close

News WrapGet Handpicked Stories from our editors directly to your mailbox

'ನನ್ನ ಜಗತ್ತನ್ನು ಆಳುತ್ತಿರುವ ಬಾಲಕಿ' ಎಂದು ಯಶ್ ಹೇಳಿದ್ದು ಯಾರಿಗೆ ಗೊತ್ತೇ?

ರಾಕಿಂಗ್ ಸ್ಟಾರ್ ಯಶ್  ಕೆಜಿಎಫ್ ಸಿನಿಮಾದಿಂದ ಇಡೀ ಭಾರತದ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ಅಪ್ಪಟ ಕನ್ನಡದ ಪ್ರತಿಭೆ. ಅವರ ಕೆಜಿಎಫ್ ಚಿತ್ರದ ಚಾಪ್ಟರ್ 1 ಸಿನಿಮಾ  ಬಾಕ್ಸ್ ಆಫೀಸ್ ನಲ್ಲಿ ಶಾರುಖ್ ಖಾನ್ ರಂತಹ ಬಾದಷಾ ಜೀರೋ ಸಿನಿಮಾವನ್ನು ಹಿಂದಿಕ್ಕಿದ ಸಾಧನೆ ಮಾಡಿತ್ತು. ಈಗ ಕೆಜಿಎಫ್ ನ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ.

Updated: May 7, 2019 , 12:07 PM IST
'ನನ್ನ ಜಗತ್ತನ್ನು ಆಳುತ್ತಿರುವ ಬಾಲಕಿ' ಎಂದು ಯಶ್ ಹೇಳಿದ್ದು ಯಾರಿಗೆ ಗೊತ್ತೇ?
file photo

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್  ಕೆಜಿಎಫ್ ಸಿನಿಮಾದಿಂದ ಇಡೀ ಭಾರತದ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ಅಪ್ಪಟ ಕನ್ನಡದ ಪ್ರತಿಭೆ. ಅವರ ಕೆಜಿಎಫ್ ಚಿತ್ರದ ಚಾಪ್ಟರ್ 1 ಸಿನಿಮಾ  ಬಾಕ್ಸ್ ಆಫೀಸ್ ನಲ್ಲಿ ಶಾರುಖ್ ಖಾನ್ ರಂತಹ ಬಾದಷಾ ಜೀರೋ ಸಿನಿಮಾವನ್ನು ಹಿಂದಿಕ್ಕಿದ ಸಾಧನೆ ಮಾಡಿತ್ತು. ಈಗ ಕೆಜಿಎಫ್ ನ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಈಗ ನಾವು ಈಗ ಹೇಳ ಹೊರಟಿರುವುದು ಕೆಜಿಎಫ್ ಚಿತ್ರದ ಕುರಿತಲ್ಲ, ಬದಲಾಗಿ ಯಶ್-ರಾಧಿಕಾ ಪಂಡಿತ್ ದಂಪತಿಗಳಿಗೆ ಜನಿಸಿದ  ಮುದ್ದಿನ ಮಗುವಿನ ಬಗ್ಗೆ, ಹೌದು..ಸ್ವತ ಯಶ್ ಈಗ ಈ ಬಗ್ಗೆ ಟ್ವೀಟ್ ಮಾಡಿ " ನನ್ನ ಜಗತ್ತನ್ನು ಆಳುತ್ತಿರುವ ಬಾಲಕಿಯನ್ನು ನಿಮ್ಮ ಮುಂದಿಡುತ್ತಿದ್ದೇನೆ" ನಾವಿನ್ನು ಆಕೆಗೆ ಹೆಸರಿಟ್ಟಿಲ್ಲ ಆದ್ದರಿಂದ ಸದ್ಯಕ್ಕೆ ಆಕೆಯನ್ನು ಬೇಬಿ YR ಎಂದು ಕರೆಯೋಣ..ನಿಮ್ಮ ಪ್ರೀತಿ ಮತ್ತು ಹಾರೈಕೆಗಳು ಆಕೆಯ ಮೇಲೆಯೂ ಇರಲಿ" ಎಂದು ಟ್ವೀಟ್ ಮಾಡಿದ್ದಾರೆ.