ಅಬ್ಬಬ್ಬಾ..! ಒಂದೇ ದಿನದಲ್ಲಿ ʼವಿಕ್ರಾಂತ್ ರೋಣʼ ಕಲೆಕ್ಷನ್‌ ಮಾಡಿದ್ದು ಎಷ್ಟು ಗೊತ್ತಾ?

ಬಾಕ್ಸ್​ ಆಫೀಸ್​ಗೆ ಕಿಚ್ಚ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಎಂಟ್ರಿ ಕೊಟ್ಟಾಗಿದೆ. ಜೊತೆಗೆ ಫಸ್ಟ್ ಡೇ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿರುವ ಮೂಲಕ ವಿಕ್ರಾಂತ್ ರೋಣ ಸುದ್ದಿಯಲ್ಲಿದೆ. 

Written by - YASHODHA POOJARI | Edited by - Bhavishya Shetty | Last Updated : Jul 29, 2022, 11:38 AM IST
  • ಬಾಕ್ಸ್​ ಆಫೀಸ್​ಗೆ ಕಿಚ್ಚ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಎಂಟ್ರಿ ಕೊಟ್ಟಾಗಿದೆ
  • ಫಸ್ಟ್ ಡೇ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿದೆ ವಿಕ್ರಾಂತ್ ರೋಣ ಸಿನಿಮಾ
  • ಕರ್ನಾಟಕದಲ್ಲಿ 325 ಸಿಂಗಲ್ ಸ್ಕ್ರೀನ್‌ನಲ್ಲಿ ವಿಕ್ರಾಂತ್ ರೋಣ ಪ್ರದರ್ಶನ ಪಡೆದಿದೆ
ಅಬ್ಬಬ್ಬಾ..! ಒಂದೇ ದಿನದಲ್ಲಿ ʼವಿಕ್ರಾಂತ್ ರೋಣʼ ಕಲೆಕ್ಷನ್‌ ಮಾಡಿದ್ದು ಎಷ್ಟು ಗೊತ್ತಾ?  title=
Vikrant Rona

ವಿಕ್ರಾಂತ್ ರೋಣ ಸೃಷ್ಠಿಸಿರೋ ಹವಾ ಒಂದಾ ಎರಡಾ! ಅಬ್ಬಬ್ಬಾ ಸಿನಿಮಾ ನೋಡಿದ ಜನ ಚಿತ್ರವನ್ನ ಮೆಚ್ಚಿಕೊಂಡಿದ್ದಾಗಿದೆ. ಇದೀಗ ಮೊದಲ ದಿನವೇ ಸಿನಿಮಾ ಎಷ್ಟು ಹಣ ಕಲೆಕ್ಷನ್ ಮಾಡಿದೆ ಎಂಬುವುದು ಪ್ರತಿಯೊಬ್ಬರ ಪ್ರಶ್ನೆ. ಆ ಪ್ರಶ್ನೆಗೆ ಉತ್ತರವನ್ನು ನಾವು ನೀಡ್ತೇವೆ. ಬಾಕ್ಸ್​ ಆಫೀಸ್​ಗೆ ಕಿಚ್ಚ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಎಂಟ್ರಿ ಕೊಟ್ಟಾಗಿದೆ. ಜೊತೆಗೆ ಫಸ್ಟ್ ಡೇ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿರುವ ಮೂಲಕ ವಿಕ್ರಾಂತ್ ರೋಣ ಸುದ್ದಿಯಲ್ಲಿದೆ. 

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ರೈಲ್ವೇ ಪ್ರಯಾಣ ಮಾಡುತ್ತೀರಾ? ಹಾಗಾದ್ರೆ ಇಲಾಖೆಯಿಂದ ನಿಮಗಿದೆ ಸಿಹಿಸುದ್ದಿ

ವಿಶ್ವಾದ್ಯಂತ ತೆರೆಕಂಡ ವಿಕ್ರಾಂತ್‌ ರೋಣಾ ಕರ್ನಾಟಕದಲ್ಲಿ ಹೊಸ ದಾಖಲೆ ಬರೆದಿದೆ. ಕರ್ನಾಟಕದಲ್ಲಿ 325 ಸಿಂಗಲ್ ಸ್ಕ್ರೀನ್‌ನಲ್ಲಿ ವಿಕ್ರಾಂತ್ ರೋಣ ಪ್ರದರ್ಶನ ಪಡೆದಿದೆ. 325 ಥಿಯೇಟರ್, 65 ಮಲ್ಟಿಫೆಕ್ಸ್ ಸ್ಕ್ರೀನ್‌ಗಳಲ್ಲಿ‌ 2500ಕ್ಕೂ ಹೆಚ್ಚು ಶೋ ಒಂದೇ ದಿನ ನಡೆದಿದೆ. 

ಬೆಂಗಳೂರಿನಲ್ಲಿಯೇ 1200 ಶೋಗಳಲ್ಲಿ ಆಲ್ ಮೋಸ್ಟ್ ಎಲ್ಲಾ ಶೋ 90% ಹೌಸ್ ಫುಲ್ ಆಗಿತ್ತು. ಕರ್ನಾಟಕದಲ್ಲಿ  ಮೊದಲ ದಿನವೇ 18 ರಿಂದ 21 ಕೋಟಿ ಹಣವನ್ನ ವಿಕ್ರಾಂತ್ ರೋಣ ಗಳಿಸಿದೆ ಅನ್ನೋ ಪಕ್ಕಾ ಮಾಹಿತಿ ಲಭಿಸಿದೆ. ಹೊರ ರಾಜ್ಯಗಳಲ್ಲೂ ಉತ್ತಮ ಗಳಿಕೆಯನ್ನ ವಿಕ್ರಾಂತ್ ರೋಣ ಮಾಡಿದೆ. ಉತ್ತರ ಭಾರತದಲ್ಲಿ ಒಟ್ಟು 690 ಸ್ಕ್ರೀನ್‌ಗಳಲ್ಲಿ ವಿಕ್ರಾಂತ್ ರೋಣ ಅಬ್ಬರ ಬಲು ಜೋರಾಗಿದೆ. 

ಇನ್ನು ಬಾಲಿವುಡ್‌ ಕಲೆಕ್ಷನ್‌ ಬಗ್ಗೆ ಮಾತನಾಡೋದಾದ್ರೆ, ಒಂದೇ ದಿನದಲ್ಲಿ 8 ರಿಂದ 10 ಕೋಟಿ ಗಳಿಸಿದೆ  ಎನ್ನಲಾಗುತ್ತಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 7 ರಿಂದ 8 ಕೋಟಿ ಬಾಚಿದ ವಿಕ್ರಾಂತ್‌ ರೋಣಾ, ತಮಿಳುನಾಡಿನಲ್ಲಿ 180 ಸ್ಕ್ರೀನ್‌ಗಳಲ್ಲಿ ತೆರೆಕಂಡಿದ್ದು, 2  ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಭರ್ಜರಿ ಯಶಸ್ಸು ಕಂಡಿದೆ. ಇನ್ನು ಕೇರಳದಲ್ಲಿ 110 ಸ್ಕ್ರೀನ್‌ಗಳಲ್ಲಿ‌ ಪ್ರದರ್ಶನ ಕಂಡ ವಿಕ್ರಾಂತ್‌ ರೋಣಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. 

ಇದನ್ನೂ ಓದಿ: ನೂತನ ರಾಜ್ಯಸಭಾ ಸದಸ್ಯ ಡಾ.ಡಿ ವೀರೇಂದ್ರ ಹೆಗ್ಗಡೆರಿಗೆ ಶುಭಾಶಯ ಸಲ್ಲಿಸಿದ ಕಿಚ್ಚ ಸುದೀಪ್‌

ವಿದೇಶಗಳಲ್ಲೂ ಭರ್ಜರಿಯಾಗಿ ಕಲೆಕ್ಷನ್ ಮಾಡಿದೆ ವಿಕ್ರಾಂತ್ ರೋಣ: 
ಭಾರತದಲ್ಲಿ ಒಟ್ಟು 40 ಕೋಟಿಗೂ ಅಧಿಕ ಹಣ ಗಳಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ಓವರ್​ ಆಲ್ ಫಸ್ಟ್​ ಡೇ ಕಲೆಕ್ಷನ್‌ ಬರೋಬ್ಬರಿ 50 ಕೋಟಿಗೂ ಅಧಿಕ ಎನ್ನಲಾಗುತ್ತಿದೆ. ವಿಕ್ರಾಂತ್ ರೋಣ ಸಿನಿಮಾ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆಯೋದ್ರ ಮೂಲಕ ಹವಾ ಕ್ರಿಯೇಟ್ ಮಾಡಿದೆ ಎನ್ನಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News