ಕನ್ನಡದ ಈ ಚಿತ್ರ ಈಗ ಭಾರತದ 5 ನೇ ಬಹುನಿರೀಕ್ಷಿತ ಚಿತ್ರ!..ಇಲ್ಲಿದೆ ಸ್ಟೋರಿ!

ಹೌದು, ಕನ್ನಡ ಸಿನಿಮಾಗಳು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಆಗಾಗ್ಗೆ ಸಾಬೀತು ಮಾಡುತ್ತಲೇ ಬಂದಿವೆ.

Updated: Nov 3, 2018 , 08:22 PM IST
ಕನ್ನಡದ ಈ ಚಿತ್ರ ಈಗ ಭಾರತದ 5 ನೇ ಬಹುನಿರೀಕ್ಷಿತ ಚಿತ್ರ!..ಇಲ್ಲಿದೆ ಸ್ಟೋರಿ!

ಬೆಂಗಳೂರು: ಹೌದು, ಕನ್ನಡ ಸಿನಿಮಾಗಳು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಆಗಾಗ್ಗೆ ಸಾಬೀತು ಮಾಡುತ್ತಲೇ ಬಂದಿವೆ.

ಈಗ ಹೊಸಗಾಗಿ ಬಂದಿರುವ ಬಹುನಿರೀಕ್ಷಿತ ಸಿನಿಮಾಗಳ ರೇಟಿಂಗ್ ಪ್ರಕಾರ ಕನ್ನಡದ ಚಿತ್ರವೊಂದು ಈಗ ಭಾರತದಲ್ಲೇ 5ನೇ ಸ್ಥಾನವನ್ನು ಪಡೆದಿದೆ. ಹೌದು,ಅದು ಯಾವ ಚಿತ್ರ ಅಂತೀರಾ? ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಕೆಜಿಎಫ್ ಚಿತ್ರ ಈಗ ರಜನಿಕಾಂತ್,ಶಾರುಖ್ ಖಾನ್, ಅಮೀರ್ ಖಾನ್  ನಂತಹ ನಟರ ಸಾಲಿಗೆ ಸಮಾನಾಗಿ  ಸ್ಪರ್ಧೆ ಒಡ್ಡಿದೆ. 

ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಟ್ರೆಂಡ್ ಸೆಟ್ಟಿಂಗ್ ಸಿನಿಮಾ ಎಂದೆ ಹವಾ ಮಾಡುತ್ತಿರುವ ಈ ಸಿನಿಮಾ ಈಗ ಮೇಕಿಂಗ್ ಮೂಲಕವೆ ದೇಶದ ಗಮನ ಸೆಳೆದಿದೆ.ಆ ಕಾರಣದಿಂದಾಗಿ ಈಗ ಅದು ದೇಶದಲ್ಲಿ ಟಾಪ್ 5 ಸ್ಥಾನವನ್ನು ಪಡೆದಿದೆ. 

ಸಿನಿಮಾ ರೇಟಿಂಗ್ ವೆಬ್ ಸೈಟ್ ಐಎಂಡಿಬಿಯ ಮೋಸ್ಟ್‌ ಆ್ಯಂಟಿಸಿಪೇಟೆಡ್‌ ಗ್ಲೋಬಲ್‌ ಮೂವಿಸ್ ಹಾಗೂ ಟಿವಿ ಟ್ರೆಂಡಿಂಗ್‌ ಪಟ್ಟಿಯ ಪ್ರಕಾರ ಅದು  5ನೇ ಸ್ಥಾನದಲ್ಲಿದೆ. ಸದ್ಯದ ಟ್ರೆಂಡಿಂಗ್ ನಲ್ಲಿ ರಜನಿಕಾಂತ್ ಅಭಿನಯದ ರೋಬೋ 2.0 ಚಿತ್ರ 45.7 ಮೂಲಕ ಮೊದಲ ಸ್ಥಾನದಲ್ಲಿದೆ,ವಿಜಯ್ ಅವರ ಸರ್ಕಾರ್ 30.3 ಎರಡನೇ ಸ್ಥಾನ ಹಾಗೂ ಶಾರುಖ್ ಖಾನ್ ಅಭಿನಯದ ಝೀರೋ ಚಿತ್ರ ಶೇ 10.8 ಮೂಲಕ ಮೂರನೇ ಸ್ಥಾನ,ಅಮೀರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ 4.7% ರೇಟಿಂಗ್ ಮೂಲಕ ನಾಲ್ಕನೇ ಸ್ಥಾನದಲ್ಲಿದೆ,ಇದರ ನಂತರ ಕೆಜಿಎಫ್ ಶೇ 4.2 ರೇಟಿಂಗ್ ಮೂಲಕ ಐದನೇ ಸ್ಥಾನದಲ್ಲಿದೆ.