Heart Attack: ಈ ಒಂದೇ ಒಂದು ಟೆಸ್ಟ್ ನಿಂದ ಹೃದ್ರೋಗಗಳನ್ನು ಮೊದಲೇ ಪತ್ತೆಹಚ್ಚಬಹುದು

Heart Disease: ಹೃದ್ರೋಗಗಳು ಕೆಲವೊಮ್ಮೆ ಮಾರಣಾಂತಿಕ ಸಾಬೀತಾಗುತ್ತವೆ. ಹೀಗಾಗಿ ಹೀಗಾಗಿ ಅಪಾಯ ಸಭಾವಿಸುವ ಮೊದಲೇ ಸಮಯ ಇರುವಂತೆ ಅವುಗಳನ್ನು ಪತ್ತೆಹಚ್ಚುವುದು ತುಂಬಾ ಮಹತ್ವದ್ದಾಗಿದೆ.ಇಲ್ಲದಿದ್ದರೆ ಅವು ಜೀವವನ್ನೇ ಅಪಾಯಕ್ಕೆ ಒಡ್ಡುವ ಸಾಧ್ಯತೆ ಇರುತ್ತದೆ.  

Written by - Nitin Tabib | Last Updated : Jul 29, 2022, 11:42 AM IST
  • ನೀವೂ ಕೂಡ ಒಂದು ವೇಳೆ ಹೃದಯಾಘಾತದ ಅಪಾಯವನ್ನು ತಪ್ಪಿಸಲು ಬಯಸುತ್ತಿದ್ದರೆ,
  • ಇದಕ್ಕಾಗಿ ವಿಶೇಷ ರೀತಿಯ ರಕ್ತ ಪರೀಕ್ಷೆಗೆ ಒಳಗಾಗುವುದು ತುಂಬಾ ಅವಶ್ಯಕ.
  • ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆಹಚ್ಚಲು ಇದು ಅತ್ಯಂತ ಪರಿಣಾಮಕಾರಿ ಪರೀಕ್ಷೆಯಾಗಿದೆ,
Heart Attack: ಈ ಒಂದೇ ಒಂದು ಟೆಸ್ಟ್ ನಿಂದ ಹೃದ್ರೋಗಗಳನ್ನು ಮೊದಲೇ ಪತ್ತೆಹಚ್ಚಬಹುದು title=
Troponin T Test For Heart

Troponin T Test For Heart: ಭಾರತದಲ್ಲಿ ಹೃದ್ರೋಗದಿಂದ ಬಳಲುತ್ತಿರುವವರ ಸಂಖ್ಯೆ ದಿನನಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಕಾರಣ ಎಂದರೆ ಜೀವನಶೈಲಿ. ಸಾಕಷ್ಟು ಗೊಂದಲುಗಳಿಂದ ಕೂಡಿದ ಜೀವನಶೈಲಿಗೆ ಎಣ್ಣೆಯುಕ್ತ ಆಹಾರ ಸೇವನೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆಯೇ ಸರಿ. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಅದರ ಜೊತೆಗೆ ಅಧಿಕ ರಕ್ತದೊತ್ತಡವನ್ನು ಉಂಟು ಮಾಡುತ್ತಿದೆ. ಇವುಗಳಿಂದ ಹೃದಯಾಘಾತ, ಕೊರೋನರಿ ಆರ್ಟರಿ ಡಿಸೀಜ್ ಹಾಗೂ ಟ್ರಿಪಲ್ ವೆಸಲ್ ಡಿಸೀಜ್ ನಂತಹ ಹೃದ್ರೋಗ ಕಾಯಿಲೆಗಳ ಅಪಾಯ ಎದುರಾಗುತ್ತಿದೆ. 

ಹೃದಯಾಘಾತವನ್ನು ತಪ್ಪಿಸಲು ಈ ಪರೀಕ್ಷೆಯನ್ನು ಮಾಡಿ
ನೀವೂ ಕೂಡ ಒಂದು ವೇಳೆ ಹೃದಯಾಘಾತದ ಅಪಾಯವನ್ನು ತಪ್ಪಿಸಲು ಬಯಸುತ್ತಿದ್ದರೆ, ಇದಕ್ಕಾಗಿ ಟ್ರೋಪೋನಿನ್ ಟಿ ಪರೀಕ್ಷೆ ಎಂದು ಕರೆಯಲ್ಪಡುವ ವಿಶೇಷ ರೀತಿಯ ರಕ್ತ ಪರೀಕ್ಷೆಗೆ ಒಳಗಾಗುವುದು ತುಂಬಾ ಅವಶ್ಯಕ. ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆಹಚ್ಚಲು ಇದು ಅತ್ಯಂತ ಪರಿಣಾಮಕಾರಿ ಪರೀಕ್ಷೆಯಾಗಿದೆ, ಇದು ರಕ್ತದಲ್ಲಿ ಇರುವ ಟ್ರೋಪೋನಿನ್ ಮಟ್ಟವನ್ನು ತೋರಿಸುತ್ತದೆ. ಟ್ರೋಪೋನಿನ್ ವಾಸ್ತವದಲ್ಲಿ ಹೃದಯದ ಸ್ನಾಯುಗಳಲ್ಲಿ ಇರುವ ಒಂದು ರೀತಿಯ ಪ್ರೋಟೀನ್ ಆಗಿದೆ, ಅದರ ಮಟ್ಟವು ಹೆಚ್ಚಾದರೆ ಹೃದಯ ಸ್ನಾಯುಗಳಿಗೆ ಹಾನಿಯಾಗುತ್ತದೆ.
 
ಟ್ರೋಪೋನಿನ್ ಟಿ ಪರೀಕ್ಷೆಯನ್ನು ಯಾವಾಗ ಮಾಡಬೇಕು?
ದೇಹದಲ್ಲಿ ಕೆಲ ಅಪಾಯಕಾರಿ ರೋಗಲಕ್ಷಣಗಳನ್ನು ಕಂಡುಬರಲು ಆರಂಭಿಸಿದರೆ, ಅಂದರೆ, ಎದೆ ನೋವು, ತಲೆತಿರುಗುವಿಕೆ, ನೋಯುತ್ತಿರುವ ಗಂಟಲು, ದವಡೆ ನೋವು, ಚಡಪಡಿಕೆ, ಅತಿಯಾದ ಬೆವರುವಿಕೆ, ವಾಂತಿ ಮತ್ತು ಅತಿಯಾದ ಆಯಾಸಕಾಣಿಸಿಕೊಳ್ಳಲು ಆರಂಭಿಸಿದರೆ, ಟ್ರೋಪೋನಿನ್ ಟಿ ಪರೀಕ್ಷೆಯನ್ನು ಖಂಡಿತವಾಗಿ ಮಾಡಿಸಿ. ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆಯೇ, ಇಂತಹ ಪರಿಸ್ಥಿತಿಯಲ್ಲಿ, ಪರೀಕ್ಷೆಗೆ ಒಳಗಾಗುವ ಮೂಲಕ, ನೀವು ಭವಿಷ್ಯದ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.

ಇದನ್ನೂ ಓದಿ-ಮುಂಜಾನೆ ನೀರಿನೊಂದಿಗೆ ಈ ಒಂದು ವಸ್ತುವನ್ನು ಸೇವಿಸುವುದರಿಂದ ನಿಯಂತ್ರಣದಲ್ಲಿರುತ್ತದೆ ಬ್ಲಡ್ ಪ್ರೆಶರ್

ಟ್ರೋಪೋನಿನ್ ಟಿ ಪರೀಕ್ಷೆಯನ್ನು ಹೇಗೆ ಮಾಡಲಾಗುತ್ತದೆ?
ಟ್ರೋಪೋನಿನ್ ಟಿ ಪರೀಕ್ಷೆಯು ಒಂದು ರೀತಿಯ ರಕ್ತ ಪರೀಕ್ಷೆಯಾಗಿದ್ದು, ಇದರ ಮೂಲಕ ದೇಹದಲ್ಲಿ ಸೋಡಿಯಂ, ಕ್ರಿಯೇಟಿನೈನ್ ಮತ್ತು ಪೊಟ್ಯಾಸಿಯಮ್ ಅನ್ನು ಕಂಡುಹಿಡಿಯಲಾಗುತ್ತದೆ. ಇವುಗಳಲ್ಲಿ ಯಾವುದಾದರೂ ಪ್ರಮಾಣ ಹೆಚ್ಚಾದರೆ ಅದು ಹೃದಯಾಘಾತಕ್ಕೆ ಕಾರಣವಾಗಬಹುದು. ಇದರಲ್ಲಿ, ಕೈಯ ಅಭಿಧಮನಿಯೊಳಗೆ ಸೂಜಿಯನ್ನು ಸೇರಿಸುವ ಮೂಲಕ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗುತ್ತದೆ. ಈ ಪರೀಕ್ಷೆಯ ಮೂಲಕ, ವಿಶ್ವಾದ್ಯಂತ ರೋಗಿಗಳು ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ನೀವೂ ಕೂಡ ಟ್ರೋಪೋನಿನ್ ಟಿ ಪರೀಕ್ಷೆಯನ್ನು ಸಮಯಕ್ಕೆ ಸರಿಯಾಗಿ ಮಾಡಿದರೆ, ಸಂಭವನೀಯ ಅಪಾಯವನ್ನು ನೀವು ತಪ್ಪಿಸಬಹುದು. 

ಇದನ್ನೂ ಓದಿ-ವಿಟಮಿನ್ ಡಿ ಕೊರತೆಯನ್ನು ನೀಗಿಸುವುದು ಹೇಗೆ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News