bhoomige banda bhagavantha : ಕನ್ನಡ ಕಿರುತೆರೆಯಲ್ಲಿ ಹೊಸದೊಂದು ಸಂಚಲನ ಸೃಷ್ಟಿಸಿರುವ ಧಾರಾವಾಹಿ "ಭೂಮಿಗೆ ಬಂದ ಭಗವಂತ". ಖ್ಯಾತ ನಿರ್ದೇಶಕ ಆರೂರು ಜಗದೀಶ್ ಸಾರಥ್ಯದ ಈ ಧಾರಾವಾಹಿ ಇದೀಗ ಅದರ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿದೆ.
ಕನ್ನಡದ ಜನಪ್ರಿಯ ವಾಹಿನಿ, ಎಲ್ಲರ ಮನೆಮಾತಾಗಿರುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರತಿ ಯೊಬ್ಬರ ಮನ ಮುಟ್ಟಿತ್ತು. ಇತ್ತೀಚಿಗೆ ವೀಕೆಂಡ್ ವಿತ್ ರಮೇಶ್ ಮತ್ತೇ ಬರ್ತಿದೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಇದೀಗ ವಾಹಿನಿ ಅಧಿಕೃತ ಘೋಷಣೆ ಮಾಡಿದೆ. ವೀಕೆಂಡ್ ವಿತ್ ರಮೇಶ್ ಸೀಸನ್-5 ಬಹುನಿರೀಕ್ಷೆಯ ಟೆಲಿವಿಷನ್ ಶೋ ಕಿರುತೆರೆ ಮೇಲೆ ಮತ್ತೆ ಅಬ್ಬರಿಸಲು ಟೈಮ್ ಫಿಕ್ಸ್ ಆಗಿದೆ..!
Weekend With Ramesh 5: ಬಹುನಿರೀಕ್ಷಿತ ಕನ್ನಡದ ಸಾಧಕರನ್ನು ಕೊಂಡಾಡುವ ಏಕೈಕ ಟಿವಿ ರಿಯಾಲಿಟಿ ಶೋ ವೀಕೆಂಡ್ ವಿಥ್ ರಮೇಶ್. ಹಲವು ಸಾಧಕರನ್ನು ಅರಸಿ ಆರಿಸಿ ತಂದು ಸಾಮಾನ್ಯ ವ್ಯಕ್ತಿ ಸಾಧಕನಾದ ಕತೆಯನ್ನು ಜನರಿಗೆ ಹೇಳುವ ಟಿವಿ ಶೋ. ಜೀವನದ ಬಂಡಿ ಸಾಗಿಸುತ್ತ ಬೆಟ್ಟದಂತಹ ಸಾಧನೆ ಶಿಖರವೇರುವ ಕನಸು ಹೊತ್ತ ಅದೆಷ್ಟೋ ಜನರಿಗೆ ಈ ಶೋ ಸ್ಫೂರ್ತಿ ನೀಡುತ್ತದೆ.
Comedy Khiladigalu 4 : ವಿಭಿನ್ನತೆಗೆ ಹೆಸರಾದಂತ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಾಮಿಡಿ ಕಿಲಾಡಿಗಳು ಸಹ ಒಂದು. ನಿತ್ಯದ ಜಂಜಾಟದಲ್ಲಿ ಒದ್ದಾಡುವ ಅದೆಷ್ಟೋ ಮನಸ್ಸುಗಳಿಗೆ ಹಾಸ್ಯದ ಮೂಲಕ ಸಾಂತ್ವಾನದ ಕಚಗುಳಿಯನ್ನಿಡುವ ಉದ್ದೇಶದಿಂದ ಹುಟ್ಟಿಕೊಂಡ ಮಹಾವೇದಿಕೆ ಕಾಮಿಡಿ ಕಿಲಾಡಿಗಳು "ಸೈಡ್ಗಿಡ್ರಿ ನಿಮ್ ಟೆನ್ಶನ್‌ಗಳು, ಮತ್ತೇ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು" ಅನ್ನೋ ಸ್ಲೋಗನ್ ಮೂಲಕ ವಾರಾಂತ್ಯದಲ್ಲಿ ಕರುನಾಡನ್ನೇ ನಗೆಗಡಲಲ್ಲಿ ತೇಲಿಸಿ, ಕನ್ನಡಿಗರ ಹೃದಯದಲ್ಲಿ ಪ್ರೀತಿಯ ಸ್ಥಾನ ಗಳಿಸಿಕೊಂಡ ಕೀರ್ತಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಸಲ್ಲುತ್ತದೆ.
ಪ್ರತಿ ಸೀಸನ್ನಿನ ವಾಡಿಕೆಯಂತೆ ಕರ್ನಾಟಕದ 31 ಜಿಲ್ಲೆಗಳಿಗೆ ಹೋಗಿ, 60 ಸಾವಿರಕ್ಕು ಹೆಚ್ಚು ಪ್ರತಿಭೆಗಳನ್ನ ಆಡಿಷನ್ ಮಾಡಿ, ಅವರಲ್ಲಿ ಅತ್ಯುತ್ತಮರಾದಂತ 16 ಹಾಸ್ಯ ರತ್ನಗಳನ್ನ ನಮ್ಮ ತ್ರಿವಳಿ ತೀರ್ಪುಗಾರರು ಮೆಗಾ ಆಡಿಷನ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿ ವೇದಿಕೆಗೆ ಪ್ರೀತಿಯ ಸ್ವಾಗತ ಕೋರಿದರು.
Zee Kannada Reality Show : ಕಿರುತೆರೆಯಲ್ಲಿ ಜನ ಮನವನ್ನ ಸದಾ ರಂಜಿಸುತ್ತಿರುವ ಜೀ ಕನ್ನಡ ವಾಹಿನಿ ವಿಭಿನ್ನ ಮನರಂಜಿತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ರಾಜ್ಯದೆಲ್ಲೆಡೆ ಮನೆ ಮಾತಾಗಿರುವ ಜೀ ಕನ್ನಡ ಇದೀಗ ನಿಮ್ಮನ್ನು ರಂಜಿಸಲು ಛೋಟಾ ಚಾಂಪಿಯನ್, ಡಿಕೆಡಿ ಹಾಗೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಗಳನ್ನು ಮರಳಿ ತರುತ್ತಿದ್ದು, ಛೋಟಾ ಚಾಂಪಿಯನ್ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಆಡಿಷನ್ ಆರಂಭವಾಗಲಿದೆ.
ರಾಜ್ಯದ ಜನ ಮನಗೆದ್ದ ಜೀ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ʼವೀಕೆಂಡ್ ವಿತ್ ರಮೇಶ್ʼ ಸೀಸನ್ 5 ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ. ಸಾಧಕರ ಸಾಧನೆಯನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮತ್ತೇ ಜೀ ವಾಹಿನಿ ಮಾಡಲಿದೆ. ಇನ್ಮೇಲೆ ವೀಕೆಂಡ್ ಟೈಮ್‌ನಲ್ಲಿ ಯಾವದೇ ಪ್ಲಾನ್ ಇಟ್ಟುಕೊಳ್ಬೇಡಿ.. ಜಸ್ಟ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡಿ.. ಎಂಜಾಯ್ ಮಾಡಿ.
ಟ್ಯಾಲೆಂಟ್ ಯಾರಪ್ಪನ ಮನೆಯ ಆಸ್ತಿ ಅಲ್ಲ ಎನ್ನುವ ಮಾತು ಎಷ್ಟು ನಿಜ ಅಲ್ವಾ. ನಿಮ್ಮ ಹತ್ರ ಪ್ರತಿಭೆ ಇತ್ತು ಅಂದ್ರೆ ಸಾಧನೆ ಮಾಡುವುದರಿಂದ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಾಧನೆ ಮಾಡಲು ಬಡತನ, ಶ್ರೀಮಂತಿಕೆ ಅಂತ ಭೇದ ಭಾವ ಇಲ್ಲ. ಆತ್ಮ ವಿಶ್ವಾಸ ಬಹಳ ಮುಖ್ಯ ಅಷ್ಟೆ. ಅದೇ ರೀತಿ ಉತ್ತರ ಕರ್ನಾಟಕ ಪ್ರತಿಭೆ ಶಿವಪುತ್ರಪ್ಪ, ಮಲ್ಲು ಜಮಖಂಡಿ ಕೂಡ. ತಮ್ಮದೆ ಶೈಲಿಯಲ್ಲಿ ವಿಡಿಯೋ ಮಾಡಿ ಇಂದು ಖ್ಯಾತಿ ಗಳಿಸಿದ್ದಾರೆ.
ಜನ ಮೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು 4 ಕರ್ನಾಟಕ ಜನತೆಗೆ ನಗುವಿನ ಹಬ್ಬದೂಟ ಉಣ ಬಡಿಸುವ ಒಂದು ಅದ್ಭುತ ಕಾರ್ಯಕ್ರಮ. ನಗುವಿನೊಂದಿಗೆ ಕನ್ನಡನಾಡಿನ ವಿಶೇಷತೆಗಳನ್ನು ಅನಾವಣಗೊಳಿಸುತ್ತದೆ. ಸದ್ಯ ಕಂಪನಿ ನಾಟಕದಲ್ಲಿ ಬರುವ ಪಾತ್ರಧಾರಿಗಳು, ಅಲ್ಲಿ ನಡೆಯುವ ಹಾಸ್ಯ ಸನ್ನಿವೇಶದ ಝಲಕ್‌ನ್ನು ಕಾಮಿಡಿ ಕಿಲಾಡಿಗಳು ಜನರ ಮುಂದೆ ಇಟ್ಟಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನ ಅಗಲಿ ಇಂದಿಗೆ (ಅಕ್ಟೋಬರ್ 29) ಒಂದು ವರ್ಷ. ಸಿನಿಮಾ ಹಾಗೂ ಸಮಾಜ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ವೀರಕನ್ನಡಿಗ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆದರೆ ಹೃದಯಾಘಾತಕ್ಕೆ ಒಳಗಾಗಿ ಕಳೆದ ವರ್ಷ ಅಪ್ಪು ಕೊನೆಯುಸಿರೆಳೆದಿದ್ದರು. ಇಂದು ಅವರ ಪುಣ್ಯ ಸ್ಮರಣೆ. ಪುನೀತ್ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳು ಅವರ ಮೊದಲ ಪುಣ್ಯತಿಥಿಯನ್ನು ಆಚರಿಸಲು ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ , ಇದು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವ ಹೆಸರು. ನಟನೆ , ವ್ಯಕ್ತಿತ್ವ ಮತ್ತು ನಿಸ್ವಾರ್ಥ ಸಮಾಜಮುಖಿ ಸೇವೆಗಳಿಂದ ಜನಮಾನಸದಲ್ಲಿ ಅಚ್ಚಳಿಯದೆ ನೆಲೆಸಿರುವ ಈ ಹಸನ್ಮುಖಿ ನಮ್ಮಲ್ಲೆರನ್ನು ಅಗಲಿ ಇಂದಿಗೆ ಒಂದು ವರ್ಷವೇ ಆಗಿದೆ. ಇಡೀ ಭಾರತೀಯ ಚಿತ್ರರಂಗಕ್ಕೆ ಮರೆಯಲಾಗದಂತ ದುಃಖವಾಗಿ ಪರಿಣಮಿಸಿ ಕಣ್ಣೀರಾಗಿಸಿರುವ ಈ ದೊಡ್ಮನೆ ಕಂದ ಇಂದಿಗೂ ಎಲ್ಲರ ಮನಸಿನಲ್ಲಿ ಮುದ್ದಿನ ಮಗುವಾಗಿದ್ದಾರೆ.
ಕನ್ನಡಿಗರ ಹೆಮ್ಮೆಯ ವಾಹಿನಿ ಜೀ ಕನ್ನಡದಲ್ಲಿ ನಡೆದ ʼಜೀ ಕುಟುಂಬ ಅವಾರ್ಡ್ಸ್-2022ʼ ಕಾರ್ಯಕ್ರಮ ನಟ-ನಟಿಯರ ನಡುವಿನ ಕ್ಯೂಟ್ ಪ್ರಸಂಗಗಳಿಗೆ ಕಾರಣವಾಯ್ತು. ಎಲ್ಲರಿಗೂ ಅರ್ಜುನ್ ಜನ್ಯ ಮತ್ತು ಆಂಕರ್ ಅನುಶ್ರೀ ಅವರ ಲವ್ ಮ್ಯಾಟರ್ ಗೊತ್ತೇ ಇದೆ. ಸದ್ಯ ಅರ್ಜುನ್ ಜನ್ಯ ಅವರು ಅನುಶ್ರೀಗೆ ಮೋಸ ಮಾಡಿ ಮಕ್ಕಳೊಂದಿಗೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು, ಅನುಶ್ರಿಗೆ ನೋವು ತರಿಸಿದೆ.
ಖ್ಯಾತ ನಿರೂಪಕಿ ಅನುಶ್ರೀ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕರ್ನಾಟಕದ ಮನೆ ಮಗಳು ಅನು ಎಲ್ಲರಿಗೂ ಚಿರಪರಿಚಿತ. ಸುಂದರ ಚೆಲುವೆಯ ಮುದ್ದಾದ ಮಾತು ಕೇಳದೆ ಕನ್ನಡಿಗರು ರಾತ್ರಿ ಮಲಗುವುದೇ ಇಲ್ಲ. ಹಾಗೆ, ಅನುಶ್ರೀ ಎಲ್ಲರಿಗೂ ಅಚ್ಚುಮೆಚ್ಚು. ಸದ್ಯ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರೆಬಲ್ ಸ್ಟಾರ್ ಪುತ್ರ ಅಭಿಷೇಕ್ ಇಬ್ಬರೂ ಸೇರಿ ಅನುಶ್ರೀ ಕಾಲೆಳೆದಿದ್ದು ನೋಡಲು ಮಸ್ತ್ ಮಜಾ ನೀಡುತ್ತಿದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಈ ಚಿತ್ರ ಒಂದು ವಿಭಿನ್ನ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಮೂಲಕ ಹೊಸತೊಂದು ಪ್ಯಾಂಟಸಿ ಲೋಕಕ್ಕೆ ಪ್ರೇಕ್ಷಕರನ್ನು ಕರೆದುಕೊಂಡ ಹೋದ ಹೆಗ್ಗಳಿಕೆ ಹೊಂದಿದೆ.
Paaru : "ಕರುಣೆಯ ಪೈರು ನಮ್ಮೀ ಪಾರು" ಎಂದು ಇಡೀ ಕರ್ನಾಟಕವೇ ಒಪ್ಪಿ ಅಪ್ಪಿಕೊಂಡಿರುವ ಮನೆಮಗಳು ಪಾರು. ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ "ಪಾರು" ಧಾರಾವಾಹಿ ಅತ್ಯುತ್ತಮ ತಾರಾಗಣ, ರೋಚಕ ತಿರುವುಗಳ ಅದ್ಭುತ ಕಥೆಯೊಂದಿಗೆ ವೀಕ್ಷಕರನ್ನು ನಿರಂತರವಾಗಿ ರಂಜಿಸುತ್ತಲೇ ಸಾವಿರ ಸಂಚಿಕೆಗಳನ್ನು ಪೂರೈಸುತ್ತಿದೆ.
Drama Juniors Season 4 Grand Finale : ಕನ್ನಡದ ನಂಬರ್ 1 ವಾಹಿನಿಯಾದ ಜೀ ಕನ್ನಡ. ವೀಕ್ಷಕರಿಗೆ ಸದಾಭಿರುಚಿ ನೀಡುವುದರಲ್ಲಿ ಈಗಲೂ ಮುಂಚೂಣಿಯಲ್ಲಿದೆ ದಕ್ಷಿಣ ಭಾರತದ ಮಕ್ಕಳ ಅತಿ ದೊಡ್ಡ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್.
ಇದೀಗ ಈ ಸಿನಿಮಾ ಕನ್ನಡ ಕಿರುತೆರೆಗೆ ಸಿರಿತನವನ್ನು ಪರಿಚಯಿಸಿದ ಕನ್ನಡಿಗರ ನೆಚ್ಚಿನ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡದಲ್ಲಿ ಇದೇ ಆಗಸ್ಟ್ 20 ರಂದು ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ.
Sudeep in Dance Karnataka Dance: ಸದ್ಯ ಎಲ್ಲ ಸಿನಿ ಪ್ರಿಯರೂ, ವಿಕ್ರಾಂತ್ ರೋಣ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ನಡೆದ ಡಾನ್ಸ್ ಕರ್ನಾಟಕ ಡಾನ್ಸ್ ಶೋ ಶೂಟಿಂಗ್ ನಲ್ಲಿ ಸುದೀಪ್ ಭಾಗಿಯಾಗಿದ್ದಾರೆ.
ಕನ್ನಡದ ಬಹು ನಿರೀಕ್ಷಿತ ರಿಯಾಲಿಟಿ ಶೋ ಡ್ರಾಮ ಜೂನಿಯರ್ಸ್‌ಗೆ ಈಗಾಗಲೇ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ..ಈಗಾಗಲೇ ಎಪಿಸೋಡ್‌ಗಳು ಟೆಲಿಕಾಸ್ಟ್ ಆಗಿದ್ದು, ಇದಕ್ಕೆ ಪ್ರೇಕ್ಷಕರಂತು ಫುಲ್ ಥ್ರಿಲ್ ಆಗಿದ್ದಾರೆ.