ಫಿಸಿಕ್ಸ್ ಟೀಚರ್ ಈಗ ಚಾಕೊಲೇಟ್ ಬಾಯ್!

ಫಿಸಿಕ್ಸ್ ಟೀಚರ್ ಚಿತ್ರದಲ್ಲಿ ತಮ್ಮ ನಟನೆಯಿಂದ ಅಗಾಧವಾದ ಭರವಸೆ ಮೂಡಿಸಿದ ಬಹು ಭಾಷಾ ನಟ ಸುಮುಖ ಈಗ ಕನ್ನಡದಲ್ಲಿ ಮತ್ತೊಂದು ಚಿತ್ರದಲ್ಲಿ ನಾಯಕನಟನಾಗಿ ನಟಿಸುತ್ತಿದ್ದಾರೆ.ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಈ ಚಿತ್ರದಲ್ಲಿ ಶೈನ್ ಶೆಟ್ಟಿ ಹಾಗೂ ನಿಧಿ ಹೆಗಡೆ ಇವರ ಸಹನಟರಾಗಿದ್ದಾರೆ.

Written by - YASHODHA POOJARI | Edited by - Manjunath N | Last Updated : Apr 2, 2023, 11:10 PM IST
  • “ಇದೊಂದು ಸಹೋದರತ್ವ ಅಥವಾ ಸ್ನೇಹದ ಬಾಂಧವ್ಯ ಸಾರುವ ಚಿತ್ರ” ಎನ್ನುತ್ತಾರೆ.
  • ಫಿಸಿಕ್ಸ್ ಟೀಚರ್ ಒಂದು ಗಂಭೀರ ಕಥಾವಸ್ತುವಿರುವ ಚಿತ್ರವಾಗಿತ್ತು.
  • ಹಾಗೆಯೇ ಅವರ ಪಾತ್ರ ಕೂಡ ಅದೇ ಸ್ವರೂಪದ್ದಾಗಿತ್ತು ಹಾಗೂ ಮನೋಜ್ಞವಾಗಿತ್ತು ಕೂಡ.
ಫಿಸಿಕ್ಸ್ ಟೀಚರ್ ಈಗ ಚಾಕೊಲೇಟ್ ಬಾಯ್! title=

ಬೆಂಗಳೂರು: ಫಿಸಿಕ್ಸ್ ಟೀಚರ್ ಚಿತ್ರದಲ್ಲಿ ತಮ್ಮ ನಟನೆಯಿಂದ ಅಗಾಧವಾದ ಭರವಸೆ ಮೂಡಿಸಿದ ಬಹು ಭಾಷಾ ನಟ ಸುಮುಖ ಈಗ ಕನ್ನಡದಲ್ಲಿ ಮತ್ತೊಂದು ಚಿತ್ರದಲ್ಲಿ ನಾಯಕನಟನಾಗಿ ನಟಿಸುತ್ತಿದ್ದಾರೆ.ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಈ ಚಿತ್ರದಲ್ಲಿ ಶೈನ್ ಶೆಟ್ಟಿ ಹಾಗೂ ನಿಧಿ ಹೆಗಡೆ ಇವರ ಸಹನಟರಾಗಿದ್ದಾರೆ.

ಇದನ್ನೂ ಓದಿ: Crime News: ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ, 8 ಮಂದಿ ಸಾವು!

ಇನ್ನೂ ಹೆಸರಿಡಬೇಕಾದ, ಸ್ನೇಹ ಹಾಗೂ ಸಹೋದರತ್ವದ ಸಂದೇಶ ಹೊತ್ತಿರುವ, ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಸಕಲೇಶಪುರದಲ್ಲಿ ಮುಗಿದಿದೆ.ಚಿತ್ರ ಕಥೆಯ ತಿರುಳೇನೆಂದು ಕೇಳಿದಾಗ “ಇದೊಂದು ಸಹೋದರತ್ವ ಅಥವಾ ಸ್ನೇಹದ ಬಾಂಧವ್ಯ ಸಾರುವ ಚಿತ್ರ” ಎನ್ನುತ್ತಾರೆ. ಫಿಸಿಕ್ಸ್ ಟೀಚರ್ ಒಂದು ಗಂಭೀರ ಕಥಾವಸ್ತುವಿರುವ ಚಿತ್ರವಾಗಿತ್ತು. ಹಾಗೆಯೇ ಅವರ ಪಾತ್ರ ಕೂಡ ಅದೇ ಸ್ವರೂಪದ್ದಾಗಿತ್ತು ಹಾಗೂ ಮನೋಜ್ಞವಾಗಿತ್ತು ಕೂಡ. ಆದರೆ ಈ ಚಿತ್ರದಲ್ಲಿ ಉತ್ಸಾಹದ ಬುಗ್ಗೆಯಾಗಿರುವ ಹಾಸ್ಯವನ್ನು ಪ್ರೀತಿಸುವ ಚಾಕೊಲೇಟ್ ಬಾಯ್ ಪಾತ್ರದಲ್ಲಿ ಸುಮುಖ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Nadoja Belagallu Veeranna: ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಸಾವು!

ನಿರ್ದೇಶಕ ಉದಯ್ ಶೆಟ್ಟಿ ಸಾರಥ್ಯದಲ್ಲಿ ಎರಡನೇ ಹಂತದ ಚಿತ್ರೀಕರಣ ಇನ್ನೇನು ಪ್ರಾರಂಭವಾಗಬೇಕಿದೆ. ಅಕ್ಷಯ್ ಶೆಟ್ಟಿ ಜೊತೆಗೂಡಿ ಕಥೆ ಹಾಗೂ ಚಿತ್ರಕಥೆ ಹೆಣೆದಿದ್ದಾರೆ ಉದಯ್ ಶೆಟ್ಟಿ.ಇದಲ್ಲದೇ ಈಗಾಗಲೇ ಚಿತ್ರೀಕರಣ ಮುಗಿಸಿರುವ ಕನ್ನಡ ಹಾಗೂ ಮರಾಠಿಯಲ್ಲಿ ನಿರ್ಮಾಣವಾಗಿರುವ ದ್ವಿಭಾಷೆಯ ಚಿತ್ರ “ರಾಜಸ್ಥಾನ ಡೈರೀಸ್” ತೆರೆಗೆ ಬರಲು ಸಿದ್ಧವಾಗಿದೆ. ಮಾನ್ವಿತ ಕಾಮತ್ ಜೋಡಿಯಾಗಿ ನಟಿಸಿರುವ ಸುಮುಖ “ಇದೊಂದು ಔಟ್ ಅಂಡ್ ಔಟ್ ಲವ್ ಸ್ಟೋರಿ” ಎನ್ನುತ್ತಾರೆ. ಮರಳುಗಾಡಿನ ಸೌಂದರ್ಯದ ಜೊತೆ ಜೊತೆಗೆ ಹೆಣೆದಿರುವ ಪ್ರೇಮಕಥೆಗೆ ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ. ಸುಮುಖ ಅವರ ತಾಯಿ ನಂದಿತಾ ಯಾದವ್ ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

Trending News