'ನಾನು ಪುಟ್ ಪಾತ್ ನಲ್ಲಿ ಹುಟ್ಟಿರುವವಳಲ್ಲ'..! ತನ್ನ ಕುಟುಂಬದ ಬಗ್ಗೆ ರಾನು ಮೊಂಡಲ್ ಹೇಳಿದ್ದೇನು ?

ವೈರಲ್ ಸಿಂಗರ್ ರಾನು ಮೊಂಡಲ್ ಸುಮಧುರ ಧ್ವನಿಯಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಜನಪ್ರಿಯವಾಗಿದ್ದಾರೆ. ಈಗ ಅವರು ತಮ್ಮ ವೈಯಕ್ತಿಕ ಜೀವನ ಕುರಿತಾಗಿ ಕೆಲವು ಆಘಾತಕಾರಿ ಸಂಗತಿಗಳನ್ನು ಅವರು ಬಹಿರಂಗಪಡಿಸಿದ್ದಾರೆ.

Last Updated : Sep 1, 2019, 06:25 PM IST
'ನಾನು ಪುಟ್ ಪಾತ್ ನಲ್ಲಿ ಹುಟ್ಟಿರುವವಳಲ್ಲ'..! ತನ್ನ ಕುಟುಂಬದ ಬಗ್ಗೆ ರಾನು ಮೊಂಡಲ್ ಹೇಳಿದ್ದೇನು ? title=

ನವದೆಹಲಿ: ವೈರಲ್ ಸಿಂಗರ್ ರಾನು ಮೊಂಡಲ್ ಸುಮಧುರ ಧ್ವನಿಯಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಜನಪ್ರಿಯವಾಗಿದ್ದಾರೆ. ಈಗ ಅವರು ತಮ್ಮ ವೈಯಕ್ತಿಕ ಜೀವನ ಕುರಿತಾಗಿ ಕೆಲವು ಆಘಾತಕಾರಿ ಸಂಗತಿಗಳನ್ನು ಅವರು ಬಹಿರಂಗಪಡಿಸಿದ್ದಾರೆ.

ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ರಾನು ತಾನು ಹುಟ್ಟಿದಾಗಿನಿಂದಲೂ ಬಡವಳಲ್ಲ ಮತ್ತು ಸುಸ್ಥಿತಿಯಲ್ಲಿರುವ ಕುಟುಂಬದಲ್ಲಿ ಜನಿಸಿರುವುದಾಗಿ ಹೇಳಿದ್ದಾಳೆ. 'ನಾನು ಫುಟ್‌ಪಾತ್‌ನಲ್ಲಿ ಹುಟ್ಟಿಲ್ಲ. ನಾನು ಉತ್ತಮ ಕುಟುಂಬಕ್ಕೆ ಸೇರಿದವಳು ಆದರೆ ಅದು ನನ್ನ ಹಣೆಬರಹ. ನಾನು ಕೇವಲ ಆರು ತಿಂಗಳ ಮಗುವಾಗಿದ್ದಾಗ ನನ್ನ ಹೆತ್ತವರಿಂದ ಬೇರ್ಪಟ್ಟಿದ್ದೇನೆ. ನಾವು ಮದುವೆಯ ನಂತರ ಪಶ್ಚಿಮ ಬಂಗಾಳದಿಂದ ಮುಂಬೈಗೆ ಸ್ಥಳಾಂತರಗೊಂಡೆನು ಎಂದು ಹೇಳಿದರು.

ಇನ್ನು ಮುಂದುವರೆದು ತಮ್ಮ ಪತಿ ಬಾಲಿವುಡ್ ಸ್ಟಾರ್ ಫಿರೋಜ್ ಖಾನ್ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದನ್ನೂ ರಾಣು ಬಹಿರಂಗಪಡಿಸಿದರು. "ನನ್ನ ಪತಿ ಫಿಲ್ಮ್‌ಸ್ಟಾರ್ ಫಿರೋಜ್ ಖಾನ್ ಅವರ ಮನೆಯಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. ಅವರ ಮಗ ಫರ್ದೀನ್ ಆ ಸಮಯದಲ್ಲಿ ಕಾಲೇಜಿನಲ್ಲಿದ್ದರು. ಅವರು ಕುಟುಂಬ ಸದಸ್ಯರಂತೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು' ಎಂದು ಅವರು ಹೇಳಿದರು.

"ನಮಗೆ ಮನೆ ಇತ್ತು, ಆದರೆ ಅದನ್ನು ನಿರ್ವಹಿಸಲು ಜನರುಬೇಕು. ಒಂಟಿತನದ ಹಲವು ದಿನಗಳು ಇದ್ದವು. ನಾನು ತುಂಬಾ ಕಷ್ಟಪಟ್ಟಿದ್ದೇನೆ ಆದರೆ ಯಾವಾಗಲೂ ದೇವರನ್ನು ನಂಬುತ್ತೇನೆ. ನಾನು ಸಂದರ್ಭಗಳಿಗೆ ಅನುಗುಣವಾಗಿ ಹಾಡುತ್ತಿದ್ದೆ ಹೊರತು ಹಾಡುವ ಅವಕಾಶಕ್ಕಾಗಿ ಅಲ್ಲ, ”ಎಂದು ಹೇಳಿದರು.

ತಮ್ಮ ಮನೆಯಿಂದ ರೆಕಾರ್ಡಿಂಗ್ ಸ್ಟುಡಿಯೋಗೆ ಪ್ರಯಾಣಿಸುವುದು ಕಷ್ಟಕರವಾದ ಕಾರಣ ಮುಂಬೈಯಲ್ಲಿ ಮನೆ ಮಾಡುವ ಬಯಕೆಯನ್ನು ರಾನು ವ್ಯಕ್ತಪಡಿಸಿದ್ದಾರೆ. "ನಾನು ತುಂಬಾ ಸಂತಸದಿಂದ ಇದ್ದೇನೆ, ಈಗಾಗಲೇ ಐದರಿಂದ ಆರು ಹಾಡುಗಳನ್ನು ರೆಕಾರ್ಡ್ ಮಾಡಿದ್ದೇನೆ. ವಿಷಯವೆಂದರೆ, ಮುಂಬೈನಲ್ಲಿನ ಸಂಗೀತದ ಅವಕಾಶಗಳು ಎಂದರೆ ಅದಕ್ಕೆ ದೊಡ್ಡ ಅರ್ಥವಿದೆ. ನನ್ನ ಮನೆಯಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುವುದು ಸಹ ಕಷ್ಟ, ಮುಂಬೈಯಲ್ಲಿ ಒಂದು ಮನೆ ಇದ್ದಿದ್ದರೆ ಚೆನ್ನಾಗಿತ್ತು. ಆದರೆ ನಾನು ಅದರ ಬಗ್ಗೆ ಯೋಚಿಸಬೇಕಾಗಿಲ್ಲ. ದೇವರು ಇದ್ದಾನೆ' ಎಂದರು.

'

Trending News