VIDEO: ಸೀರೆಯ ಮೇಲೆ ಶರ್ಟ್ ಧರಿಸಿ 'ರೌಡಿ ಬೇಬಿ' ಹಾಡಿಗೆ ಹೆಜ್ಜೆ ಹಾಕಿದ ಅಜ್ಜಿ

ಕಿರಣ್ ಬೇಡಿ ಮಂಗಳವಾರ ಮುನ್ಸಿಪಲ್ ಕಾರ್ಪೋರೇಶನ್ ಕೆಲಸಗಾರರು ಹಾಗೂ ಸ್ವಚ್ಚತಾ ಕರ್ಮಿಗಳ ಜೊತೆಗೆ ಪೊಂಗಲ್ ಹಬ್ಬ ಆಚರಿಸಿದ್ದಾರೆ. ಈ ವೇಳೆ ಅವರು ಡಾನ್ಸ್ ಮಾಡುತ್ತಿದ್ದ ಓರ್ವ ಅಜ್ಜಿಯ ವಿಡಿಯೋವನ್ನು ಚಿತ್ರೀಕರಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Updated: Jan 15, 2020 , 08:29 PM IST
VIDEO: ಸೀರೆಯ ಮೇಲೆ ಶರ್ಟ್ ಧರಿಸಿ 'ರೌಡಿ ಬೇಬಿ' ಹಾಡಿಗೆ ಹೆಜ್ಜೆ ಹಾಕಿದ ಅಜ್ಜಿ

ಪುದುಚೇರಿ: ಸಾಮಾಜಿಕ ಮಾಧ್ಯಮದ ಮೇಲೆ ಸದ್ಯ ಆಜ್ಜಿಯ ಡಾನ್ಸ್ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಂಚಿಕೊಂಡಿದ್ದಾರೆ. ಕಿರಣ್ ಬೇಡಿ ಮಂಗಳವಾರ ಮುನ್ಸಿಪಲ್ ಕಾರ್ಪೋರೇಶನ್ ಕೆಲಸಗಾರರು ಹಾಗೂ ಸ್ವಚ್ಚತಾಕರ್ಮಿಗಳ ಜೊತೆಗೆ ಪೊಂಗಲ್ ಹಬ್ಬ ಆಚರಿಸಿದ್ದಾರೆ. ಈ ವೇಳೆ ಅವರು ಡಾನ್ಸ್ ಮಾಡುತ್ತಿದ್ದ ಓರ್ವ ಅಜ್ಜಿಯ ವಿಡಿಯೋವನ್ನು ಚಿತ್ರೀಕರಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಿರಣ್ ಬೇಡಿ ಹಂಚಿಕೊಂಡಿರುವ ಈ ವಿಡಿಯೋ ನಿಮ್ಮ ಮುಖದ ಮೇಲೂ ಕೂಡ ಸ್ಮತಹಾಸ್ಯ ಮೂಡಿಸಲಿದೆ.

ಕಿರಣ್ ಬೇಡಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಸೀರೆಯ ಮೇಲೆ ಗುಲಾಬಿ ಬಣ್ಣದ ಶರ್ಟ್ ಧರಿಸಿರುವ ಸ್ವಚ್ಛತಾ ವಿಭಾಗ ಮಹಿಳೆಯೊಬ್ಬರು 'ಪೊಂಗಲ್' ಹಬ್ಬ ಆಚರಿಸುತ್ತಿದ್ದಾರೆ. ಈ ವೇಳೆ ಅವರು ದಕ್ಷಿಣ ಚಿತ್ರವೊಂದರ ಖ್ಯಾತ ಹಾಡು 'ರೌಡಿ ಬೇಬಿ' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಇತರೆ ಮಹಿಳೆಯರೂ ಕೂಡ ಈ ಅಜ್ಜಿಗೆ ಸಾಥ್ ನೀಡಿದ್ದಾರೆ.

ಇದುವರೆಗೆ ಈ ವಿಡಿಯೋ ಈಗಾಗಲೇ 24 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಗಾಗಿದೆ. ಅಷ್ಟೇ ಅಲ್ಲ ಕಿರಣ್ ಬೇಡಿ ಅವರು ಹಂಚಿಕೊಂಡ ಈ ವಿಡಿಯೋಗೆ ಕೆಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಓರ್ವ ಟ್ವಿಟ್ಟರ್ ಬಳಕೆದಾರರು 'ಸೂಪರ್ ಅಮ್ಮಾ' ಎಂದು ಕಾಮೆಂಟ್ ಮಾಡಿದ್ದರೆ, ಮತ್ತೋರ್ವ ಬಳಕೆದಾರರು 'ಈ ವಿಡಿಯೋ ನೋಡಿ ನನಗೆ ತುಂಬಾ ಖುಷಿಯಾಗಿದೆ' ಎಂದಿದ್ದಾರೆ .