ಕುಟುಂಬಕ್ಕೆ ಹೊಸ ಅತಿಥಿ ನಿರೀಕ್ಷೆಯಲ್ಲಿ ಯಶ್-ರಾಧಿಕಾ ದಂಪತಿ!

ರಾಕಿಂಗ್ ಸ್ಟಾರ್ ಯಶ್ ಅವರು ತಾವು ತಂದೆಯಾಗುತ್ತಿರುವ ಬಗ್ಗೆ ಫೇಸ್ಬುಕ್ ನಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.

Divyashree K Divyashree K | Updated: Jul 25, 2018 , 02:10 PM IST
ಕುಟುಂಬಕ್ಕೆ ಹೊಸ ಅತಿಥಿ ನಿರೀಕ್ಷೆಯಲ್ಲಿ ಯಶ್-ರಾಧಿಕಾ ದಂಪತಿ!

ಬೆಂಗಳೂರು: ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದರೆ, ಯಶ್ ಸದ್ಯ ವೈಜಿಎಫ್ ಗುಂಗಿನಲ್ಲಿದ್ದಾರೆ. ಇದೇನಪ್ಪ ವೈಜಿಎಫ್ ಅಂತಾ ಯೋಚಿಸ್ತಿದ್ದೀರಾ? 

ರಾಕಿಂಗ್ ಸ್ಟಾರ್ ಯಶ್ ಅವರು ತಾವು ತಂದೆಯಾಗುತ್ತಿರುವ ಬಗ್ಗೆ ಫೇಸ್ಬುಕ್ ನಲ್ಲಿ ಸಂತೋಷ ಹಂಚಿಕೊಂಡಿದ್ದಾರೆ. "ನಾನು ನಿಮ್ಮೊಂದಿಗೆ ಸಂತಸದ ವಿಚಾರವನ್ನು ಹಂಚಿಕೊಳ್ಳಬೇಕೆಂದಿದ್ದೇನೆ. ಏಕೆಂದರೆ ಡಿಸೆಂಬರ್ ನಂಗೆ ತುಂಬಾ ವಿಶೇಷವಾಗಲಿದೆ" ಎಂದು ಹೇಳುವ ಮೂಲಕ ಇದನ್ನು YGF ಎಂದಿರುವ ಯಶ್ "Yash is Going to be Father" ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ರಾಮಾಚಾರಿ ಚಿತ್ರದ ಯಶ್-ರಾಧಿಕಾ ಪೋಟೋ ಹಾಕಿ Mr & Mrs Expecting ಸಂತಸ ಹಂಚಿಕೊಂಡಿದ್ದಾರೆ. 

ರಾಧಿಕಾ ಪಂಡಿತ್ ಕೂಡ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯ ಆಗಮನದ ಕುರಿತು ತಮ್ಮ ಸಂತಸ ಹಂಚಿಕೊಂಡಿದ್ದು, 'ನಾವೀಗ ಮೂವರು' ಎಂದು ಹೇಳಿದ್ದಾರೆ.

ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ 2016ರ ಡಿಸೆಂಬರ್‌ 9ರಂದು ಯಶ್‌ ಮತ್ತು ರಾಧಿಕಾ ಪಂಡಿತ್‌ ವಿವಾಹ ನೆರವೇರಿತ್ತು. ಅರಮನೆ ಮೈದಾನದಲ್ಲಿ ಯಶ್‌-ರಾಧಿಕಾ ಪಂಡಿತ್‌ರವರ ಆರತಕ್ಷತೆ ಅದ್ಧೂರಿಯಾಗಿ ನಡೆದಿತ್ತು. ಇದೀಗ ಯಶ್-ರಾಧಿಕಾ ನೀಡಿರುವ ಸಿಹಿ ಸುದ್ದಿಗೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಲೈಕ್ ಮತ್ತು ಕಮೆಂಟ್'ಗಳ ಸುರಿಮಳೆಯೇ ಬರುತ್ತಿದೆ.