ಆಕ್ಷನ್ ಕಟ್ ಹೇಳೋಕೆ ವಿಜಯ್ ರೆಡಿ..! ಧ್ರುವ, ರಾಣಾ, ವಿಕ್ರಮ್ ಹೀರೊ, ಏನಿ ಗಾಳಿ ಸುದ್ದಿ ?

ಸ್ಯಾಂಡಲ್ ವುಡ್ ನಲ್ಲಿ ಯುವ ನಿರ್ದೇಶಕರು, ನಟ ನಟಿಯರು ಇತ್ತೀಚಿಗೆ ವಿಭಿನ್ನ ಕಥೆಗಳ ಮೂಲಕ ತಮ್ಮ ಟ್ಯಾಲೆಂಟ್ ನಿಂದ ಸಕ್ಕತ್ ಸೌಂಡ್ ಮಾಡ್ತಾ ಇದ್ದಾರೆ.

Written by - K Karthik Rao | Edited by - Manjunath N | Last Updated : Sep 18, 2022, 11:27 PM IST
  • ಈ ಹಾಡಿನ ಲಿರಿಕ್ಸ್ ಬರೆದಿದ್ದವರು ವಿಜಯ್ ಈಶ್ವರ್.
  • ನಿರ್ದೇಶಕ ಪ್ರೇಮ್ ರವರ ಜೊತೆ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕ ನಾಗಿ ಕೆಲಸ ಮಾಡಿದ್ದ ವಿಜಯ್ ಈಶ್ವರ್ ಇದೀಗ ಆ್ಯಕ್ಷನ್ ಕಟ್ ಹೇಳೋದಕ್ಕೆ ಮುಂದಾಗಿದ್ದಾರೆ.
ಆಕ್ಷನ್ ಕಟ್ ಹೇಳೋಕೆ ವಿಜಯ್ ರೆಡಿ..! ಧ್ರುವ, ರಾಣಾ, ವಿಕ್ರಮ್ ಹೀರೊ, ಏನಿ ಗಾಳಿ ಸುದ್ದಿ ? title=

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಯುವ ನಿರ್ದೇಶಕರು, ನಟ ನಟಿಯರು ಇತ್ತೀಚಿಗೆ ವಿಭಿನ್ನ ಕಥೆಗಳ ಮೂಲಕ ತಮ್ಮ ಟ್ಯಾಲೆಂಟ್ ನಿಂದ ಸಕ್ಕತ್ ಸೌಂಡ್ ಮಾಡ್ತಾ ಇದ್ದಾರೆ.

ಇದನ್ನೂ ಓದಿ: "ಎಸ್.ಸಿ ,ಎಸ್ಟಿಯವರಿಗೆ 75 ಯೂನಿಟ್ ಉಚಿತ ವಿದ್ಯುತ್ ಯೋಜನೆ ಹಿಂಪಡೆದಿಲ್ಲ"

ಇತ್ತೀಚಿಗೆ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾದ 'ಮೀಟ್ ಮಾಡೊಣ ಇಲ್ಲಾ ಡೇಟ್ ಮಾಡೋಣ' ಎಂಬ ಹಾಡು ಯುವ ಸಿನಿ ರಸಿಕರಿಗೆ ಮೋಡಿ ಮಾಡಿ ಸೌಂಡ್ ಮಾಡಿತ್ತು. ಈ ಹಾಡಿನ ಲಿರಿಕ್ಸ್ ಬರೆದಿದ್ದವರು ವಿಜಯ್ ಈಶ್ವರ್. ನಿರ್ದೇಶಕ ಪ್ರೇಮ್ ರವರ ಜೊತೆ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ವಿಜಯ್ ಈಶ್ವರ್ ಇದೀಗ ಆ್ಯಕ್ಷನ್ ಕಟ್ ಹೇಳೋದಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಎಸ್.ಟಿ.ಸೋಮಶೇಖರ್ ಗೆ ಬಂಧನದ ಭೀತಿ

ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿ ಕೊಂಡಿರುವ ವಿಜಯ್ ಈಶ್ವರ್ ಈ ಸಿನಿಮಾದಲ್ಲಿ ರವಿಚಂದ್ರನ್ ಪುತ್ರರಾದ ವಿಕ್ರಮ್ ರವಿಚಂದ್ರನ್ ಅಥವಾ ರಾಣಾ ಗೆ ಈ ಆಕ್ಷನ್ ಹೇಳಲಿದ್ದಾರಂತೆ. ಈ ಮಧ್ಯೆ ಧ್ರುವ ಸರ್ಜಾ ಗೂ ಆಕ್ಷನ್ ಹೇಳಬಹುದು ಎಂಬ ಮಾತು ಗಾಂಧಿನಗರದಲ್ಲಿ ಓಡಾಡ್ತಾ ಇದೆ.ಇನ್ನೂ ಈ ಸಿನಿಮಾಗೆ ಕೆ ವಿ ಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುವ ಸಾಧ್ಯತೆ ಇದೆ ಎಂಬ ಗಾಳಿ ಸುದ್ದಿ ಹಬ್ಬಿದೆ.ಈಗಾಗಲೆ ಕೆಲ ನಟರು ಕಥೆ ಕೇಳಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ, ಹೀರೊ ಹಿರೋಯಿನ್ ಯಾರೆಂಬುದು ಇನ್ನು ನಿರ್ಧಾರವಾಗಿಲ್ಲ, ಸಧ್ಯದಲ್ಲೆ ಸಿನಿಮಾ ಅನೋನ್ಸ್ ಮಾಡೋದಾಗಿ ವಿಜಯ್ ಈಶ್ವರ್ ಮಾಹಿತಿ ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News