VIDEO: '83' ಚಿತ್ರದ ಮೊದಲ ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದ ರಣವೀರ್ ಸಿಂಗ್

ಈ ಮೋಶನ್ ಪೋಸ್ಟರ್ ನಲ್ಲಿ ಚಿತ್ರದ ಇತರೆ ಪಾತ್ರಗಳ ಜೊತೆಗೆ ರಣವೀರ್ ಸಿಂಗ್ ಕೂಡ ಕಪಿಲ್ ದೇವ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Updated: Jan 26, 2020 , 06:09 PM IST
VIDEO: '83' ಚಿತ್ರದ ಮೊದಲ ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದ ರಣವೀರ್ ಸಿಂಗ್

ನವದೆಹಲಿ: ಬಾಲಿವುಡ್ ಖ್ಯಾತ ನಿರ್ದೇಶಕ ಕಬೀರ್ ಖಾನ್ ಕಳೆದ ವರ್ಷವಷ್ಟೇ ತಮ್ಮ ಮುಬರುವ ಚಿತ್ರ '83' ಕುರಿತು ಘೋಷಣೆಯನ್ನು ಮಾಡಿದ್ದರು. ಅಂದಿನಿಂದ ಇದುವರೆಗೆ ಈ ಚಿತ್ರ ವ್ಯಾಪಕ ಸುದ್ದಿ ಮಾಡುತ್ತಲೇ ಇದೆ. ಕಳೆದ ಕೆಲ ದಿನಗಳಿಂದ ಈ ಚಿತ್ರದ ಪಾತ್ರಗಳ ಮೊದಲ ನೋಟ ಬಿಡುಗಡೆಯಾಗುತ್ತಲೇ ಇದೆ. ಇದೀಗ ಈ ಚಿತ್ರ ತಂಡ ಅಭಿಮಾನಿಗಳ ನಿರೀಕ್ಷೆಗೆ ಅಂತ್ಯ ಹಾಡುವ ಪ್ರಯತ್ನಕ್ಕೆ ಮುಂದಾಗಿದ್ದು, ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದೆ.  ಈ ಮೋಶನ್ ಪೋಸ್ಟರ್ ನಲ್ಲಿ ಚಿತ್ರದ ಇತರೆ ಪಾತ್ರಗಳ ಜೊತೆಗೆ ರಣವೀರ್ ಸಿಂಗ್ ಕೂಡ ಕಪಿಲ್ ದೇವ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಈ ಮೋಶನ್ ಪೋಸ್ಟರ್ ಅನ್ನು ಖುದ್ದು ರಣವೀರ್ ಸಿಂಗ್ ಅವರೇ ಚೆನ್ನೈನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ವೇಳೆ ನಿಜ ಜೀವನದಲ್ಲಿ ಕ್ರಿಕೆಟ್ ಸ್ಟಾರ್ ಆಗಿರುವ ಕಪಿಲ್ ದೇವ್ ಹಾಗೂ ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಕಮಲ್ ಹಾಸನ್ ಕೂಡ ಉಪಸ್ಥಿತರಿದ್ದರು.  ಚಿತ್ರದ ಎಲ್ಲ ಪಾತ್ರಗಳನ್ನು ಈ ಮೋಶನ್ ಪೋಸ್ಟರ್ ನಲ್ಲಿ ತುಂಬಾ ಹತ್ತಿರದಿಂದ ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಗಲಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಮೋಶನ್ ಪೋಸ್ಟರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಬಿಡುಗಡೆಗೊಳಿಸಲಾಗಿರುವ ಈ ವಿಡಿಯೋ ಹಾಗೂ ಫೋಟೋಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿವೆ. ಏಕೆಂದರೆ, ಈ ಪೋಸ್ಟರ್ ಜೊತೆ ಕೆಲ ನೈಜ ಫೋಟೋಗಳೂ ಕೂಡ ಕಾಣಿಸಿಕೊಂಡಿದ್ದು, ಇವು ಭಾರತ ತಂಡದ ಐತಿಹಾಸಿಕ ಗೆಲುವಿನ ನೆನಪನ್ನು ಅಭಿಮಾನಿಗಳಿಗೆ ಮಾಡಿಕೊಡುತ್ತಿವೆ. ಗಣರಾಜ್ಯೋತ್ಸವ ದಿನಾಚರಣೆಗೂ ಮುನ್ನಾದಿನ ಬಿಡುಗಡೆಯಾಗಿರುವ ಈ ಪೋಸ್ಟರ್ ನಲ್ಲಿ ಇಡೀ ತಂಡ ಆಕ್ಷನ್ ಮೋಡ್ ನಲ್ಲಿ ಕಾಣಿಸಿಕೊಂಡಿದ್ದು, ಬ್ಯಾಕ್ ಗ್ರೌಂಡ್ ನಲ್ಲಿ ತ್ರಿವರ್ಣ ಧ್ವಜ ಬಳಸಲಾಗಿದೆ.

ಚಿತ್ರದ ಪ್ರಮುಖ ಪಾತ್ರಗಳ ಕುರಿತು ಹೇಳುವುದಾದರೆ, ರಣವೀರ್ ಸಿಂಗ್ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತಾಜೀರ್ ರಾಜ್  ಭಸೀನ್-ಗವಾಸ್ಕರ್, ಜೀವಾ-ಶ್ರೀಕಾಂತ್, ಸಾಕೀಬ್ ಸಲೀಂ-ಮೊಹಿಂದರ್ ಅಮರ್ನಾಥ್, ಜತೀನ್ ಸರ್ನಾ-ಯಶ್ಪಾಲ್ ಶರ್ಮಾ, ಚಿರಾಗ್ ಪಾಟೀಲ್-ಸಂದೀಪ್ ಪಾಟೀಲ್, ದಿನಕರ್ ಶರ್ಮಾ-ಕೀರ್ತಿ ಆಝಾದ್, ನಿಶಾಂತ್ ದಹಿಯಾ-ರೋಜರ್ ಬಿನ್ನಿ, ಹಾರ್ಡಿ ಸಂಡೂ-ಮದನ್ ಲಾಲ್, ಸಾಹಿಲ್ ಖಟ್ಟರ್-ಸಯ್ಯದ್ ಕಿರ್ಮಾನಿ, ಏಮಿ ವಿರ್ಕ್-ಬಲವಿಂದರ್ ಸಿಂಗ್ ಸಂಡೂ, ಆದಿತ್ಯನಾಥ್ ಕೊಠಾರಿ-ದಿಲೀಪ್ ವೆಂಗ್ಸರ್ಕರ್, ಧಾಯರಾ ಕರ್ವಾ-ರವಿಶಾಸ್ತ್ರಿ, ಆರ್. ಬದ್ರಿ-ಸುನೀಲ್ ವಾಲ್ಸನ್ ಹಾಗೂ ಪಂಕಜ್ ತ್ರಿಪಾಠಿ-ಪಿ.ಆರ್ ಮಾನಸಿಂಗ್ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದ ವಿಶೇಷತೆ ಎಂದರೆ, ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಚಿತ್ರದಲ್ಲಿ ಕಪಿಲ್ ದೇವ್ ಅವರ ಪತ್ನಿ ರೋಮಿ ದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮದುವೆಯಾದ ಬಳಿಕ ಇದೆ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಜೊತೆ ಯಾವುದೇ ಒಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದಿ ಜೊತೆಗೆ ಈ ಚಿತ್ರ ತಮಿಳು ಹಾಗೂ ತೆಲಗು ಬಾಷೆಯಲ್ಲಿಯೂ ಕೂಡ ಬಿಡುಗಡೆಯಾಗುತ್ತಿದೆ. ಏಪ್ರಿಲ್ 10, 2020ಕ್ಕೆ ಈ ಚಿತ್ರ ಬೆಳ್ಳಿ ಪರದೆಗೆ ಬರಲಿದೆ.