'ಮಲಂಗ್' ಚಿತ್ರದ ಜಬರ್ದಸ್ತ್ ಟೈಟಲ್ ಟ್ರ್ಯಾಕ್ ಬಿಡುಗಡೆ

ಆದಿತ್ಯರಾಯ್ ಕಪೂರ್ ಹಾಗೂ ದಿಶಾ ಪಟಾನಿ ಅಭಿನಯದ ಅವರ ಮುಂಬರುವ ಚಿತ್ರ 'ಮಲಂಗ್' ಜಬರ್ದಸ್ತ್ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.

Last Updated : Jan 16, 2020, 03:38 PM IST
'ಮಲಂಗ್' ಚಿತ್ರದ ಜಬರ್ದಸ್ತ್ ಟೈಟಲ್ ಟ್ರ್ಯಾಕ್ ಬಿಡುಗಡೆ title=

ನವದೆಹಲಿ: ದಿಶಾ ಪಟಾಣಿ ಹಾಗೂ ಆದಿತ್ಯರಾಯ್ ಕಪೂರ್ ಅಭಿನಯದ ಅವರ ಮುಂಬರುವ ಚಿತ್ರ 'ಮಲಂಗ್'ನ್ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ಕೆಲವೇ ಗಂಟೆಗಳ ಹಿಂದೆ ಬಿಡುಗಡೆಯಾಗಿರುವ ಈ ಹಾಡಿನಲ್ಲಿ ದಿಶಾ ಹಾಗೂ ಆದಿತ್ಯರಾಯ್ ಕಪೂರ್ ರೋಮಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ಈ ಹಾಡಿನ ಸೂಫಿ ಸಾಹಿತ್ಯ ಹಾಗೂ ಸಂಗೀತ ಪ್ರೇಕ್ಷಕರ ಮನಸೂರೆಗೊಳಿಸುವಂತಿದೆ.

ಒಂದೆಡೆ ಈ ಹಾಡಿನ ದೃಶ್ಯಗಳಲ್ಲಿ ಪಬ್ ಹಾಗೂ ಗೋವಾದ ಸನ್ಬರ್ನ್ ಫೆಸ್ಟ್ ಛಾಯೆ ಕಾಣಿಸುತ್ತಿದ್ದಾರೆ ಇನ್ನೊಂದೆಡೆ ಚಿತ್ರದ ಕಥೆಯೂ ಕೂಡ ಈ ಹಾಡು ಸಾರಿ ಹೇಳುತ್ತಿದೆ. ಕುನಾಲ್ ವರ್ಮಾ ಹಾಗೂ ಹರ್ಷ್ ಲಿಂಬಾಚಿಯಾ ಈ ಹಾಡಿನ ಸಾಹಿತ್ಯ ಬರೆದಿದ್ದಾರೆ. ಹರ್ಷ್ ಲಿಂಬಾಚಿಯಾ ಖ್ಯಾತ ಸ್ಟಾಂಡ್ ಅಪ್ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಅವರ ಪತಿಯಾಗಿದ್ದು, ಇದೆ ಮೊದಲ ಬಾರಿಗೆ ಅವರು ಹಾಡೊಂದಕ್ಕೆ ಸಾಹಿತ್ಯ ರಚಿಸಿದ್ದಾರೆ. 

ಫೆಬ್ರವರಿ 7,2020 ಕ್ಕೆ ಬೆಳ್ಳಿ ಪರದೆಗೆ ಬರಲಿರುವ ಈ ಚಿತ್ರವನ್ನು ಮಾರಿಷಸ್, ಗೋವಾ ಹಾಗೂ  ಮುಂಬೈನ ಕೆಲ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಈಗಾಗಲೇ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದೊಂದು ಸಸ್ಪೆನ್ಸ್ ಹಾಗೂ ಪ್ರೇಮ ಕಥಾ ಹಂದರ ಹೊಂದಿದ ಚಿತ್ರವಾಗಿದೆ ಎಂಬುದನ್ನು ಬಿಂಬಿಸುತ್ತಿದೆ. ಟಿ-ಸಿರೀಸ್ ನ ಭೂಷಣ್ ಕುಮಾರ್, ಕೃಷ್ಣಾ ಕುಮಾರ್, ಲವ್ ಫಿಲ್ಮಿಮ್ಸ್ ನ ಲಾವ್ ರಂಜಾನ್, ಅಂಕುರ್ ಗರ್ಗ್ ಹಾಗೂ ನಾರ್ದನ್ ಲೈಟ್ಸ್ ಎಂಟರ್ಟೈನ್ಮೆಂಟ್ ನ ಜೆ. ಶ್ರೇವ್ ಕ್ರಮಣಿ  ಈ ಚಿತ್ರವನ್ನು ನಿರ್ಮಿಸಿದ್ದು. ಮೋಹಿತ್ ಸೂರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
 

Trending News