Actress: ಈ ನಟಿ ಯಾರು ಅಂತ ನೆನಪಿದೆಯಾ..? ಈಗ ಹೇಗಿದ್ದಾಳೆ.. ಎಲ್ಲಿದ್ದಾಳೆ ಗೊತ್ತೆ..? 

Priyanka Kothari : ಒಂದು ಕಾಲದಲ್ಲಿ ತನ್ನ ಸೌಂದರ್ಯದಿಂದ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಸಿನಿರಸಿಕರ ಪ್ರೀತಿ ಗಳಿಸಿದ್ದಳು. ವಿಶೇಷವಾಗಿ ಪುನೀತ್‌ ರಾಜ್‌ಕುಮಾರ್‌ ನಟನೆಯ ರಾಜ್‌ ದಿ ಶೋ ಮ್ಯಾನ್‌ ಈ ನಟಿಗೆ ಸಾಕಷ್ಟು ಜನಪ್ರೀಯತೆ ತಂದು ಕೊಟ್ಟಿತು.

Written by - Krishna N K | Last Updated : Mar 16, 2024, 03:34 PM IST
    • ನಿಶಾ ಕೊಠಾರಿ ಸ್ಯಾಂಡಲ್‌ವುಡ್‌ನಲ್ಲಿ ಮಂಚಿ ಮರೆಯಾದ ನಟಿ
    • ರಾಜ್‌ ದಿ ಶೋ ಮ್ಯಾನ್‌ ಸಿನಿಮಾದಲ್ಲಿ ನಿಶಾ ನಟಿಸಿದ್ದರು
    • ದಂಡು ಪಾಳ್ಯ ಚಿತ್ರದಲ್ಲಿಯೂ ನಿಶಾ ಕಾಣಿಸಿಕೊಂಡಿದ್ದರು
Actress: ಈ ನಟಿ ಯಾರು ಅಂತ ನೆನಪಿದೆಯಾ..? ಈಗ ಹೇಗಿದ್ದಾಳೆ.. ಎಲ್ಲಿದ್ದಾಳೆ ಗೊತ್ತೆ..?  title=
Priyanka Kothari

Nisha Kothathri : ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ( Puneeth rajkumar ) ನಟನೆಯ ರಾಜ್‌ ದಿ ಶೋ ಮ್ಯಾನ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ತನ್ನ ಸೌಂದರ್ಯ ಮತ್ತು ನಟನೆಯಿಂದ ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದಿದ್ದ ಚೆಲುವೆ ನಿಶಾ ಕೊಠಾರಿ. ಸಧ್ಯ ಈ ನಟಿ ಎಲ್ಲಿದ್ದಾರೆ...? ಹೇಗಿದ್ದಾರೆ..? ಏನ್‌ ಮಾಡ್ತೀದಾರೆ ಅಂತ ಅವರ ಅಭಿಮಾನಿಗಳು ಹುಡುಕಾಟ ನಡೆಸುತ್ತಿದ್ದಾರೆ.. ಈ ಕುರಿತ ವರದಿ ಇಲ್ಲಿದೆ ನೋಡಿ..

ಹೌದು.. ನಿಶಾ ಅವರ ಮೂಲ ಹೆಸರು ಪ್ರಿಯಾಂಕಾ ಕೊಠಾರಿ, ಈಕೆ ಬಂಗಾಳಿ ನಟಿ. ಒಂದು ಕಾಲದಲ್ಲಿ ತನ್ನ ಸೌಂದರ್ಯದಿಂದ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಸಿನಿರಸಿಕರ ಪ್ರೀತಿ ಗಳಿಸಿದ್ದಳು. ವಿಶೇಷವಾಗಿ ಪುನೀತ್‌ ರಾಜ್‌ಕುಮಾರ್‌ ನಟನೆಯ ರಾಜ್‌ ದಿ ಶೋ ಮ್ಯಾನ್‌ ಈ ನಟಿಗೆ ಸಾಕಷ್ಟು ಜನಪ್ರೀಯತೆ ತಂದು ಕೊಟ್ಟಿತು. ಅಲ್ಲದೆ, ತೆಲುಗಿನಲ್ಲಿ ರಾಮ್ ಗೋಪಾಲ್ ವರ್ಮಾ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು. ಸದ್ಯ ಈ ಸುಂದರಿಯ ಇತ್ತೀಚಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: Rashmika Mandanna : ಕನ್ನಡಿಗರು ಹೆಮ್ಮೆ ಪಡುವ ಸುದ್ದಿ..! ವಿಶ್ವ ಮಟ್ಟದಲ್ಲಿ ದಾಖಲೆ ಬರೆದ ರಶ್ಮಿಕಾ ಮಂದಣ್ಣ 

ಇನ್ನು ಈ ನಿಶಾ ಅವರ ವೈಯಕ್ತಿಕ ವಿಚಾರಕ್ಕೆ ಬಂದರೆ.. ನಿಶಾ ಕೊಠಾರಿ ಹುಟ್ಟಿದ್ದು ಪಶ್ಚಿಮ ಬಂಗಾಳದಲ್ಲಿ. ದೆಹಲಿ ವಿಶ್ವವಿದ್ಯಾಲಯದಿಂದ ಭೌತಿಕ ವಿಜ್ಞಾನದಲ್ಲಿ ಪದವಿ ಪಡೆದರು. ನಿಶಾ ಕೊಠಾರಿ ಕಾಲೇಜು ನಂತರ ಮಾಡೆಲಿಂಗ್‌ ವೃತ್ತಿ ಆರಂಭಿಸಿದರು. ನಟ ಮಾಧವನ್ ಅವರ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಿಶಾ ಮೊದಲು ನಟಿಸಿದ ಚಿತ್ರ ಜೇ ಜೇ. 

2009 ರಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ರಾಜ್ ದಿ ಶೋಮ್ಯಾನ್ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಆ ನಂತರ ದಂಡುಪಾಳ್ಯದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ತದನಂತ ಸಿನಿಮಾ ಅವಕಾಶಗಳು ಸಂಪೂರ್ಣವಾಗಿ ಕಡಿಮೆಯಾದ ಕಾರಣ ಈ ಚೆಲುವೆ 2016ರಲ್ಲಿ ಭಾಸ್ಕರ್ ಎಂಬ ವ್ಯಕ್ತಿಯನ್ನು ಮದುವೆಯಾಗಿ ಸಾಂಸಾರಿಕ ಜೀವನದತ್ತ ಮುಖ ಮಾಡಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News