ʼಪತಿ ಜೊತೆ ಲಂಡನ್‌ಗೆ ಶಿಫ್ಟ್ ಆಗೋಕೆ ಅತ್ತಿದ್ದೆʼ ಸೀರಿಯಲ್‌ ನಟಿ ಪ್ರಿಯಾಂಕ ಹೀಗಂದಿದ್ಯಾಕೆ?

Actress Priyanka: ಸೀರಿಯಲ್‌ ಹಾಗು ಸಿನಿಮಾ ನಟಿಯರು ತಮ್ಮ ಮದುವೆಯ ನಂತರ ಕೆಲವರು ಸಿನಿಮಾ ಹಾಗು ಸೀರಿಯಲ್‌ನಲ್ಲಿ ನಟಿಸುವುದೇ ಬಿಡುತ್ತಾರೆ. ಕೆಲವರು ತನ್ನ ನಟನೆ ಮುಂದುವರೆಸುತ್ತಾರೆ. ಇನ್ನು ಕೆಲವರು ಸೀರಿಯಲ್‌ ಸಿನಿಮಾಗಳ ಜೊತೆ ಭಾರತವನ್ನೇ ಬಿಟ್ಟು ಹೋಗುತಾರೆ. ಅದೇ ರೀತಿ ಇಲ್ಲಿಯೂ ನಟಿಯ ಕಥೆಯು ಅದೇಯಾಗಿದೆ. ಹರ ಹರ ಮಹದೇವ್‌ ಸೀರಿಯಲ್‌ ನಟಿ ಮದುವೆಯ ಬಳಿಕ ಫಾರೆನ್‌ಗೆ ತೆರಳಿದ್ದಾರೆ.   

Written by - Savita M B | Last Updated : Oct 13, 2023, 08:30 PM IST
  • 'ಮನಸಾರೆ', 'ಹರ ಹರ ಮಹಾದೇವ', 'ಮನಸೆಲ್ಲಾ ನೀನೆ' ಮುಂತಾದ ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಪ್ರಿಯಾಂಕಾ
  • ಮದುವೆಯ ನಂತರವೂ ʼಮನಸೆಲ್ಲಾ ನೀನೆʼ ಧಾರವಾಹಿಯಲ್ಲಿ ನಟಿಸುತ್ತಿದ್ದರು
  • ಆದರೆ ಆ ಧಾರಾವಾಹಿ ಮೂರು ತಿಂಗಳ ಹಿಂದೆಯೇ ಮುಗಿದಿದೆ.
ʼಪತಿ ಜೊತೆ ಲಂಡನ್‌ಗೆ ಶಿಫ್ಟ್ ಆಗೋಕೆ ಅತ್ತಿದ್ದೆʼ ಸೀರಿಯಲ್‌ ನಟಿ ಪ್ರಿಯಾಂಕ ಹೀಗಂದಿದ್ಯಾಕೆ? title=

Serial Actress Priyanka: 'ಮನಸಾರೆ', 'ಹರ ಹರ ಮಹಾದೇವ', 'ಮನಸೆಲ್ಲಾ ನೀನೆ' ಮುಂತಾದ ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಪ್ರಿಯಾಂಕಾ ಚಿಂಚೋಳಿ ಅವರು ಕಳೆದ ವರ್ಷ ರಾಕೇಶ್‌ ಅವರನ್ನು ಮದುವೆಯಾಗಿದರು. ಮದುವೆಯ ನಂತರವೂ ʼಮನಸೆಲ್ಲಾ ನೀನೆʼ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಆದರೆ ಆ ಧಾರಾವಾಹಿ ಮೂರು ತಿಂಗಳ ಹಿಂದೆಯೇ ಮುಗಿದಿದೆ. ಆದರೆ ಕೆಲ ತಿಂಗಳಿಂದ ಅವರು ಯಾವುದೇ ಧಾರಾವಾಹಿಯಲ್ಲಿ ನಟಿಸಿರಲಿಲ್ಲ. ಇದಕ್ಕೆ ನಿಜವಾದ ಕಾರಣ ಏನು ಎಂದು ಈಗ ಹೊರಬಿದ್ದಿದೆ. 

ಪ್ರಿಯಾಂಕಾ ಚಿಂಚೋಳಿ ಅವರು ಪತಿ ರಾಕೇಶ್ ಜೊತೆಗೆ ಲಂಡನ್‌ಗೆ ಶಿಫ್ಟ್ ಆಗಿದ್ದಾರೆ. ಪ್ರಿಯಾಂಕ ಪತಿ ರಾಕೇಶ್ ಅವರು ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಪ್ರಿಯಾಂಕಾ,  ಅವರು ಪತಿ ಜೊತೆಗೆ ಈಗ ಲಂಡನ್‌ನಲ್ಲಿ ನೆಲೆಸಿದ್ದಾರೆ. ಈ ಹಿಂದೆ ಪ್ರಿಯಾಂಕಾ ಚಿಂಚೋಳಿ ಅವರು "ಮದುವೆಯಾಗುವ ಮುನ್ನವೇ ಅವರು ರಾಕೇಶ್ ಅಮೆರಿಕದ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು, ನಾನು ಸದ್ಯ ವಿದೇಶಕ್ಕೆ ಹೋಗುವ ಪ್ಲ್ಯಾನ್ ಇಲ್ಲ" ಎಂದು ಹೇಳಿದ್ದರು.

ನಟಿ ಪ್ರಿಯಾಂಕ ತಮ್ಮ ಲಂಡನ್‌ನಲ್ಲಿರುವ ಮನೆಯ ಫೋಟೋಗಲನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ನಟಿಯ ಅಭಿಮಾನಿಗಳು ಇವರು ವೆಕೇರಷನ್‌ಗಾಗಿ ತೆರೆಳಿರಬಹುದು ಎಂದು ತಿಳಿದುಕೊಂಡಿದ್ದರು. ಆದರೆ ಪ್ರಿಯಾಂಕ ಸದ್ಯದ ಮಟ್ಟಿಗೆ ಲಂಡನ್‌ಗೆ ಶಿಫ್ಟ್ ಆಗಿದ್ದಾರೆ. ಇದರ ಬ್ಗೆ ಮಾತನಾಡಿದ ಪ್ರಿಯಾಂಕ " ನಾನು ನನ್ನ ಪತಿ ರಾಕೇಶ್ ಜೊತೆಗೆ ಲಂಡನ್‌ಗೆ ಶಿಫ್ಟ್ ಆಗಿದ್ದೇನೆ. ಈ ನಿರ್ಧಾರ ತಗೊಂಡು ತುಂಬ ಟೈಮ್ ಆಯ್ತು. ನನ್ನ ಪತಿಯ ಕೆಲಸ ಇಲ್ಲೇ ಇದೆ. ಹಾಗಾಗಿ ನಾನು ರಾಕೇಶ್ ಜೊತೆ ಇರಬೇಕಿತ್ತು. ನಮ್ಮ ಮದುವೆಗೂ ಮುನ್ನ ಅವರು ಇಲ್ಲಿಯೇ ಇದ್ದರು. ಅವರಿಗೆ ಇದು ಹೊಸ ಜಾಗ ಅಲ್ಲ" ಎಂದು ಹೇಳಿದ್ದಾರೆ. 

ಇದನ್ನೂ ಓದಿ-ಸಿನಿಮಾ ಶೂಟಿಂಗ್‌ ವೇಳೆ ಖ್ಯಾತ ನಟಿಯ ಮೇಲೆ ಅತ್ಯಾಚಾರ..! ಆರೋಪಿಗೆ 18 ತಿಂಗಳು ಜೈಲು ಶಿಕ್ಷೆ

ಹೀಗೆ ತಮ್ಮ ಮಾತನ್ನು ಮುಂದುವರೆಸುತಾ ಪ್ರಿಯಾಂಕ ತಾವು ಲಂಡನ್‌ಗೆ ಶಿಫ್ಟ್‌ ಆಗೋಕು ಮುಂಚೆ ಕಣ್ಣೀರಿಟ್ಟಿದರಂತೆ. ಪ್ರಿಯಾಂಕ " ನಾನು ಲಂಡನ್‌ನಲ್ಲಿ ಇರ್ತೀನಿ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಹೀಗಾಗಿಯೇ ನಾನು ಕೆಲ ತಿಂಗಳುಗಳಿಂದ ಯಾವುದೇ ಧಾರಾವಾಹಿಯಲ್ಲಿ ನಟಿಸಿರಲಿಲ್ಲ. ಧಾರಾವಾಹಿಯನ್ನು ಅರ್ಧಕ್ಕೆ ಬಿಡೋದು ಇಷ್ಟ ಇರಲಿಲ್ಲ. ನಾನಂತೂ ಲಂಡನ್‌ಗೆ ಹೋಗಬೇಕು ಅಂತ ತುಂಬ ಅತ್ತಿದ್ದೆ, ನನ್ನ ಅಮ್ಮ ಸಮಾಧಾನ ಮಾಡುತ್ತಿದ್ದರು. ಲಂಡನ್‌ನಲ್ಲಿಯೇ ಸೆಟಲ್ ಆಗೋದಿಲ್ಲ, ಮತ್ತೆ ಇಲ್ಲಿಗೆ ಬರ್ತೀಯಾ ಅಂತ ಅಮ್ಮ ಹೇಳುತ್ತಿದ್ದರು. ರಾಕೇಶ್‌ ಅವರ ಕೆಲಸ ಮುಗಿಯುವವರೆಗೆ ಮಾತ್ರ ನಾವು ಇಲ್ಲಿ ಇರುತ್ತೇವೆ. ನಾವು ಇಲ್ಲಿ ಹಾಲಿಡೇಗೆ ಬಂದಿದ್ದೇವೆ, ಆದಷ್ಟು ಬೇಗ ಮನೆಗೆ ಬರ್ತೀನಿ ಎನ್ನುವ ತಲೆಯಲ್ಲಿ ಇದ್ದೇನೆ" ಅಂತ ಹೇಳಿಕೊಂಡಿದ್ದಾರೆ.

ಪ್ರಿಯಾಂಕ ಶ್ವಾನಗಳ ಪ್ರಿಯರು ಸಹ ಹೌದು. "ನನ್ನ ಮುದ್ದಿನ ಶ್ವಾನಗಳನ್ನು ತುಂಬ ಮಿಸ್ ಮಾಡಿಕೊಳ್ತೀನಿ. ಅವರನ್ನು ಇಲ್ಲಿ ಕರೆಸಿಕೊಳ್ಳೋಕೆ ತುಂಬ ಫಾರ್ಮಾಲಿಟಿಸ್ ಇದೆ, ಅದಕ್ಕೆ 6 ತಿಂಗಳುಗಳು ಬೇಕು.ನನ್ನ ಗಂಡ ನನಗೆ ಇಲ್ಲಿನ ಸ್ಥಳಗಳನ್ನು ತೋರಿಸುತ್ತಿದ್ದಾರೆ. ಹೊಸ ಜೀವನಕ್ಕೆ ನಾನು ಅಡ್ಜಸ್ಟ್ ಆಗಬೇಕಿದೆ" ಎಂದು ಪ್ರಿಯಾಂಕಾ ಚಿಂಚೋಳಿ ಮಾತನಾಡಿದ್ದಾರೆ. 

ಪ್ರಿಯಾಂಕ ಕೇವಲ ಸೀರಿಯಲ್‌ಗಳಲ್ಲಿ ಮಾತ್ರ ನಟಿಸಿಲ್ಲ. ಸೀರಿಯಲ್‌ನಲ್ಲಿ ನಟಿಸುವುದರ ಜೊತೆಗೆ ಸಿನಿಮಾಗಳಲ್ಲೂ ಸಹ ಅಭಿನಯಿಸಿದ್ದಾರೆ. ಈಕೆ ಬಿಲ್‌ಗೇಟ್ಸ್‌ ಹಾಗು ಕೌಟಿಲ್ಯ ಸಿನಿಮಾಗಳಲ್ಲೂ ಸಹ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ-Bigg Boss Kannada 10: ‘ಡ್ರೋನ್ʼದು ರೆಕ್ಕೆ ಪುಕ್ಕ ಎಲ್ಲಾ ಕಿತ್ತಾಕ್ತೀನಿ’.. vinay 'ಪ್ರತಾಪ'ಕ್ಕೆ ಕಣ್ಣೀರಟ್ಟ ಪ್ರತಾಪ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News