ನವದೆಹಲಿ: ವಿಜಯ್ ದೇವರಕೊಂಡ ಅವರ ವರ್ಲ್ಡ್ ಫೇಮಸ್ ಲವರ್ ಚಿತ್ರದ ಟೀಸರ್ ಶುಕ್ರವಾರ ಬಿಡುಗಡೆಯಾಗಿದೆ.
ಒಂದು ನಿಮಿಷದ ಈ ಟೀಸರ್ನಲ್ಲಿ ವಿಜಯ್ ದೇವರಕೊಂಡ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ರಾಜೇಶ್ ಗೃಹಿಣಿ ಪಾತ್ರದಲ್ಲಿ ನಟಿಸುತ್ತಿದ್ದರೆ, ಇಜಾಬೆಲ್ಲೆ ಲೈಟ್ ಟೀಸರ್ ನಲ್ಲಿ ಪೈಲಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಫೆಬ್ರವರಿ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.ಕೆ ಕ್ರಾಂತಿ ಮಾಧವ್ ನಿರ್ದೇಶನದ ಈ ಚಿತ್ರದಲ್ಲಿ ರಾಶಿ ಖನ್ನಾ, ಕ್ಯಾಥರೀನ್ ಟ್ರೆಸಾ, ಇಜಾಬೆಲ್ಲೆ ಲೈಟ್ ಮತ್ತು ಐಶ್ವರ್ಯ ರಾಜೇಶ್ ನಟಿಸಿದ್ದಾರೆ.
ಈ ಚಿತ್ರದಲ್ಲಿ ವಿಜಯ ದೇವರಕೊಂಡ್ ನಾಲ್ಕು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.ವಿಜಯ್ ಇತ್ತೀಚಿಗೆ ನಿರ್ದೇಶಕ ಪುರಿ ಜಗನ್ನಾಥ್ ಅವರ ಫೈಟರ್ ಸಿನಿಮಾ ಪ್ರಾಜೆಕ್ಟ್ ಜೊತೆ ಕೈ ಜೋಡಿಸಿದ್ದರು. ಈಗ ಈ ಸಿನಿಮಾದ ಶೂಟಿಂಗ್ ಜನವರಿಯಿಂದ ಪ್ರಾರಂಭವಾಗಲಿದೆ.
ಇನ್ನು ವಿಜಯ್ ದೇವರಕೊಂಡ್ ಅವರ ಇತ್ತೀಚಿಗಿನ ಡಿಯರ್ ಕಾಮ್ರೇಡ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿತ್ತು.