ಬೆಂಗಳೂರು: ತಮ್ಮ ಗಾಯನದ ಮೂಲಕ ಪ್ರಪಂಚದಾದ್ಯಂತ ಸಂಗೀತ ಪ್ರೇಮಿಗಳ ಹೃದಯದಲ್ಲಿ ಮನೆಮಾಡಿರುವ ಭಾರತದ ಹೆಮ್ಮೆ, ಸುಪ್ರಸಿದ್ಧ ಹಿನ್ನೆಲೆ ಗಾಯಕ, ಗಾನ ಗಂಧರ್ವ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗಿಂದು ಜನ್ಮ ದಿನದ ಸಂಭ್ರಮ.
ಅಭೂತಪೂರ್ವವಾದ ತಮ್ಮ ಕಂಠಸಿರಿಯ ಮೂಲಕ ಸಂಗೀತ ಪ್ರೇಮಿಗಳ ಹೃದಯ ಸಿಂಹಾಸನದಲ್ಲಿ ಆರಾಧ್ಯದೈವವಾಗಿ ನೆಲೆಸಿರುವ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಜೂನ್ 4, 1946ರಲ್ಲಿ ಆಂಧ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿ ಎಸ್.ಪಿ.ಸಾಂಬವಮೂರ್ತಿ ಹಾಗೂ ಕಮಲೇಶ್ವರಿ ಎಂಬ ಪುತ್ರರಾಗಿ ಜನಿಸಿದರು.
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ 'ಎಸ್‌ಪಿಬಿ' ಅವರು ಹಾಡದೇ ಇರುವ ಶೈಲಿಯೇ ಇಲ್ಲ. ಕಳೆದ ಐದು ದಶಕಗಳಲ್ಲಿ ಡಾ. ಎಸ್‌ಪಿಬಿ ಅವರು 15ಕ್ಕೂ ಹೆಚ್ಚು ಭಾಷೆಗಳಲ್ಲಿ ಚಿತ್ರಗೀತೆ, ಭಕ್ತಿಗೀತೆ, ಭಾವಗೀತೆ, ರಾಷ್ಟ್ರಭಕ್ತಿಗೀತೆ ಹೀಗೆ ವಿವಿಧ ಪ್ರಕಾರಗಳಲ್ಲಿ 50,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ.
ನನ್ನ ಮುಂದಿನ ಜನ್ಮ ಅನ್ನೋದು ಇದ್ದರೆ ಕನ್ನಡನಾಡಲ್ಲೇ ಕನ್ನಡಿಗನಾಗಿ ಹುಟ್ಟಿ ಇವರ ಋಣ ತೀರಿಸುತಿನ್ನಿ ! ಎಂದು ಕನ್ನಡಿಗರ ಮೇಲಿರುವ ತಮ್ಮ ಪ್ರೀತಿಯನ್ನು ಹಂಚಿಕೊಂಡ ಭಾರತ ಸಂಗೀತ ಲೋಕದ ಹಿರಿಮೆಯ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ.
ನನ್ನ ಮುಂದಿನ ಜನ್ಮ ಅನ್ನೋದು ಇದ್ದರೆ ಕನ್ನಡನಾಡಲ್ಲೇ ಕನ್ನಡಿಗನಾಗಿ ಹುಟ್ಟಿ ಇವರ ಋಣ ತೀರಿಸುತಿನ್ನಿ ! ಎಂದು ಕನ್ನಡಿಗರ ಮೇಲಿರುವ ತಮ್ಮ ಪ್ರೀತಿಯನ್ನು ಹಂಚಿಕೊಂಡ ಭಾರತ ಸಂಗೀತ ಲೋಕದ ಹಿರಿಮೆಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂರವರಿಗೆ ಹುಟ್ಟುಹಬ್ಬದ ಶುಭಾಶಯಗಳು. #ZeeKannada #HappyBirthday#SPBalasubrahmanyam pic.twitter.com/xJGz2HfNhN
— Zee Kannada (@ZeeKannada) June 4, 2019
ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ಎಸ್‌ಪಿಬಿ ಅವರ ಜೀವನದ ಬಗ್ಗೆ ಒಂದಿಷ್ಟು ಮಾಹಿತಿ... ನಮ್ಮ ಜೀ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ತುಣುಕು ನಿಮಗಾಗಿ