ್ನೈನ ಕೆಲ ಅಭಿಮಾನಿಗಳು ಬೆಂಗಳೂರು ತಂಡವನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ಅನುಕ್ರಮದಲ್ಲಿ ನಾಯಕಿಯೊಬ್ಬರು ವ್ಯಂಗ್ಯವಾಡಿದ್ದಾರೆ. ನಟಿಗೆ RCB ಅಭಿಮಾನಿಗಳೂ ಸಹ ಒಂದು ರೇಂಜ್ನಲ್ಲಿ ಪಾಠ ಕಲಿಸುತ್ತಿದ್ದಾರೆ.
ಇದನ್ನೂ ಓದಿ:ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಬೇಕಾಗುವಷ್ಟು ಗ್ರಾನೈಟ್ ಕಲ್ಲು ಕೊಡಿಸಿದ ಸ್ಯಾಂಡಲ್ ವುಡ್ ಗಜ
ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಕಸ್ತೂರಿ ಶಂಕರ್ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗಷ್ಟೇ ಹಂಚಿಕೊಂಡ ಫೊಸ್ಟ್ ಆರ್ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಗಳೂರು ದಂಡು ರೈಲು ನಿಲ್ದಾಣದ ನೇಮ್ ಬೋರ್ಡ್ ಅನ್ನು ಕಸ್ತೂರಿ ಹಂಚಿಕೊಂಡಿದ್ದಾರೆ. ಈ ಫಲಕದಲ್ಲಿ ಇಂಗ್ಲಿಷ್ನಲ್ಲಿ ಬೆಂಗಳೂರು ಕಾಂಟ್ (Bangaluru Cant) ಎಂದು ಬರೆಯಲಾಗಿದೆ. ಇದರ ಅರ್ಥ ಆರ್ಸಿಬಿ ಗೆಲ್ಲುವುದೇ ಇಲ್ಲ ಅಂತ (Bangaluru Can not).. ಎಂದು ವ್ಯಂಗ್ಯವಾಡಿದ್ದಾರೆ.
The locals have known for years ....
🤭😃#eesala #illa pic.twitter.com/gektBLqkFZ— Kasturi (@KasthuriShankar) May 23, 2024
ವಾಸ್ತವವಾಗಿ ಈ ಪೋಸ್ಟ್ ಅನ್ನು ಚೆನ್ನೈ ಆಟಗಾರ ತುಷಾರ್ ದೇಶಪಾಂಡೆ ಹಂಚಿಕೊಂಡಿದ್ದರು. ಚೆನ್ನೈ ಸೋಲಿನಿಂದ ತೀವ್ರ ನಿರಾಸೆಗೊಂಡಿರುವ ತುಷಾರ್, ಈ ಫೋಟೋ ಶೇರ್ ಮಾಡಿದ್ದಾರೆ. ಅದೇ ಚಿತ್ರವನ್ನು ನಟಿ ಕಸ್ತೂರಿ ಶಂಕರ್ ನಕಲು ಮಾಡಿಕೊಂಡಿದ್ದರು. ಕಸ್ತೂರಿ ಅವರ ಪೋಸ್ಟ್ಗೆ ಆರ್ಸಿಬಿ ಅಭಿಮಾನಿಗಳು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಕರ್ನಾಟಕದಲ್ಲಿ ಪ್ರತಿಷ್ಟಿತ "ROMEO PICTURES" ಮೂಲಕ ಬಿಡುಗಡೆಯಾಗಲಿದೆ ಕಮಲ್ ಹಾಸನ್ ಅಭಿನಯದ "ಇಂಡಿಯನ್ 2"
ಈ ಐಪಿಎಲ್ನಲ್ಲಿ ಆರ್ಸಿಬಿ ಚೆನ್ನೈ ತಂಡವನ್ನು ಸೋಲಿಸಿದ ಪರಿಯನ್ನು ನಟಿಗೆ ನೆನಪಿಸುತ್ತಿದ್ದಾರೆ. ಇನ್ನು ಕೆಲವರು ವಂಚನೆ ಮಾಡಿ ಎರಡು ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದನ್ನು ತಿಳಿಸಿ ಹೇಳುತ್ತಿದ್ದಾರೆ. ಕೆಲವರು ಕಸ್ತೂರಿಯವರ ಬಗ್ಗೆ ಅಸಭ್ಯ ಕಾಮೆಂಟ್ಗಳನ್ನೂ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ RCB ಅಭಿಮಾನಿಗಳು ಕಸ್ತೂರಿಗೆ ಕಾಮೆಂಟ್ ಮೂಲಕ ಕೈಲಾಸ ತೋರಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.