ಡಾಕ್ಟರ್‌ ಅಥವಾ ಇಂಜಿನಿಯರ್ ಕನಸು ಕಂಡಿದ್ದ ಮಾನಸ ಮನೋಹರ್‌ ನಟನೆಯತ್ತ ಮುಖ ಮಾಡಿದ್ಯಾಕೆ?

Manasa Manohar : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಅವರ ಪರ್ಸನಲ್ ಅಸಿಸ್ಟೆಂಟ್ ಮೀರಾ ಆಗಿ ಅಭಿನಯಿಸಿದ್ದ  ಬೆಡಗಿ ಹೆಸರು ಮಾನಸ ಮನೋಹರ್.

Written by - Zee Kannada News Desk | Last Updated : Apr 28, 2023, 02:52 PM IST
  • ಆಧುನಿಕ ಯುಗದ ಹೆಣ್ಣುಮಗಳಾಗಿ ಕಿರುತೆರೆ ಜಗತ್ತಿನಲ್ಲಿ ಮೋಡಿ ಮಾಡುತ್ತಿರುವ ಮಾನಸ ಮನೋಹರ್
  • ಡಾಕ್ಟರ್ ಅಥವಾ ಇಂಜಿನಿಯರ್ ಆಗಬಹುದು ಎಂದು ಪೋಷಕರು ಆಲೋಚಿಸಿದ್ದರು.
  • ಆದರೆ ಮಾನಸ ಅವರು ಡಾಕ್ಟರ್ ಹಾಗೂ ಇಂಜಿನಿಯರ್ ಆಗದೇ ನಟಿಯಾಗಿ ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾದರು‌.
ಡಾಕ್ಟರ್‌ ಅಥವಾ ಇಂಜಿನಿಯರ್ ಕನಸು ಕಂಡಿದ್ದ ಮಾನಸ ಮನೋಹರ್‌ ನಟನೆಯತ್ತ ಮುಖ ಮಾಡಿದ್ಯಾಕೆ? title=

Serial Actress : ಸಣ್ಣ ವಯಸ್ಸಿನಿಂದಲೂ ನಟನೆಯತ್ತ ವಿಶೇಷ ಒಲವು ಹೊಂದಿದ್ದ ಮಾನಸ ಮನೋಹರ್ MBA ಪದವೀಧರೆ ಹೌದು. 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಮಾನಸ ಮನೋಹರ್ ನಟಿಸಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಆದರೂ ನಟನೆಯ ಮೂಲಕ ಗಮನ ಸೆಳೆದ ಚೆಲುವೆ.

'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಕಾರ್ಪೋರೇಟರ್ ಜಗತ್ತಿನಲ್ಲಿ ಕೆಲಸ ಮಾಡುವ ಹುಡುಗಿಯ ಪಾತ್ರಕ್ಕೆ ಜೀವ ತುಂಬುವ ಮಾನಸ ಅವರ ಗತ್ತು ಕಿರುತೆರೆ ವೀಕ್ಷಕರ ಮನ ಸೆಳೆದಿತ್ತು. ಒಟ್ಟಿನಲ್ಲಿ ಆಧುನಿಕ ಯುಗದ ಹೆಣ್ಣುಮಗಳಾಗಿ ಕಿರುತೆರೆ ಜಗತ್ತಿನಲ್ಲಿ ಮೋಡಿ ಮಾಡುತ್ತಿರುವ ಮಾನಸ ಮನೋಹರ್ ಓದಿನಲ್ಲಿ ಬಹಳ ಮುಂದಿದ್ದ ಕಾರಣ ಡಾಕ್ಟರ್ ಅಥವಾ ಇಂಜಿನಿಯರ್ ಆಗಬಹುದು ಎಂದು ಪೋಷಕರು ಆಲೋಚಿಸಿದ್ದರು. ಆದರೆ ಮಾನಸ ಅವರು ಡಾಕ್ಟರ್ ಹಾಗೂ ಇಂಜಿನಿಯರ್ ಆಗದೇ ನಟಿಯಾಗಿ ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾದರು‌.

ಆರೂರು ಜಗದೀಶ್ ನಿರ್ದೇಶನದ 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿದ ಮಾನಸ ಅದರಲ್ಲಿ ಅತಿಥಿ ಪಾತ್ರದ ಮೂಲಕ ಗಮನ ಸೆಳೆದರು. ಎಂಬಿಎ ವಿದ್ಯಾರ್ಥಿನಿಯಾಗಿದ್ದ ಕಾರಣ ಆಗ ಪರೀಕ್ಷೆ ನಡೆಯುತ್ತಿತ್ತು. ಹಾಗಾಗಿ ಪೂರ್ಣ ಪ್ರಮಾಣದ ಪಾತ್ರ ಒಪ್ಪಿಕೊಳ್ಳಲು ಸಾಧ್ಯವಾಗದ ಕಾರಣ ಕೇವಲ ಅತಿಥಿ ಪಾತ್ರದಲ್ಲಿ ನಟಿಸಿದರು. 

ಇದನ್ನೂ ಓದಿ-Gurudev Hoysala Movie: ಡಾಲಿ ಧನಂಜಯ್‌ ಅಭಿಮಾನಿಗಳಿಗೆ ಮತ್ತೊಂದು ಗುಡ್‌ ನ್ಯೂಸ್ !‌ ಅದೇನು ಅಂತೀರಾ ಹಾಗಿದ್ದರೆ ಈ ಸ್ಟೋರಿ ಓದಿ..

ಮುಂದೆ ಶುಭವಿವಾಹ ಧಾರಾವಾಹಿಯಲ್ಲೂ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡ ಮಾನಸ, ಮೀರಾ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ಹಿಂದೆ ಮುಂದೆ ನೋಡದೆ ಅಸ್ತು ಎಂದರು. ಪಾಸಿಟಿವ್ ಮತ್ತು ನೆಗೆಟಿವ್ ಶೇಡ್ ಇರುವ ಪಾತ್ರವಾದ ಕಾರಣ ನಟನೆಗೂ ಅವಕಾಶ ಜಾಸ್ತಿ ಎಂಬುದು ಮಾನಸ ಅಭಿಪ್ರಾಯ...2014ರಲ್ಲಿ ನಡೆದ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ 'ಮಿಸ್ ಕರ್ನಾಟಕ' ಪ್ರಶಸ್ತಿ ಪಡೆದ ಮಾನಸ ನಟನಾ ಪ್ರತಿಭೆ ಕೇವಲ ಕಿರುತೆರೆಗೆ ಮಾತ್ರ ಸೀಮಿತವಲ್ಲ. ಬದಲಿಗೆ ಹಿರಿತೆರೆಯಲ್ಲಿಯೂ ಆಕೆ ಗುರುತಿಸಿಕೊಂಡಿದ್ದಾರೆ. ಗೌರೀಶ್ ಅಕ್ಕಿ ನಿರ್ದೇಶನದ ,ಸಿನಿಮಾ ಮೈ ಡಾರ್ಲಿಂಗ್' ಸಿನಿಮಾದಲ್ಲಿ ಬಣ್ಣ ಹಚ್ಚಿದ ಈಕೆ ತೆಲುಗು ತಮಿಳು ಸಿನಿಮಾರಂಗದಲ್ಲಿ ಮಿಂಚಿದ್ದಾರೆ... 

ನಾನು ಏನೇ ಮಾಡಿದ್ರೂ ಅದರಲ್ಲಿ ಸಾಧನೆ ಮಾಡಬೇಕು ಎಂಬುದಿತ್ತು. ಎಂಬಿಎ ಮಾಡುವಾಗ ಒಂದು ಸ್ಪೆಷಲೈಸೇಶನ್‌ಗೋಸ್ಕರ ಖಾಸಗಿ ವಾಹಿನಿಯಲ್ಲಿ ಇಂಟರ್ನ್‌ಶಿಪ್ ಮಾಡಿದೆ, ಆಮೇಲೆ ಅಲ್ಲಿ ವಿಜೆ ಆಡಿಷನ್ ನಡೆಯುತ್ತಿತ್ತು, ಸುಮಾರು 3000 ಜನರಲ್ಲಿ ನಾನು ಆಯ್ಕೆಯಾದೆ. ಹಾಗೆಯೇ ಆರೂರು ಜಗದೀಶ್ ಧಾರಾವಾಹಿಗಳಿಗೆ ಆಫರ್ ಬರಲು ಶುರುವಾಯ್ತು. ಬೇರೆ ಭಾಷೆಯ ಕಿರುತೆರೆಗೆ ಹೋಲಿಸಿದರೆ ಕನ್ನಡ ಟಿವಿ ಉದ್ಯಮ ತುಂಬ ಮುಂದುವರಿದಿದೆ. 

ಇದನ್ನೂ ಓದಿ-Samantha Birthday : ಮತ್ತೆ ಪ್ರೀತಿಯಲ್ಲಿ ಬಿದ್ರಾ ಸಮಂತಾ? ಬರ್ತ್‌ ಡೇ ದಿನ ʻI LOVE U ಪ್ರೀತಮ್ʼ ಪೋಸ್ಟ್ ವೈರಲ್‌!

ಜನರು ಇಲ್ಲಿ ಸಿನಿಮಾಗಳಿಗಿಂತ ಹೆಚ್ಚು ಟಿವಿ ಧಾರಾವಾಹಿ, ರಿಯಾಲಿಟಿ ಶೋಗಳನ್ನು ಮೆಚ್ಚಿಕೊಂಡಿದ್ದಾರೆ. ಕನ್ನಡ ಟಿವಿ ವೀಕ್ಷಕರ ಸಂಖ್ಯೆ ತುಂಬ ದೊಡ್ಡದಿದೆ. ಆದರೆ ಪರಭಾಷೆಯಲ್ಲಿ ಟಿವಿಗಿಂತ ಹೆಚ್ಚು ಸಿನಿಮಾಗಳಿಗೆ ಆದ್ಯತೆ ನೀಡುತ್ತಾರೆ ಎಂದು ನನಗೆ ಅನಿಸಿದೆ. ಬೇರೆ ಭಾಷೆಯ ಸಿನಿಮಾಗಳಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೇನೆ, ಆದರೆ ಅಲ್ಲಿನ ಕಿರುತೆರೆಗೆ ಹೋಗುವ ಆಸೆಯಿಲ್ಲ. ಪರಭಾಷೆಯಲ್ಲಿ ಏಕಕಾಲಕ್ಕೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಬಹುದು. 

ಆದರೆ ಕನ್ನಡದಲ್ಲಿ ಮಾತ್ರ ನಾವು ಒಂದೇ ಬಾರಿಗೆ ಎರಡು ಪಾತ್ರಗಳನ್ನು ಮಾಡಲಾಗೋದಿಲ್ಲ. ಇಲ್ಲದಿದ್ದರೆ ಒಂದೇ ವ್ಯಕ್ತಿಯ ಎರಡು ಪಾತ್ರಗಳು ಜನರ ಮನಸ್ಸಲ್ಲಿ ಉಳಿಯೋದಿಲ್ಲ."ಜನ ಗುರುತಿಸುವಂತಹ ಪಾತ್ರಗಳಿಗೆ ಜೀವ ತುಂಬಬೇಕು ಎಂಬುದು ನನ್ನ ಆಸೆ. ಇದರ ಹೊರತಾಗಿ ಕಿರುತೆರೆ ಆಗಬೇಕು ಅಥವಾ ಹಿರಿತೆರೆ ಆಗಬೇಕು ಎಂದೇನಿಲ್ಲ. ಅದರ ಬದಲಿಗೆ ಪಾತ್ರಕ್ಕೆ ಪ್ರಾಮುಖ್ಯತೆ ಇರಬೇಕಾದುದು ಅಷ್ಟೇ ಮುಖ್ಯ" ಎನ್ನುವ ಮಾನಸ ಮನೋಹರ್ ಸದ್ಯ ಮೀರಾ ಪಾತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News