ಯುವ ಸಿನಿಮಾದ ಟ್ರೇಲರ್ ರಿಲೀಸ್... ಮೊದಲ ಸಿನಿಮಾದಲ್ಲಿಯೇ ದೊಡ್ಮನೆ ಕುಡಿಯ ಮಾಸ್ ಅವತಾರ!

Yuva Movie Trailer: ಮೊದಲ ಸಿನಿಮಾದಲ್ಲಿಯೇ ದೊಡ್ಮನೆ ಕುಡಿಯ ಮಾಸ್ ಅವತಾರವನ್ನು ಇಲ್ಲಿ ಕಾಣಬಹುದು. ಸಖತ್ ಸ್ಟೈಲಿಷ್ ಆಗಿ ಕ್ಯಾಚಿಂಗ್ ಅವತಾರದಲ್ಲಿ ಕಾಣಿಸಿಕೊಂಡಿರುವ ಯುವ ರಾಜ್ ಕುಮಾರ್ ತಮ್ಮ ಲುಕ್ ನಿಂದಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ. 

Written by - YASHODHA POOJARI | Last Updated : Mar 22, 2024, 12:07 PM IST
  • ಯುವ ರಾಜ್ ಕುಮಾರ್ ಅವರ ಸಖತ್ ಆ್ಯಕ್ಷನ್ ರಿವೀಲ್ ಮಾಡಿರುವ ಈ ಒಂದು ಟ್ರೈಲರ್ ಅವರಲ್ಲಿ ಮಾಸ್ ಹೀರೋ ಆಗುವ ಎಲಿಮೆಂಟ್ಸ್ ಇದೆ ಎನ್ನುವುದನ್ನು ರಿವೀಲ್ ಮಾಡಿದೆ.
  • ಇದು ಕಾಲೇಜು ಹಿನ್ನೆಲೆಯಲ್ಲಿಯೇ ಮಾಡಿರುವ ಸ್ಟೋರಿಯಾಗಿದ್ದರೂ ಮಾಸ್ ಎಲಿಮೆಂಟ್ಸ್ ಸೇರಿಸಿರುವುದು ಸಖತ್ ಆಗಿದೆ.
  • ಕಾಲೇಜು-ಮಾಸ್-ಲವ್ ಎಲಿಮೆಂಟ್ಸ್ ಇರುವಂತಹ ಟ್ರೈಲರ್ ನ್ನು ಚಿತ್ರತಂಡ ಹೊರಬಿಟ್ಟಿದೆ.
ಯುವ ಸಿನಿಮಾದ ಟ್ರೇಲರ್ ರಿಲೀಸ್... ಮೊದಲ ಸಿನಿಮಾದಲ್ಲಿಯೇ ದೊಡ್ಮನೆ ಕುಡಿಯ ಮಾಸ್ ಅವತಾರ! title=

Yuva Movie Trailer: ಬಹುನಿರೀಕ್ಷೆಯ ಯುವ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಸಖತ್ ಸೌಂಡ್ ಮಾಡುತ್ತಿದೆ. ಹಾಡುಗಳು ಮತ್ತು ಟೀಸರ್ ನಿಂದಲೇ ಸೌಂಡ್ ಮಾಡಿದ್ದ ಸಿನಿಮಾ ಇದೀಗ ಭರ್ಜರಿ ಟ್ರೀಲರ್ ಮೂಲಕ ಜನಮನಸೂರೆಗೊಂಡಿದೆ. 

ಮೊದಲ ಸಿನಿಮಾದಲ್ಲಿಯೇ ದೊಡ್ಮನೆ ಕುಡಿಯ ಮಾಸ್ ಅವತಾರವನ್ನು ಇಲ್ಲಿ ಕಾಣಬಹುದು. ಸಖತ್ ಸ್ಟೈಲಿಷ್ ಆಗಿ ಕ್ಯಾಚಿಂಗ್ ಅವತಾರದಲ್ಲಿ ಕಾಣಿಸಿಕೊಂಡಿರುವ ಯುವ ರಾಜ್ ಕುಮಾರ್ ತಮ್ಮ ಲುಕ್ ನಿಂದಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ. 

ಯುವ ರಾಜ್ ಕುಮಾರ್ ಅವರ ಸಖತ್ ಆ್ಯಕ್ಷನ್ ರಿವೀಲ್ ಮಾಡಿರುವ ಈ ಒಂದು ಟ್ರೈಲರ್ ಅವರಲ್ಲಿ ಮಾಸ್ ಹೀರೋ ಆಗುವ ಎಲಿಮೆಂಟ್ಸ್ ಇದೆ ಎನ್ನುವುದನ್ನು ರಿವೀಲ್ ಮಾಡಿದೆ. ಇದು ಕಾಲೇಜು ಹಿನ್ನೆಲೆಯಲ್ಲಿಯೇ ಮಾಡಿರುವ ಸ್ಟೋರಿಯಾಗಿದ್ದರೂ ಮಾಸ್ ಎಲಿಮೆಂಟ್ಸ್ ಸೇರಿಸಿರುವುದು ಸಖತ್ ಆಗಿದೆ. ಕಾಲೇಜು-ಮಾಸ್-ಲವ್ ಎಲಿಮೆಂಟ್ಸ್ ಇರುವಂತಹ ಟ್ರೈಲರ್ ನ್ನು ಚಿತ್ರತಂಡ  ಹೊರಬಿಟ್ಟಿದೆ.

ಇದನ್ನೂ ಓದಿ- ಲವ್ಲಿ ಸ್ಟಾರ್ ಜೊತೆ ಮಾನ್ವಿತಾ ಧಮಾಕ…ಅಪ್ಪಾ ಐ ಲವ್ ಯೂ ಬಿಡುಗಡೆಗೆ ಫಿಕ್ಸ್ ಆಯ್ತು ದಿನಾಂಕ..!

ಟ್ರೈಲರ್ ನೋಡಿದರೆ ಯುವ ರಾಜ್ ಕುಮಾರ್ ಅವರನ್ನು ಕಾಲೇಜ್ ಯಂಗ್ ಬಾಯ್, ಮಾಸ್ ಹೀರೋ, ರೊಮ್ಯಾಂಟಿಕ್ ಲವರ್ ಬಾಯ್ ಆಗಿ ನೋಡುವ ಎಲ್ಲಾ ಆ್ಯಂಗಲ್ ಸಿಗಲಿದೆ ಎನ್ನುವುದಂತೂ ಖಚಿತವಾಗಿದೆ. 

ಯುವ ಸಿನಿಮಾದ ನಿರೀಕ್ಷೆ ಟೈಟಲ್ ಅನೌನ್ಸ್ ಆದಾಗಿನಿಂದಲೂ ಹೆಚ್ಚುತ್ತಲೇ ಇತ್ತು. ಮೊದಲ ಪ್ರಯತ್ನದಲ್ಲಿಯೇ ಒಳ್ಳೆ ಚಿತ್ರ ಕೊಡುವ ಜವಾಬ್ದಾರಿ ಕೂಡ ನಾಯಕ ಯುವರಾಜಕುಮಾರ್ ಅವರ ಮೇಲಿತ್ತು. ಟೈಟಲ್ ಟೀಸರ್ ಮೂಲಕ ಭರವಸೆ ಮೂಡಿಸಿದ್ದ ಯುವ ರಾಜ್ ಕುಮಾರ್ ಅವರು ಪ್ರಾಮಿಸಿಂಗ್ ಟ್ರೈಲರ್ ಕೊಟ್ಟಿದ್ದಾರೆ. ಈ ಮೂಲಕ ಸಿನಿಮಾ ನಿರೀಕ್ಷೆಯಲ್ಲಿರುವವರಿಗೆ ನಿರಾಸೆ ಮಾಡಲ್ಲ ಅಂತ ಹೇಳಿದಂತಿದೆ. 

ಯುವ ಸಿನಿಮಾದ ನಿರ್ದೇಶಕರಾಗಿರುವ ಮಾಡ್ತಿರೋ ಸಂತೋಷ್ ಆನಂದ್ ರಾಮ್ ಅವರಿಗೆ ಡಬಲ್ ರೆಸ್ಪಾನ್ಸಿಬ್ಲಿಟಿ ಕೂಡ ಇದೆ. ದೊಡ್ಮನೆ ಹುಡುಗನ ಮೊದಲ ಸಿನಿಮಾಗೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದು ಈಗಾಗಲೇ ರಿಲೀಸ್ ಆಗಿರುವ ಹಾಡುಗಳು ಒಳ್ಳೆಯ ರೆಸ್ಪಾನ್ಸ್ ಪಡೆದಿರುವುದು ಚಿತ್ರತಂಡಕ್ಕೆ ಪಾಸಿಟಿವ್ ಪಾಯಿಂಟ್. 

ಇದನ್ನೂ ಓದಿ- Rakul-Jackky Anniversary: ವಿವಾಹದ ಒಂದು ತಿಂಗಳ ಬಳಿಕವೇ ಪತಿಯೊಂದಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಖ್ಯಾತ ಬಹುಭಾಷಾ ನಟಿ!

ಮೊದಲೇ ಸಿನಿಮಾ ತಂಡ ಹೇಳಿಕೊಂಡಂತೆ, ಯುವ ಸಿನಿಮಾದಲ್ಲಿ ಯುವ ರಾಜಕುಮಾರ್‌ಗೆ ಕಾಂತಾರ ಚೆಲುವೆ ಸಪ್ತಮಿ ಗೌಡ ಜೋಡಿ ಆಗುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಮಾಡುತ್ತಿದ್ದಾರೆ. ಇನ್ನುಳಿದಂತೆ ಸಿನಿಮಾದ ಮೊದಲ ಟೈಟಲ್ ಟೀಸರ್‌ ಮೂರು ಮಿಲಿಯನ್ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಇದೀಗ ಟ್ರೈಲರ್ ಕೂಡಾ ರಿಲೀಸ್ ಆಗಿದ್ದು ಜನರು ಯುವ ಟ್ರೈಲರ್ ಇಷ್ಟಪಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News