ತಂದೆತನದೆಡೆಗೆ ದಾರಿ ತೋರಿಸಿದ ನನ್ನ ದೇವತೆಯ ಪುಟ್ಟಹಸ್ತ; ಮಗಳ ಬಗ್ಗೆ ಯಶ್ ಮನದಾಳ

ಡಿಸೆಂಬರ್ 2 ರಂದು ಬೆಳಗ್ಗೆ 6.20ಕ್ಕೆ ಬೆಂಗಳೂರಿನ ಬ್ರಿಗೇಡ್ ರಸ್ತೆಯ ಫೋರ್ಟೀಸ್ ಆಸ್ಪತ್ರೆಯಲ್ಲಿ  ರಾಧಿಕಾ ಪಂಡಿತ್​ ಹೆಣ್ಣುಮಗುವಿಗೆ ಜನ್ಮ ನೀಡಿದರು.

Yashaswini V Yashaswini V | Updated: Dec 4, 2018 , 01:45 PM IST
ತಂದೆತನದೆಡೆಗೆ ದಾರಿ ತೋರಿಸಿದ ನನ್ನ ದೇವತೆಯ ಪುಟ್ಟಹಸ್ತ; ಮಗಳ ಬಗ್ಗೆ ಯಶ್ ಮನದಾಳ

ಬೆಂಗಳೂರು: ಡಿಸೆಂಬರ್ 2 ರಂದು ಬೆಳಗ್ಗೆ 6.20ಕ್ಕೆ ಬೆಂಗಳೂರಿನ ಬ್ರಿಗೇಡ್ ರಸ್ತೆಯ ಫೋರ್ಟೀಸ್ ಆಸ್ಪತ್ರೆಯಲ್ಲಿ  ರಾಧಿಕಾ ಪಂಡಿತ್​ ಹೆಣ್ಣುಮಗುವಿಗೆ ಜನ್ಮ ನೀಡಿದರು. ಯಶ್​​ ಆಸೆಯಂತೆ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. 

ಇದೀಗ ಯಶ್ ಮುದ್ದಿನ ಮಗಳ ಪುಟ್ಟ ಹಸ್ತದೊಂದಿಗೆ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

"ನನ್ನ ಬೆರಳುಗಳನ್ನು ಬಿಗಿಹಿಡಿದು ತಂದೆತನದೆಡೆಗೆ ದಾರಿ ತೋರಿಸಿದ ನನ್ನ ದೇವತೆಯ ಪುಟ್ಟಹಸ್ತ! ಯಾರನ್ನಾದರೂ ಕನಿಷ್ಠ ನೋಡದೆಯೇ ಪ್ರೀತಿಸುವುದು ಒಂದು ಅದ್ಭುತ ಭಾವ. ಇನ್ನು ಅವಳನ್ನು ಕಣ್ತುಂಬಿಕೊಂಡ ಮೇಲಂತೂ ಅವಳೊಂದಿಗೆ ನನ್ನ ಪ್ರೀತಿ ನೂರ್ಮಡಿಯಾಗಿದೆ" ಎಂದು ಯಶ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ(ಫೇಸ್ ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ)ಬರೆದುಕೊಂಡಿದ್ದಾರೆ.

ಹೆರಿಗೆಗೂ ಮೊದಲು ರಾಧಿಕಾ ನನಗೆ ಗಂಡುಮಗು ಬೇಕು ಎಂದು ಹಾಗೂ ಯಶ್​ ಹೆಣ್ಣು ಮಗು ಬೇಕೆಂದು ಶನಿವಾರ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿದ್ದರು. ಹಾಗೇ ನಿಮ್ಮ ವೋಟ್​ ಯಾರಿಗೆ ಅಂತ ಸಹ ಕೇಳಿದ್ದರು.

ಕೊನೆಗೂ ಯಶ್​​ ಆಸೆಯಂತೆ ರಾಧಿಕಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.