ತನ್ನ ಇನ್ಸ್ಟಾಗ್ರಾಮ್ ಅಕೌಂಟ್ ಅನ್ನು ಮೊಟಕುಗೊಳಿಸಿದ ಕಣ್ಸನ್ನೆ ಬೆಡಗಿ

 ತನ್ನ ಚೊಚ್ಚಿಲ ಚಿತ್ರ 'ಒರು ಅದಾರ್ ಲವ್'ನ ಟೀಸರ್ ನಲ್ಲಿ ಕೇವಲ ಕಣ್ಸನ್ನೆ ಮಾಡುವ ಮೂಲಕ ಒಂದೇ ರಾತ್ರಿಯಲ್ಲಿ ಇಂಟರ್ನೆಟ್ ಸೆನ್ಸೇಷನ್ ಆಗಿ ಪ್ರಿಯಾ ಪ್ರಕಾಶ್ ವಾರಿಯರ್ ಹೊರಹೊಮ್ಮಿದ್ದಳು. 

Last Updated : May 18, 2020, 09:19 PM IST
ತನ್ನ ಇನ್ಸ್ಟಾಗ್ರಾಮ್ ಅಕೌಂಟ್ ಅನ್ನು ಮೊಟಕುಗೊಳಿಸಿದ ಕಣ್ಸನ್ನೆ ಬೆಡಗಿ title=

ನವದೆಹಲಿ: ತನ್ನ ಚೊಚ್ಚಿಲ ಚಿತ್ರ 'ಒರು ಅದಾರ್ ಲವ್'ನ ಟೀಸರ್ ನಲ್ಲಿ ಕೇವಲ ಕಣ್ಸನ್ನೆ ಮಾಡುವ ಮೂಲಕ ಒಂದೇ ರಾತ್ರಿಯಲ್ಲಿ ಇಂಟರ್ನೆಟ್ ಸೆನ್ಸೇಷನ್ ಆಗಿ ಪ್ರಿಯಾ ಪ್ರಕಾಶ್ ವಾರಿಯರ್ ಹೊರಹೊಮ್ಮಿದ್ದಳು. ಅಷ್ಟೇ ಅಲ್ಲ ಕೇವಲ ಕ್ಷಣಾರ್ಧದಲ್ಲಿ ಒಂದು ಮಿಲಿಯನ್ ಗೂ ಅಧಿಕ ಅಭಿಮಾನಿಗಳನ್ನು ತನ್ನ ಇನ್ಸ್ಟಾಗ್ರಾಮ್ ಪುಟಕ್ಕೆ ಸೇರಿಸುವಲ್ಲಿ ಆಕೆ ಯಶಸ್ವಿಯಾಗಿದ್ದಳು.

ಆ ಬಳಿಕ ಹಲವಾರು ಬ್ರಾಂಡ್ ಗಳು ಆಕೆಗೆ ಜಾಹೀರಾತುಗಳಿಗಾಗಿ ಆಫರ್ ನೀಡಲು ಆರಂಭಿಸಿದ್ದವು. ಆದರೆ, ರಾತ್ರೋರಾತ್ರಿ ಸಿಕ್ಕ ಈ ಯಶಸ್ಸಿನ ಬಳಿಕ ಪ್ರಿಯಾ ಟ್ರೊಲ್ ಗೂ ಕೂಡ ಗುರಿಯಾಗಿದ್ದಾಳೆ. ಪ್ರಿಯಾ ಮಾಡುವ ಪ್ರತಿಯೊಂದು ಪೋಸ್ಟ್ ಗೆ ಟ್ರೋಲರ್ ಗಳು ಚಿತ್ರ ವಿಚಿತ್ರ ಕಾಮೆಂಟ್ ಗಳನ್ನು ಮಾಡಲಾರಂಭಿಸಿದ್ದರು. ಆದರೆ, ಲಾಕ್ ಡೌನ್ ಮಧ್ಯೆ ಹಲವಾರು ಸೆಲಿಬ್ರಿಟಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯರಾಗಿರುವ ಈ ಪರಿಸ್ಥಿತಿಯಲ್ಲಿ  ಪ್ರಿಯಾ ಪ್ರಕಾಶ್ ವಾರಿಯರ್ ತನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಬಂದ್ ಮಾಡಿದ್ದಾರೆ.

ನಮ್ಮ ಸಹಯೋಗಿ ವೆಬ್ ಸೈಟ್ DNA ಪ್ರಕಟಿಸಿರುವ ವರದಿಯೊಂದರ ಪ್ರಕಾರ ಪ್ರಿಯಾ ಪ್ರಕಾಶ್ ತನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಡಿಆಕ್ಟಿವೇಟ್ ಗೊಳಿಸುವ ನಿರ್ಣಯ ಕೈಗೊಂಡಿದ್ದಾಳೆ ಎಂದು ಅವಳ ತಂದೆ ಮಾಹಿತಿ ನೀಡಿದ್ದಾರೆ. ಸ್ಕ್ರೀನ್ ಟೈಮ್ ನಿಂದ ಬ್ರೇಕ್ ಪಡೆಯಲು ಪ್ರಿಯಾ ಈ ನಿರ್ಣಯ ಕೈಗೊಂಡಿದ್ದು, ಇದು ತಾತ್ಕಾಲಿಕ ನಿರ್ಣಯವಾಗಿರಲಿದೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಪ್ರಿಯಾಗೆ ಸೂಕ್ತವಾದ ಸಮಯಕ್ಕೆ ಆಕೆ ಪುನಃ ಈ ಪ್ಲಾಟ್ ಫಾರಂ ಮೇಲೆ ಮತ್ತೆ ಸಕ್ರೀಯವಾಗಲಿದ್ದಾಳೆ ಎಂದು ಹೇಳಿದ್ದಾರೆ.

ಆದರೆ, ಪ್ರಿಯಾ ಓರ್ವ ಗಂಭೀರ ನಟಿಯಾಗಿ ತನ್ನನ್ನು ತಾನು ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಿಯಾ ತನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರೀಯಗೊಳಿಸಿದ್ದಾಳೆ ಎನ್ನಲಾಗುತ್ತಿದೆ. ಏಕೆಂದರೆ ಜನರು ಆಕೆಗೆ ಕೇವಲ ಓರ್ವ ಇಂಟರ್ನೆಟ್ ಸೆನ್ಸೇಷನ್ ರೂಪದಲ್ಲಿ ಮಾತ್ರ ನೋಡಬಾರದು ಎಂಬುದು ಪ್ರಿಯಾ ಅನಿಸಿಕೆಯಾಗಿದೆ ಎನ್ನಲಾಗುತ್ತಿದೆ. ಆದರೆ. ಹಲವಾರು ಸೆಲಿಬ್ರಿಟಿಗಳು ಕೊರೊನಾ ವೈರಸ್ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯರಾಗುತ್ತಿರುವ ಹಿನ್ನೆಲೆ ಪ್ರಿಯಾ ತೆಗೆದುಕೊಂಡಿರುವ ಈ ನಿರ್ಣಯ ಅವಳ ಅಭಿಮಾನಿಗಳಿಗೂ ಕೂಡ ಪ್ರಶ್ನೆಯಾಗಿಯೇ ಮಾರ್ಪಟ್ಟಿದೆ.

Trending News