ಅತಿಯಾದ ಮೇಕಪ್ ಹಾಕಿ ಟ್ರೋಲ್ ಗೆ ಒಳಗಾದ ರಾನು ಮೊಂಡಲ್

ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸಾಕಷ್ಟು ಜನಪ್ರಿಯತೆ ಪಡೆದ ವೈರಲ್ ಸಿಂಗರ್ ರಾನು ಮೊಂಡಲ್ ಈಗ ಭಿನ್ನ ಕಾರಣಕ್ಕಾಗಿ ಸುದ್ದಿಯಾಗುತ್ತಿದ್ದಾರೆ.

Updated: Nov 17, 2019 , 12:50 PM IST
ಅತಿಯಾದ ಮೇಕಪ್ ಹಾಕಿ ಟ್ರೋಲ್ ಗೆ ಒಳಗಾದ ರಾನು ಮೊಂಡಲ್
Photo courtesy: Twitter

ನವದೆಹಲಿ: ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸಾಕಷ್ಟು ಜನಪ್ರಿಯತೆ ಪಡೆದ ವೈರಲ್ ಸಿಂಗರ್ ರಾನು ಮೊಂಡಲ್ ಈಗ ಭಿನ್ನ ಕಾರಣಕ್ಕಾಗಿ ಸುದ್ದಿಯಾಗುತ್ತಿದ್ದಾರೆ.

 ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ರಾನು ಮೊಂಡಲ್ ಅವರ ಜನಪ್ರಿಯತೆ ಉತ್ತುಂಗಕ್ಕೇರಿತು ಎನ್ನಬಹುದು,  ಅದಾದ ನಂತರ ಆಕೆಗೆ ಬಾಲಿವುಡ್ ನಲ್ಲಿ ಹಲವಾರು ಅವಕಾಶಗಳು ಅರಸಿ ಬಂದವು. ಬಾಲಿವುಡ್ ನ ಸಂಗೀತ ನಿರ್ದೇಶಕ ಹಾಗೂ ಹಿನ್ನಲೆ ಗಾಯಕ ಹಿಮೇಶ್ ರೇಶಮಿಯಾ ಅವರಿಗೆ ಹಾಡುವ ಅವಕಾಶವನ್ನು ನೀಡಿದರು.

ಈ ಹಿಂದೆ ಅವರ ಹಿನ್ನಲೆಯಿಂದಾಗಿ ಜನರ ಹೃದಯ ಗೆದ್ದಿದ್ದ ರಾನು ಮೊಂಡಲ್, ಈಗ ಅದೇ ಜನರಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ. ಲೆಹೆಂಗಾ ಧರಿಸಿ ವಿಪರಿತ ಮೇಕಪ್ ಹಾಕಿಕೊಂಡಿರುವ ರಾನು ಮೊಂಡಲ್ ಫೋಟೋ ವೈರಲ್ ಆದ ಕೂಡಲೇ ಈಗ ಸಾಕಷ್ಟು ಜನರು ಟ್ರೋಲ್ ಮಾಡುತ್ತಿದ್ದಾರೆ.