Highest Grossing Indian Movie 2024: ಭಾರತೀಯ ಸಿನಿರಂಗದಲ್ಲಿ ಈ ವರ್ಷ ಸೌತ್ ಚಿತ್ರಗಳ ಹಾವಳಿ ಬಲು ಜೋರಾಗಿದೆ. ಅನೇಕ ಸಿನಿಮಾಗಳು ಈ ವರ್ಷ ರಿಲೀಸ್ ಆಗಿದ್ದರೂ, ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಸೌತ್ ಸಿನಿಮಾ ಕಮಾಲ್ ಮಾಡಿದೆ. 2024 ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ 7 ದಿನಗಳಲ್ಲಿ 1000 ಕೋಟಿ ಕಲೆಕ್ಷನ್ ಮಾಡುವ ಮೂಲಕ ದಕ್ಷಿಣ ಸಿನಿರಂಗದ ಈ ಸಿನಿಮಾ ಹೊಸ ದಾಖಲೆ ಬರೆದಿದೆ. ಇತ್ತೀಚೆಗೆ ರಿಲೀಸ್ ಆಗಿದ್ದ ಈ ಚಿತ್ರ ವಿಶ್ವಾದ್ಯಂತ ಸಿನಿಪ್ರೇಮಿಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅಭಿನಯದ 'ಪುಷ್ಪ 2: ದಿ ರೂಲ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಒಂದು ವಾರವನ್ನು ಪೂರೈಸಿದೆ. ಮೊದಲ ದಿನದಿಂದಲೇ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಬಿಡುಗಡೆಯಾದ ಐದನೇ ದಿನದಲ್ಲಿ ವಿಶ್ವಾದ್ಯಂತ 800 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದ್ದ ಚಿತ್ರ ಆರನೇ ದಿನಕ್ಕೆ 900 ಕೋಟಿ ರೂಪಾಯಿ ಗಳಿಸಿತ್ತು. ಒಂದು ವಾರದಲ್ಲಿ ಅನೇಕ ಸಿನಿಮಾಗಳ ದಾಖಲೆಗಳನ್ನು ಮುರಿದಿದೆ. ಏಳನೇ ದಿನವೂ ಚಿತ್ರ ಭರ್ಜರಿ ಲಾಭ ಪಡೆದಿದೆ.
ಇದನ್ನೂ ಓದಿ: Sai Pallavi : ನೀವು ಎಷ್ಟೇ ದೊಡ್ಡವರಾಗಿದ್ರೂ ನಿಮ್ಮನ್ನ ಬಿಡಲ್ಲ..! ಮಿಡಿಯಾಗಳಿಗೆ ಸಾಯಿ ಪಲ್ಲವಿ ಖಡಕ್ ವಾರ್ನಿಂಗ್
ಸುಕುಮಾರ್ ನಿರ್ದೇಶನದ ಪುಷ್ಪಾ 2 ಚಿತ್ರ ಬಿಡುಗಡೆಯಾದಾಗಿನಿಂದ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಪ್ರೇಕ್ಷಕರ ಮನ ಗೆದ್ದಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರ ಕೇವಲ 7 ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1,000 ಕೋಟಿ ರೂಪಾಯಿಗಳನ್ನು ದಾಟಿದೆ. ಇದು ಭಾರತೀಯ ಸಿನಿರಂಗದಲ್ಲಿ ಹೊಸ ದೊಡ್ಡ ದಾಖಲೆಯಾಗಿದೆ.
ಈ ಮೂಲಕ ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ʻಪುಷ್ಪ 2: ದಿ ರೂಲ್ʼ ಪಾತ್ರವಾಗಿದೆ. 2021 ರಲ್ಲಿ ರಿಲೀಸ್ ಆಗಿದ್ದ 'ಪುಷ್ಪ: ದಿ ರೈಸ್' ಚಿತ್ರದ ಮುಂದುವರಿದ ಭಾಗ ʻಪುಷ್ಪ 2: ದಿ ರೂಲ್ʼ ಆಗಿದೆ. ಕಳೆದ ವಾರದಿಂದ ಬಾಕ್ಸ್ ಆಫೀಸ್‌ನಲ್ಲಿ ʻಪುಷ್ಪ 2: ದಿ ರೂಲ್ʼ ಉತ್ತಮ ಪ್ರದರ್ಶನ ನೀಡುತ್ತಿದೆ. ಚಿತ್ರದ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವೀ ಮೇಕರ್ಸ್ ತನ್ನ ಹೊಸ ಗಳಿಕೆಯ ಅಂಕಿಅಂಶಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ʻಪುಷ್ಪ 2: ದಿ ರೂಲ್ʼ ಚಿತ್ರದ ಕಲೆಕ್ಷನ್ 1000 ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ಹೇಳಿದೆ.
ಈ ಚಿತ್ರ ಆರು ದಿನಗಳಲ್ಲಿ 375 ಕೋಟಿ ಗಳಿಸಿದ ಹಿಂದಿ ಭಾಷೆಯ ಅತಿದೊಡ್ಡ ಚಿತ್ರವಾಗಿದೆ. ಡಿಸೆಂಬರ್ 5 ರಂದು ಪುಷ್ಪ 2: ದಿ ರೂಲ್ ಹಿಂದಿ, ತಮಿಳು, ಕನ್ನಡ, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಯಿತು. ಒಂದು ವಾರದಲ್ಲಿ ಭಾರತದಲ್ಲಿ ಚಿತ್ರದ ಒಟ್ಟು ಗಳಿಕೆ 687 ಕೋಟಿ ರೂಪಾಯಿ ಮತ್ತು ವಿಶ್ವಾದ್ಯಂತ 1000 ಕೋಟಿ ರೂಪಾಯಿ ಆಗಿದೆ. ಈ ಹಿಂದೆ 2017ರಲ್ಲಿ 'ಬಾಹುಬಲಿ 2' ಚಿತ್ರ 10 ದಿನಗಳಲ್ಲಿ 1000 ಕೋಟಿ ರೂ.ಗಳ ಗಡಿ ದಾಟಿತ್ತು. ಆದರೆ ಈ ದಾಖಲೆಯನ್ನೂ 'ಪುಷ್ಪ 2' 7 ದಿನಗಳಲ್ಲಿ ಮುರಿದಿದೆ.
ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಪುಷ್ಪ ರಾಜ್, ರಶ್ಮಿಕಾ ಮಂದಣ್ಣ ಶ್ರೀವಲ್ಲಿ, ಫಹದ್ ಫಾಸಿಲ್ ಭನ್ವರ್ ಸಿಂಗ್ ಶೇಖಾವತ್ ಐಪಿಎಸ್ ಎಂಬ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ಜಗದೀಶ್ ಪ್ರತಾಪ್ ಬಂಡಾರಿ, ಸುನಿಲ್, ರಾವ್ ರಮೇಶ್, ಧನಂಜಯ್, ಅನಸೂಯಾ ಭಾರದ್ವಾಜ್, ಅಜಯ್, ಮೋಹನ್ ಲಾಲ್ ಮುಂತಾದ ನಟರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮೋಹನ್ ಲಾಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಮಿಂಚಿನ ಓಟ ಮುಂದುವರೆಸಿದೆ.
ಇದನ್ನೂ ಓದಿ: ಯುವರಾಜ್ ಸಿಂಗ್ ಜೊತೆ ಡೇಟಿಂಗ್.. ಕ್ರಿಕೆಟರ್ಸ್ ಬಸ್ಸಿನಲ್ಲೇ ಸಿಕ್ಕಿಬಿದ್ದು ಕಕ್ಕಾಬಿಕ್ಕಿಯಾದ ಖ್ಯಾತ ನಟಿ ಈಕೆ..!!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.