ಸರ್ವ ರೋಗಕ್ಕೂ ಮದ್ದು ಮನೆಯ ಮುಂದೆಯೇ ಸಿಗುವ ಈ ಹಣ್ಣು! ಮಧುಮೇಹದಿಂದ ಹಿಡಿದು ತೂಕ ಕಡಿಮೆ ಮಾಡುವುದರವರೆಗೂ ಇದೇ ದಿವ್ಯ ಔಷಧ!

Blood Sugar Control Fruit: ಪಪ್ಪಾಯಿ ರುಚಿಕರವಾಗಿರುವುದರ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.. ಈ ಹಣ್ಣು ತೂಕ ಇಳಿಸಲು ಮತ್ತು ಮಧುಮೇಹವನ್ನು ಕಡಿಮೆಮಾಡಲು ಸಹಕಾರಿಯಾಗುತ್ತೆ ಎನ್ನುವುದು ನಿಮಗೆ ಗೊತ್ತೆ?
 

1 /7

 ಪಪ್ಪಾಯಿಯು ತುಂಬಾ ರುಚಿಕರವಾದ ಹಣ್ಣಾಗಿದ್ದು, ಇದರಲ್ಲಿ ಹಲವು ವಿಟಮಿನ್ ಗಳು ಮತ್ತು ಖನಿಜಾಂಶಗಳಿವೆ.. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ತುಂಬಾ ಪ್ರಯೋಜನಕಾರಿ.    

2 /7

ಪಪ್ಪಾಯಿಯು ತುಂಬಾ ರುಚಿಕರವಾದ ಮತ್ತು ರಸಭರಿತವಾದ ಹಣ್ಣಾಗಿದ್ದು, ಇದು ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಪೋಷಕಾಂಶಗಳು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.   

3 /7

ಅಷ್ಟೇ ಅಲ್ಲ, ಪಪ್ಪಾಯಿ ಸೇವನೆಯು ತ್ವಚೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆಗುವ ಲಾಭಗಳೇನು ಎಂದು ಇದೀಗ ತಿಳಿಯೋಣ.   

4 /7

ಪಪ್ಪಾಯಿಯು ಪಪೈನ್ ಅಂಶವನ್ನು ಹೊಂದಿದ್ದು.. ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಹಣ್ಣು ನೈಸರ್ಗಿಕ ವಿರೇಚಕವಾಗಿದ್ದು.. ಇದು ಮಲಬದ್ಧತೆಯನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಕರುಳಿನ ಚಲನವಲನ ಉತ್ತಮಗೊಂಡು ಊತದ ಸಮಸ್ಯೆ ಬರುವುದಿಲ್ಲ...   

5 /7

ಪಪ್ಪಾಯಿಯು ವಿಟಮಿನ್-ಸಿ ಮತ್ತು ಆಂಟಿ-ಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದ್ದು.. ಇದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ.. ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.. ಇದರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ. ಹೀಗಾಗಿ ಪಪ್ಪಾಯಿ ತಿನ್ನುವುದು ಆರೋಗ್ಯಕರ ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ..  

6 /7

 ಪಪ್ಪಾಯಿಯಲ್ಲಿರುವ ನಾರಿನಂಶವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಇನ್ನೋಂದು ವಿಶೇಷ ಪ್ರಯೋಜನವೆಂದರೆ ತೂಕ ಹೆಚ್ಚಾಗುವುದನ್ನು ನಿಯಂತ್ರಸುತ್ತದೆ.. ಮತ್ತು ದೇಹದ ಭಾರವನ್ನು ಕಡಿಮೆ ಮಾಡುತ್ತದೆ..

7 /7

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.