Yuva Rajkumar new movie : ಸ್ಯಾಂಡಲ್ವುಡ್ನಲ್ಲಿ ಹೊಸದೊಂದು ಪರ್ವ ಶುರುವಾಗಿದೆ. ಅಣ್ಣಾವ್ರ ಮೊಮ್ಮಗ ರಾಘಣ್ಣನ ಮಗ ಯುವರಾಜ್ ಅದ್ದೂರಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಕಾಕಾತಾಳಿಯ ಅಂದ್ರೆ ಅಪ್ಪು ಹಾದಿಯಲ್ಲೇ ಯುವ ಸಿನಿಮಾ ಬದುಕು ಸಾಗ್ತಿದ್ದು, ಅಪ್ಪು ಉತ್ತರಾಧಿಕಾರಿಯಾಗುವ ಸೂಚನೆ ಕೊಟ್ಟಿದ್ದಾರೆ. ಇದೆಲ್ಲ ಪವರ್ ಸ್ಟಾರ್ ಆಶಿರ್ವಾದ ಅಂತಿದ್ದಾರೆ ದೊಡ್ಮನೆ ಅಭಿಮಾನಿ ದೇವರುಗಳು.
2002 ರಲ್ಲಿ ಪವರ್ ಸ್ಟಾರ್ ಎಂಬ ಮಿಂಚು ಅಪ್ಪು ಅವತಾರದಲ್ಲಿ ಬೆಳ್ಳಿ ತೆರೆ ಬೆಳಗಿಸಿತ್ತು. ಬಾಲನಟನಾಗಿ ಪುನೀತ್ ರಾಜ್ ಕುಮಾರ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ರು. ಅಪ್ಪು ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ಪವರ್ ಸ್ಟಾರ್ ಆದ್ರು. ಅಂದು ಶಿವಣ್ಣನ ತನಗೆ ಹೇಳಿದ್ದ ಕತೆಯನ್ನ ಈ ಚಿತ್ರವನ್ನ ನನ್ನ ತಮ್ಮ ಮಾಡಿದ್ರೆ ಚೆನ್ನಾಗಿರುತ್ತೆ. ಅವನನ್ನು ನಾವು ಮನೆಯಲ್ಲಿ ಅಪ್ಪು ಎಂದು ಕರಿತೀವಿ ಅದ್ರಿಂದ ಚಿತ್ರಕ್ಕೆ ಅಪ್ಪು ಎಂಬ ಟೈಟಲ್ ಫಿಕ್ಸ್ ಮಾಡಿ ಅಂತ ಶಿವಣ್ಣ ಸಲಹೆ ಕೊಟ್ಟಿದ್ರು. ಅದೇ ರೀತಿ ಚಿತ್ರಕ್ಕೆ ಅಪ್ಪು ಎಂದು ಹೆಸರಿಟ್ಟು ಚಿತ್ರ ಮಾಡಿದ್ರು. ಆ ಚಿತ್ರ ಹೊಸ ದಾಖಲೆ ಬರೆದು ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪ್ರೀತಿಯ ಅಪ್ಪು ಆಗುವಂತೆ ಮಾಡಿತ್ತು.
ಈಗ ಅದೇ ರೀತಿ ರಾಘಣ್ಣನ ಪುತ್ರ ಯುವರಾಜ್ ಕೂಡ ಅಪ್ಪು ಹಾದಿಯಲ್ಲೇ ಸಾಗುವ ಸೂಚನೆ ಸಿಕ್ಕಿದೆ ಅಂದ್ರೆ ತಪ್ಪಲ್ಲ. ಯಾಕಂದ್ರೆ ಅಂದು ಅಣ್ಣಾವ್ರ ಮನೆಯವರು ಪುನೀತ್ ರಾಜ್ ಕುಮಾರ್ ಅವರಿಗೆ ಮೊದಲು ಲೋಹಿತ್ ಅಂತ ಹೆಸರಿಟ್ರಿದ್ರು. ನಂತರ ಹೆಸರನ್ನು ಪುನೀತ್ ರಾಜ್ಕುಮಾರ್ ಅಂತ ಚೇಂಜ್ ಮಾಡಿದ್ರು, ಮನೆಯಲ್ಲಿ ಪ್ರೀತಿಯಿಂದ 'ಅಪ್ಪು"ಅಂತ ಕರಿತಿದ್ರು.. ಅಲ್ಲದೆ ಪುನೀತ್ ರಾಜ್ ಕುಮಾರ್ ಮೊದಲ ಚಿತ್ರಕ್ಕೆ ಅಪ್ಪು ಎಂಬ ಟೈಟಲ್ ನಲ್ಲೇ ಸಿನಿಮಾ ಮಾಡಿದ್ರು. ನಂತ್ರ ನಡೆದ ಇತಿಹಾಸ ನಮ್ ಕಣ್ಮುಂದೆ ಇದೇ. ಈಗ ಅದೇ ರೀತಿ ರಾಘಣ್ಣನ ಮಗನ ಸಿನಿ ಜರ್ನಿ ಕೂಡ ಅಪ್ಪು ಸಿನಿಮಾ ಬದುಕಿಗೆ ಬಹಳ ಹತ್ತಿರವಾಗಿದೆ.
ರಾಘಣ್ಣನ ಕಿರಿಯ ಪುತ್ರ ಯುವರಾಜ್ ಕುಮಾರ್ಗೆ ಮೊದಲು ಗುರುರಾಜ್ ಅಂತ ನಾಮಕರಣ ಮಾಡಿದ್ರು. ನಂತ್ರ ಆ ಹೆಸರನ್ನು ಬದಲಿಸಿ ಯುವರಾಜ್ ಕುಮಾರ್ ಅಂತ ಮರುನಾಮಕರಣ ಮಾಡಿದ್ರು. ಮನೆಯಲ್ಲಿ ಗುರುರಾಜ್ ನ ಪ್ರೀತಿಯಿಂದ "ಯುವ" ಅಂತಾನೆ ಕರಿತಿದ್ರು. ಅಲ್ಲದೆ ಈಗ ಯುವರಾಜ್ ಮೊದಲ ಚಿತ್ರಕ್ಕೆ
"ಯುವ" ಅನ್ನೋ ಟೈಟಲ್ ಫಿಕ್ಸ್ ಆಗಿದ್ದು, ಆ ಟೈಟಲ್ ಅನ್ನು ಸಂತೋಷ್ ಆನಂದ್ ರಾಮ್ ಗೆ ಸಜೆಸ್ಟ್ ಮಾಡಿದ್ದೆ ದೊಡ್ಮನೆಯವ್ರು ಅನ್ನೋ ಇಂಟ್ರೆಸ್ಟಿಂಗ್ ವಿಷ್ಯ ಜೀ ಕನ್ನಡ ನ್ಯೂಸ್ ಗೆ ಸಿಕ್ಕಿದೆ. ಇದಲ್ಲದೆ ಅಂದು ಶಿವಣ್ಣನಿಗಾಗಿ ರೆಡಿಯಾಗಿದ್ದ ಕತೆಯಲ್ಲಿ ಅಪ್ಪು ನಟಿಸಿದ್ರು. ಇಂದು ಪವರ್ ಸ್ಟಾರ್ ಗಾಗಿ ರೆಡಿಯಾಗಿದ್ದ ಕತೆಯಲ್ಲಿ ಯುವರಾಜ್ ಮೊದಲ ಸಿನಿಮಾ ಸಿದ್ದವಾಗ್ತಿದೆ.
ಇದನ್ನೂ ಓದಿ:Hrithik Roshan:ಪಕ್ಕಾ ಫಿಕ್ಸ್ ಹೃತಿಕ್ ರೋಷನ್ ಎರಡನೇ ಮದುವೆ !
ಇದಲ್ಲದೆ ಕಾಕತಾಳಿಯ ಎಂಬಂತೆ ಅಂದು ಅಪ್ಪು ವದುವೆ ನಂತರ ನಾಯಕನಾಗಿ ಬಣ್ಣ ಹಚ್ಚಿದ್ರು. ಅದೇ ರೀತಿ ಯುವ ಕೂಡ ಸಪ್ತಪದಿ ತುಳಿದ ನಂತ್ರ ಬಣ್ಣದ ಬದುಕಿಗೆ ಬಲಗಾಲಿಡ್ತಿದ್ದಾರೆ. ಇದನ್ನೆಲ್ಲ ಗಮನಿಸಿರೋ ಪವರ್ ಫ್ಯಾನ್ಸ್ ಗಳು ಯುವರಾಜ್ ಅಪ್ಪು ಹಾದಿಯಲ್ಲಿ ಸಾಗ್ತಿರೋದ್ರಲ್ಲಿ ಡೌಟ್ ಇಲ್ಲ. ಇಂದಿನಿಂದ ಯುವ ಹವಾ ಶುರು. ಅಪ್ಪು ಉತ್ತರಾಧಿಕಾರಿಯಾಗಿ ದರ್ಬಾರ್ ಮಾಡೊದ್ರಲ್ಲಿ ಅನುಮಾನವೇ ಇಲ್ಲ ಅಂತಿದ್ದಾರೆ.. ಅದಕ್ಕೆ ಪೂರಕವಾಗಿ ಯುವರಾಜ್ ಮೊದಲ ಚಿತ್ರದ ಟೈಟಲ್ "ಯುವ" ಅಂತ ಇದ್ರೆ ಅದಕ್ಕೆ ಸಬ್ ಟೈಟಲ್ ಆಗಿ "ದಿ ಪವರ್" ಅಂತ ಫಿಕ್ಸ್ ಮಾಡಿದ್ದು, ಯುವ ಜೊತೆಯಲ್ಲೇ ಪವರ್ ಸ್ಟಾರ್ ಇರುವ ಸೂಚನೆ ಸಿಕ್ಕಿದೆ ಅಂತ ದೊಡ್ಮನೆ ಅಭಿಮಾನಿಗಳು ಭಾವುಕರಾಗ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.