47ರ ವಯಸ್ಸಿನಲ್ಲಿ ನಿರ್ಮಾಪಕನ ಜೊತೆ 2ನೇ ಮದುವೆಗೆ ರೆಡಿಯಾದ ದಕ್ಷಿಣದ ಖ್ಯಾತ ನಟಿ!

Actress Pragathi marriage: ನಟಿಯಾಗಿ ವಿಶೇಷ ಪಾತ್ರಗಳಲ್ಲಿ ನಟಿಸುತ್ತಿರುವ ಪ್ರಗತಿ, ನಿರ್ಮಾಪಕರೊಬ್ಬರನ್ನು ಎರಡನೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Written by - Bhavishya Shetty | Last Updated : Oct 28, 2023, 07:49 PM IST
    • ಕೆಲವು ಖ್ಯಾತ ಮಹಿಳಾ ಕಲಾವಿದರಲ್ಲಿ ಪ್ರಗತಿ ಕೂಡ ಒಬ್ಬರು
    • ಪ್ರಗತಿ ಸಿಂಗಲ್ ಪೇರೆಂಟ್. ಪತಿಯಿಂದ ಬೇರ್ಪಟ್ಟು ಮಗಳೊಂದಿಗೆ ವಾಸವಾಗಿದ್ದಾರೆ
    • ಇದೀಗ ಪ್ರಗತಿ ಅವರ ಎರಡನೇ ಮದುವೆ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ
47ರ ವಯಸ್ಸಿನಲ್ಲಿ ನಿರ್ಮಾಪಕನ ಜೊತೆ 2ನೇ ಮದುವೆಗೆ ರೆಡಿಯಾದ ದಕ್ಷಿಣದ ಖ್ಯಾತ ನಟಿ!  title=
Telugu Actress Pragati

Actress Pragathi marriage: ತೆಲುಗು ಚಿತ್ರರಂಗದ ಕೆಲವೇ ಕೆಲವು ಖ್ಯಾತ ಮಹಿಳಾ ಕಲಾವಿದರಲ್ಲಿ ಪ್ರಗತಿ ಕೂಡ ಒಬ್ಬರು. ಪೋಷಕ ನಟಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಮಹೇಶ್ ಬಾಬು, ರಾಮ್ ಚರಣ್ ಅವರ ತಾಯಿಯಾಗಿಯೂ ಅಭಿನಯಿಸಿದ ಜನಮನ್ನಣೆ ಗಳಿಸಿದ್ದರು. ಕೆ ಭಾಗ್ಯರಾಜ್ ನಿರ್ದೇಶನದ ತಮಿಳಿನ ವೀಟ್ಲಾ ವಿಶೇಶಂ ಚಿತ್ರದ ಮೂಲಕ ನಾಯಕಿಯಾಗಿ ಪ್ರಗತಿ ಸಿನಿ ಜರ್ನಿ ಆರಂಭಿಸಿದ್ದರು.

ಇದನ್ನೂ ಓದಿ: ಭಾರತ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

ಪ್ರಗತಿ ಸಿಂಗಲ್ ಪೇರೆಂಟ್. ಪತಿಯಿಂದ ಬೇರ್ಪಟ್ಟು ಮಗಳೊಂದಿಗೆ ವಾಸವಾಗಿದ್ದಾರೆ. ಆದರೆ ಇದೀಗ ಪ್ರಗತಿ ಅವರ ಎರಡನೇ ಮದುವೆ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ. ನಟಿಯಾಗಿ ವಿಶೇಷ ಪಾತ್ರಗಳಲ್ಲಿ ನಟಿಸುತ್ತಿರುವ ಪ್ರಗತಿ, ನಿರ್ಮಾಪಕರೊಬ್ಬರನ್ನು ಎರಡನೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆ ನಿರ್ಮಾಪಕ, ಪ್ರಗತಿಗೆ ಮದುವೆ ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ಪ್ರಗತಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೊಂದೇ ಕಾರಣವಲ್ಲ ಬದಲಾಗಿ ಪ್ರತಿಯೊಬ್ಬರ ಜೀವನದಲ್ಲಿ ಒಂದಿಷ್ಟು ಆಸರೆ ಬೇಕು ಎನ್ನುವ ಕಾರಣಕ್ಕಾಗಿಯೇ ಪ್ರಗತಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

90ರ ದಶಕದಲ್ಲಿ ದಕ್ಷಿಣ ಚಿತ್ರರಂಗದ ಪ್ರಮುಖ ನಟಿಯಾಗಿ ಹೊರಹೊಮ್ಮಿದ ಪ್ರಗತಿ, ಮದುವೆಯ ನಂತರ ನಟನೆಗೆ ಗುಡ್ ಬೈ ಹೇಳಿದ್ದರು. ಆದರೆ ಹಲವು ವರ್ಷಗಳ ನಂತರ ಪೋಷಕ ಪಾತ್ರಗಳಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಭಾರತದ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ: ಸಿರಾಜ್ ಸ್ಥಾನದಲ್ಲಿ ಈ ಸ್ಪಿನ್ನರ್’ಗೆ ಅವಕಾಶ

ಪತಿಗೆ ವಿಚ್ಛೇದನ ನೀಡಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಪ್ರಸ್ತುತ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿರುವ ಪ್ರಗತಿ, ಅದರ ಮೂಲಕ ತಮ್ಮ ಬಗ್ಗೆ ಮತ್ತು ವರ್ಕೌಟ್‌ಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಭಿಮಾನಿಗಳೊಂದಿಗೆ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News