Rakul-Jackky Anniversary: ವಿವಾಹದ ಒಂದು ತಿಂಗಳ ಬಳಿಕವೇ ಪತಿಯೊಂದಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಖ್ಯಾತ ಬಹುಭಾಷಾ ನಟಿ!

Rakul Preet Singh-Jackky Bhagnani Anniversary: ಖ್ಯಾತ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಕಳೆದ ತಿಂಗಳು ಅಂದರೆ, ಫೆಬ್ರವರಿ 21, 2024 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ. ಇಂದು ಅವರ ಮದುವೆಗೆ ಒಂದು ತಿಂಗಳು ಪೂರ್ಣಗಿಒಂದಿದೆ, ದಂಪತಿಗಳಿಬ್ಬರು ಆನ್ನು ತುಂಬಾ ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. (Entertainment News In Kannada)  

Written by - Nitin Tabib | Last Updated : Mar 21, 2024, 09:14 PM IST
  • ಹಂಚಿಕೊಂಡ ಚಿತ್ರದಲ್ಲಿ, ಇಬ್ಬರೂ ತಮ್ಮ ಮದುವೆಯ ಒಂದು ತಿಂಗಳ ಪೂರ್ಣಗೊಂಡ ಸಂಭ್ರಮಾಚರಣೆಯಲ್ಲಿ ತೊಡಗಿರುವುದನ್ನು ನೀವು ನೋಡಬಹುದು.
  • ಈ ಫೋಟೋಗಳನ್ನು ಹಂಚಿಕೊಂಡ ರಾಕುಲ್, 'ಇನ್ನೊಂದು ತಿಂಗಳು ಕಳೆದಿದೆ. ಸಮಯ ಗತಿಸಿದೆ ಮತ್ತು ಜೀವನವೂ ಕಳೆದಿದೆ! ಅದು ಚಂದ್ರ್ರನೆ ಆಗಿರಲಿ ಅಥವಾ ಚಂದ್ರನ ಆಚೆಯೇ ಆಗಲಿ,
  • ನಾನು ನಿನ್ನನ್ನು ಹೀಗೆಯೇ ಪ್ರೀತಿಸುತ್ತಲೇ ಇರುತ್ತೇನೆ. ಜೀವನದುದ್ದಕ್ಕೂ ನಿಮ್ಮ ಈ ನೃತ್ಯ ಮುಂದುವರೆಯಲಿ. #onemonthanniversary@jackybhagnani'. ಎಂದು ಬರೆದುಕೊಂಡಿದ್ದಾಳೆ.
Rakul-Jackky Anniversary: ವಿವಾಹದ ಒಂದು ತಿಂಗಳ ಬಳಿಕವೇ ಪತಿಯೊಂದಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಖ್ಯಾತ ಬಹುಭಾಷಾ ನಟಿ! title=

Rakul Preet Singh Jackky Bhagnani Celebrate One Month Anniversary: ಖ್ಯಾತ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಅವರಿಗೆ ಇಂದಿನ ದಿನ ತುಂಬಾ ವಿಶೇಷವಾಗಿದೆ. ಹೌದು, ಈ ದಿನವನ್ನು ಅವರು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.  ಅದರ ಸುಂದರವಾದ ಫೋಟೋಗಳನ್ನು ಕೂಡ ರಾಕುಲ್ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ, ಅದಕ್ಕೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಾಸ್ತವದಲ್ಲಿ ಅವರ ಮದುವೆಗೆ ಒಂದು ವರ್ಷ ಕಳೆದಿದೆ. 

ಇಂತಹ ಪರಿಸ್ಥಿತಿಯಲ್ಲಿ ಇಬ್ಬರೂ ತಮ್ಮ ಒನ್ ಮಂತ್ ಅನೀವರ್ಸರಿ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ತಿಂಗಳು ಫೆಬ್ರವರಿ 21, 2024 ರಂದು ಗೋವಾದಲ್ಲಿ ನಡೆದ ಸುಂದರ ಸಮಾರಂಭದಲ್ಲಿ ಉಭಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶೇಷ ಕುಟುಂಬ ಸದಸ್ಯರಲ್ಲದೆ, ಕೆಲ ಆಪ್ತರು ಅವರ ಮದುವೆಗೆ ಹಾಜರಾಗಿದ್ದರು. ಇತ್ತೀಚೆಗೆ, ರಾಕುಲ್ ತನ್ನ ಪತಿ ಜಾಕಿ ಜೊತೆಗಿನ ಸುಂದರವಾದ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ, ಅದು ಎಲ್ಲರ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿತ್ತು.

ಇದನ್ನೂ ಓದಿ-Sangeetha Bhat: ಬೋಲ್ಡ್‌ ಅವತಾರದಲ್ಲಿ ಪಡ್ಡೆ ಹುಡುಗರ ನಿದ್ರೆಗೆಡಿಸಿದ ಸಂಗೀತಾ!!

ರಾಕುಲ್-ಜಾಕಿ ಮದುವೆಗೆ ಒಂದು ತಿಂಗಳು ಪೂರ್ಣಗೊಂಡಿದೆ
ಹಂಚಿಕೊಂಡ ಚಿತ್ರದಲ್ಲಿ, ಇಬ್ಬರೂ ತಮ್ಮ ಮದುವೆಯ ಒಂದು ತಿಂಗಳ ಪೂರ್ಣಗೊಂಡ ಸಂಭ್ರಮಾಚರಣೆಯಲ್ಲಿ ತೊಡಗಿರುವುದನ್ನು ನೀವು ನೋಡಬಹುದು. ಈ ಫೋಟೋಗಳನ್ನು ಹಂಚಿಕೊಂಡ ರಾಕುಲ್, 'ಇನ್ನೊಂದು ತಿಂಗಳು ಕಳೆದಿದೆ. ಸಮಯ ಗತಿಸಿದೆ ಮತ್ತು ಜೀವನವೂ ಕಳೆದಿದೆ! ಅದು ಚಂದ್ರ್ರನೆ ಆಗಿರಲಿ ಅಥವಾ ಚಂದ್ರನ ಆಚೆಯೇ ಆಗಲಿ, ನಾನು ನಿನ್ನನ್ನು ಹೀಗೆಯೇ ಪ್ರೀತಿಸುತ್ತಲೇ ಇರುತ್ತೇನೆ. ಜೀವನದುದ್ದಕ್ಕೂ ನಿಮ್ಮ ಈ ನೃತ್ಯ ಮುಂದುವರೆಯಲಿ. #onemonthanniversary@jackybhagnani'. ಎಂದು ಬರೆದುಕೊಂಡಿದ್ದಾಳೆ.  ಈ ಫೋಟೋಗೆ ಸಾಕಷ್ಟು ಲೈಕ್ ಗಳು ಕೂಡ ಬರುತ್ತಿವೆ. ಇದಲ್ಲದೆ  ಅಭಿಮಾನಿಗಳು ಕಾಮೆಂಟ್ ಮೂಲಕ ಇಬ್ಬರನ್ನೂ ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ-Yuva Trailer: ʻಯುವʼ ಟ್ರೇಲರ್‌ ಔಟ್!‌ ರಗಡ್‌ ಅವತಾರದಲ್ಲಿ ಯುವ ರಾಜ್​ಕುಮಾರ್!

ಜಾಕಿ ಕೂಡ ವಿಡಿಯೋ ಹಂಚಿಕೊಂಡು ಸಂಭ್ರಮಿಸಿದ್ದಾರೆ
ರಾಕುಲ ಅಷ್ಟೇ ಅಲ್ಲ ಜಾಕಿ ಕೂಡ ತಮ್ಮ ವಿವಾಹದ ಒಂದು ವಿಡಿಯೋ ತುಣುಕನ್ನು ಹಂಚಿಕೊಂಡು ಹಿಂದಿ ಭಾಷೆಯ ಕವಿಯಂತೆ ಮುದ್ದಾದ ಕ್ಯಾಪ್ಶನ ಬರೆದಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Rakul Singh (@rakulpreet)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News