ವಿಜಯ ರಾಘವೇಂದ್ರ ಅಭಿನಯದ 50ನೇ ಚಿತ್ರ.. ಹೈಪರ್ ಲಿಂಕ್ ಕಥಾ ಶೈಲಿಯ ಕೇಸ್ ಆಫ್ ಕೊಂಡಾಣ

Vijay Raghavendra: ವಿಜಯ ರಾಘವೇಂದ್ರ ಅಭಿನಯದ 50ನೇ ಚಿತ್ರ ಸೀತಾರಾಮ್ ಬಿನೋಯ್ ಎಂಬ ಕ್ರೈಂ ಥ್ರಿಲ್ಲರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಈದೀಗ ಮತ್ತೊಂದು ವಿಭಿನ್ನ ಕಥಾ ಹಂದರದ ಕೇಸ್ ಆಫ್ ಕೊಂಡಾಣ ಎಂಬ ಹೈಪರ್ ಲಿಂಕ್ ಇನ್ವೆಸ್ಟಿಗೇಷನ್ ಚಿತ್ರವನ್ನು ತೆರೆಗೆ ತರಲು ಸಿದ್ಧವಾಗಿದ್ದಾರೆ.   

Written by - Savita M B | Last Updated : Jan 2, 2024, 12:17 PM IST
  • ವಿಜಯ ರಾಘವೇಂದ್ರ ಅಭಿನಯದ 50ನೇ ಚಿತ್ರ
  • ವಿಭಿನ್ನ ಕಥಾ ಹಂದರದ ಕೇಸ್ ಆಫ್ ಕೊಂಡಾಣ ಎಂಬ ಹೈಪರ್ ಲಿಂಕ್
  • ಚಿತ್ರವು ಸಂಪೂರ್ಣ ಬೆಂಗಳೂರಿನಲ್ಲಿ ನಡೆಯುವ ಕಥೆಯಾಗಿದೆ
ವಿಜಯ ರಾಘವೇಂದ್ರ ಅಭಿನಯದ 50ನೇ ಚಿತ್ರ.. ಹೈಪರ್ ಲಿಂಕ್ ಕಥಾ ಶೈಲಿಯ ಕೇಸ್ ಆಫ್ ಕೊಂಡಾಣ  title=

Sandalwood: ಚಿತ್ರವು ಸಂಪೂರ್ಣ ಬೆಂಗಳೂರಿನಲ್ಲಿ ನಡೆಯುವ ಕಥೆಯಾಗಿದ್ದು ಆರಂಭದಲ್ಲಿ ಮೂರು ಕಥೆಗಳು ಪ್ರಯಾಣ ಮುಂದುವರಿಸುತ್ತಾ ಕೊನೆಯಲ್ಲಿ ಹೇಗೆ ಎಲ್ಲವೂ ಒಂದು ಕಡೆ ಸೇರುತ್ತವೆ ಎನ್ನುವುದು ವಿಭಿನ್ನ. 

ಚಿತ್ರದ ಶೇಕಡಾ 80 ಭಾಗ ಒಂದು ರಾತ್ರಿಯಲ್ಲಿ ನಡೆಯುವ ಘಟನೆಯಾಗಿದೆ. ಬೆಂಗಳೂರಿನ ಕೊಂಡಾಣ ಎನ್ನುವ ಕಾಲ್ಪನಿಕ ಸ್ಥಳದಲ್ಲಿ  ಆ ರಾತ್ರಿ ನಡೆಯುವ ಘಟನೆ ಯಾದರೂ ಏನು ಎನ್ನುವ ಎಲ್ಲಾ ಪ್ರಶ್ನೆಗಳಿಗೂ ಜನವರಿ 26 ಉತ್ತರ ಸಿಗಲಿದೆ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಎಮೋಷನ್,  ಕ್ರೈಂ, ಆಕ್ಷನ್, ಇರುವುದರ ಜೊತೆಗೆ ಪ್ರೇಕ್ಷಕರನ್ನು ಹಿಡಿದು ಕೂರಿಸುವ ಚಿತ್ರಕಥೆ ಇದೆ. 

ಇದನ್ನೂ ಓದಿ-"ಆಸ್ಕರ್ ಪ್ರಶಸ್ತಿಗಿಂತ ಜನರ ರೆಸ್ಪಾನ್ಸ್ ನನಗೆ ಹೆಚ್ಚು": ಕಾಟೇರ ಸೆಲೆಬ್ರೆಷನ್‌ನಲ್ಲಿ ದರ್ಶನ್‌ ಮನದಾಳದ ಮಾತು!

ವಿಜಯ ರಾಘವೇಂದ್ರ, ಭಾವನಾ ಮೆನನ್, ಖುಷಿ ರವಿ, ರಂಗಾಯಣ ರಘು  ಸೇರಿದಂತೆ ಬಹು ದೊಡ್ಡ ತಾರಾಬಳಗವಿದೆ. ಸೀತಾ ರಾಮ್ ಬಿನೋಯ್ ಗೆ ಕೆಲಸ ಮಾಡಿದಂತ ಟೆಕ್ನಿಷಿಯನ್ ಇಲ್ಲಿಯೂ ಕೆಲಸ ಮಾಡಿದ್ದಾರೆ.

ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ, ವಿಶ್ವ ಜಿತ್ ರಾವ್ ಛಾಯಾಗ್ರಹಣ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನ ಹಾಗೂ ಶಶಾಂಕ್ ನಾರಾಯಣ್ ಸಂಕಲನವಿದೆ. ಪ್ರಮೋದ್ ಮರವಂತೆ, ವಿಶ್ವ ಜಿತ್ ರಾವ್ ಸಾಹಿತ್ಯ ವಿರುವ ಈ ಚಿತ್ರಕ್ಕೆ ಜೋಗಿ ಯವರು ಸಂಭಾಷಣೆ ಬರೆದಿದ್ದಾರೆ. ನಿರ್ದೇಶನದ ಜೊತೆಗೆ ದೇವಿಪ್ರಸಾದ್ ಶೆಟ್ಟಿ ಯವರು ಸಾತ್ವಿಕ್ ಹೆಬ್ಬಾರ್ ಜೊತೆ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ.

ಇದನ್ನೂ ಓದಿ-ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ UI ಟೀಸರ್! ಏನಿದೆ ಇದರಲ್ಲಿ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News