ಬೆಂಗಳೂರು: ಅದಿತಿ ಪ್ರಭುದೇವ್ ಇತ್ತಿಚೇಗಷ್ಟೆ ಮದುವೆಯಾಗಿದ್ದರೂ ತಮ್ಮ ಸಿನಿಮಾ ಪ್ರಯಣ ಮಾತ್ರ ನಿಲ್ಲಿಸಲಿಲ್ಲ. ಮದುವೆ ಬಳಿಕವೂ ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ. ಹಾಗೆಯೇ ಇತ್ತ ರವಿಚಂದ್ರನ್ ಸುಪುತ್ರ ವಿಕ್ರಮ್ ರವಿಚಂದ್ರನ್ ಸಹ ಹಿಟ್ ಸಿನಿಮಾಗಳನ್ನು ನೀಡಬೇಕೆಂದು ಪಣ ತೊಟ್ಟಿದ್ದಾರೆ.
ಇದೀಗ ಬೇರೆ ಭಾಷೆಗಳಲ್ಲಿ ವೆಬ್ ಸಿರೀಸ್ ಸದ್ದು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಸದ್ಯ ವೆಬ್ ಸಿರೀಸ್ ಎಂಬ ಹೊಸ ವೇದಿಕೆ ಸ್ಯಾಂಡಲ್ವುಡ್ ಗೂ ಪಾದಾರ್ಪಣೆಯಾಗಿದೆ. ಈ ನಿಟ್ಟಿನಲ್ಲಿ ಕನ್ನಡದಲ್ಲೂ ವೆಬ್ ಸಿರೀಸ್ ಆರಂಭಗೊಳ್ಳುತ್ತಿದೆ.
ಇದನ್ನೂ ಓದಿ: Bad Manners Movie: ಬ್ಯಾಡ್‌ಮ್ಯಾನರ್ಸ್ ಸಿನಿಮಾದ ಯಂಗ್ ರೆಬೆಲ್ ಸ್ಟಾರ್ ಪೊಲೀಸ್ ಲುಕ್ ಗೆ ಫ್ಯಾನ್ಸ್ ಫುಲ್ ಖುಷ್...!
ಇಂದಿನಿಂದ ಜಿಯೋ ಸಿನಿಮಾದಲ್ಲಿ ಪ್ರಾರಂಭವಾಗುತ್ತಿರುವ ʼಲವ್ ಯೂ ಅಭಿ’ ಎಂಬ ವೆಬ್ ಸಿರೀಸ್ ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಹಾಗೂ ಅದಿತಿ ಪ್ರಭುದೇವ್ ವೆಬ್ ಸಿರೀಸ್ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ಕಾಳಿ ವೇಲಾಯುಧಂ ನಿರ್ಮಾಣ ಮಾಡಿ ನಿರ್ದೇಶಿಸಿರುವ ಈ ವೆಬ್ ಸಿರೀಸ್ ನಲ್ಲಿ ವಿಕ್ರಮ್ ರವಿಚಂದ್ರನ್ ಶಿವ ಎಂಬ ಪಾತ್ರ ಹಾಗೂ ಅದಿತಿ ಪ್ರಭುದೇವ್, ಅಭಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Matte Maduve Film: ಖಾಸಗಿ ಜೀವನ ಸುದ್ದಿಗೆ ಆಹಾರವಾಗಿದ್ದು ಬೇಸರ ತರಿಸಿದೆ - ಪವಿತ್ರಾ ಲೋಕೆಶ್
ಏಳು ಎಪಿಸೋಡ್ ಗಳನ್ನೊಂಡ ಈ ಸಿರೀಸ್ನಲ್ಲಿ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್ರಾಗಜ್ ಹೀಗೆ ಅನುಭವಿ ಕಲಾವಿದರ ದಂಡೂ ಕಾಣಬಹುದಾಗಿದೆ.
ಇನ್ನುಳಿದಂತೆ ನಿಜಿಲ್ ದಿನಕರ್ ಸಂಗೀತ ನಿರ್ದೇಶನ,ಅಭಿಲಾಷ್ ಗೌಡ ಮತ್ತು ಜಿ.ವಿ. ಸತೀಶ್ ಸಂಭಾಷಣೆ ನೀಡಿದ್ದಾರೆ. ಕನ್ನಡ ದೃಶ್ಯಮಾಧ್ಯಮ ಲೋಕಕ್ಕೆ ಹೊಸ ಫ್ಲೇವರ್ ಪರಿಚಯಿಸಲಿರುವ ವೆಬ್ ಸಿರೀಸ್ ನಲ್ಲಿ ಇಂದಿನಿಂದ ಜಿಯೋ ಸಿನಿಮಾದಲ್ಲಿ ಈ ಸಿರೀಸ್ ಸ್ಕ್ರೀಮ್ ಆಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.